ಜ.5 ರಿಂದ ಬೀದರ್ ನಲ್ಲಿ 4 ದಿನಗಳ ಕಾಲ ‘ಪಂಚರತ್ನ ರಥಯಾತ್ರೆ’ : ಬಂಡೆಪ್ಪ ಕಾಶೆಂಪುರ್
ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ಮೈತ್ರಿಗೆ ‘ಮೈಂಡ್ ಓಪನ್’ ಇದೆ
Team Udayavani, Jan 2, 2023, 2:59 PM IST
ಬೀದರ್ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ಹಂತದ ‘ಪಂಚರತ್ನ ರಥಯಾತ್ರೆ’ಗೆ ಜ.5 ರಂದು ಬೀದರನಲ್ಲಿ ಚಾಲನೆ ನೀಡಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ್ ಹೇಳಿದರು.
ನ. 18 ರಂದು ಆರಂಭಗೊಂಡಿರುವ ರಥಯಾತ್ರೆ ನ. 30 ರವರೆಗೆ ರಾಜ್ಯದ ೩೮ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ಜ. 5 ರಿಂದ 8 ರವರೆಗೆ ಬೀದರ ಜಿಲ್ಲೆಯಲ್ಲಿ ಸಂಚರಿಸಿ ಆಳಂದ ಮೂಲಕ ಕಲ್ಬುರ್ಗಿ ಜಿಲ್ಲೆಗೆ ತೆರಳಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸೇರಿದಂತೆ ಪ್ರಮುಖ ನಾಯಕರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡುವರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪಂಚ ಸೂತ್ರಗಳೊಂದಿಗೆ ಯಾತ್ರೆಯನ್ನು ನಡೆಸಲಾಗುತ್ತಿದೆ. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವ ನವ ಮಾರ್ಗ- ಮಹಿಳಾ ಸಬಲೀಕರಣ ಹಾಗೂ ವಸತಿಯ ಆಸರೆ ಸೇರಿ ೫ ಉದ್ದೇಶಗಳನ್ನು ಹೊಂದಲಾಗಿದೆ. ಜೆಡಿಎಸ್‌ಗೆ ಪೂರ್ಣ ಬಹುಮತ ನೀಡಿದರೆ ಐದು ವರ್ಷದ ಆಡಳಿತ ಅವಧಿಯಲ್ಲಿ ಪಂಚ ಸೂತ್ರಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ. ಇಲ್ಲವಾದರೆ ಪಕ್ಷಕ್ಕೆ ಬೀಗ ಹಾಕುತ್ತೇವೆ ಎಂಬ ಆಶ್ವಾಸನೆಯನ್ನು ಯಾತ್ರೆ ಮೂಲಕ ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದಾಗಲೆಲ್ಲ ನೀರಾವರಿ ಯೋಜನೆ, ರೈತರ ಸಾಲ ಮನ್ನಾ ಸೇರಿ ಜನಪರ ಕೆಲಸಗಳನ್ನು ಮಾಡಿದೆ. ಕಾಂಗ್ರೆಸ್ ಭಾರತ ಜೋಡೋ ಮತ್ತು ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸಿದ್ದು, ಜನರಿಗೆ ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ. ಆಡಳಿತಾರೂಢ ಬಿಜೆಪಿ ತನ್ನ ಕೆಲಸಗಳ ಮೂಲಕ ಮಾತಾಡಬೇಕಿತ್ತು. ಕೇವಲ ಪರ್ಸಂಟೇಜ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆದರೆ, 2023 ರಲ್ಲಿ ಜನತಾ ದಳಕ್ಕೆ ಪೂರ್ಣ ಬಹುಮತ ನೀಡಿದರೆ ನಾವು ಏನು ಮಾಡುತ್ತೇವೆ ಎಂಬುದನ್ನು ಚುನಾವಣೆಗೆ ಮೊದಲು ಹೇಳುತ್ತಿದ್ದೇವೆ. ಇದು ದೇಶದಲ್ಲೇ ಪ್ರಥಮ ಎನ್ನಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ವಕ್ತಾರ ಅಶೋಕಕುಮಾರ ಕರಂಜಿ, ಪ್ರಮುಖರಾದ ಅಸುದುದ್ದೀನ್, ಮಾರುತಿ ಬೌದ್ಧೆ, ಸಜ್ಜಾದ್, ರಾಜಶೇಖರ ಜವಳೆ ಮತ್ತು ಅಶೋಕ ಕೊಡಗೆ ಮತ್ತಿತರರಿದ್ದರು.
ಪಂಚರತ್ನ ಯಾತ್ರೆ ಸಂಚಾರ
ಬೀದರನಲ್ಲಿ ಜ. ೫ರಂದು ಮಧ್ಯಾಹ್ನ ಜೆಡಿಎಸ್ ಪಂಚರಥ ಯಾತ್ರೆಗೆ ಚಾಲನೆ ಸಿಗಲಿದ್ದು, ಬಳಿಕ ನಗರದಾದ್ಯಂತ ಸಂಚರಿಸಲಿದೆ. ಬಳಿಕ ಸಾಯಂಕಾಲ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಅಲ್ಲಿಂದ ಜನವಾಡಾ ತೆರಳಿ ವಾಸ್ತವ್ಯ ಮಾಡಲಾಗುವುದು. ಜ.6 ರಂದು ಅಮಾಪುರ, ಮನ್ನಳ್ಳಿ, ಬೆಮಳಖೇಡನಲ್ಲಿ ಸಂಚರಿಸಿ, ಮನ್ನಾಎಖ್ಖೆಳ್ಳಿಯಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಿ ನಿರ್ಣಾದಲ್ಲಿ ವಾಸ್ತವ್ಯ ಮಾಡಲಾಗುವುದು. ನ.7 ರಂದು ಹುಮನಾಬಾದ್ ನಲ್ಲಿ ಬಹಿರಂಗ ಸಭೆ, ಗಡಿ ಭಾಗದಲ್ಲಿ ವಾಸ್ತವ್ಯ ಮತ್ತು ನ. ೮ರಂದು ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಮೋರ್ಖಂಡಿಯಲ್ಲಿ ವಾಸ್ತವ್ಯ ಮಾಡಿ ಮರು ದಿನ ಕಲ್ಬುರ್ಗಿಯ ಆಳಂದಕ್ಕೆ ಪ್ರವೇಶಿಸಲಿದೆ.
ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ?
ಬಿಜೆಪಿ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಜತೆಗೆ ಯಾವುದೇ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಆದರೆ, ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ‘ಮೈಂಡ್ ಓಪನ್’ ಇದೆ ಎಂದು ಹೇಳುವ ಮೂಲಕ ಶಾಸಕ ಬಂಡೆಪ್ಪ ಕಾಶೆಂಪುರ್ ಮೈತ್ರಿಯ ಸುಳಿವು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲ. ಪಂಚರಥ ಯಾತ್ರೆ ಹಿನ್ನಲೆ ಜೆಡಿಎಸ್ ಪಕ್ಷ ಪ್ರಬಲವಾಗಿದೆ ಎಂಬುದು ಕೇಂದ್ರ ಸಚಿವ ಅಮಿತ್ ಶಾ ಅರಿತಿದ್ದಾರೆ. ಹಾಗಾಗಿ ಹೆದರಿ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಆಶ್ಚರ್ಯ ಪಡುವಂತೆ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ ಕಾಶೆಂಪುರ್, ರಾಜ್ಯದಲ್ಲಿ ಸಾಕಷ್ಟು ಪ್ರಾದೇಶಿಕ ಪಕ್ಷಗಳು ಬಂದು, ಮುಚ್ಚಿ ಹೋಗಿವೆ. ಜನತಾ ದಳ ಮಾತ್ರ ಗಟ್ಟಿಯಾಗಿ ಉಳಿದಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದಲೂ ನಮಗೆ ಯಾವುದೇ ಸಮಸ್ಯೆ ಆಗದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.