ಧರ್ಮ ಮಾರ್ಗದಲ್ಲಿ ನೆಮ್ಮದಿ ಜೀವನ

Team Udayavani, Nov 13, 2017, 2:23 PM IST

bid-1.jpg

ಭಾಲ್ಕಿ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಸಾರಿಗೆ ಘಟಕದ ಬಳಿಯ ಕಾನಡಾ ಹೋವಿಠಲ ಕರ್ನಾಟಕ ವಾರಕರಿ ಸಂಪ್ರದಾಯ ಟ್ರಸ್ಟ್‌ ವತಿಯಿಂದ ರವಿವಾರ ಆಯೋಜಿಸಿದ್ದ ಸಂತ ಜ್ಞಾನೇಶ್ವರ ಮಂದಿರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ವ್ಯಕ್ತಿ ಒತ್ತಡದ ಬದುಕಿನಲ್ಲಿ ಸಿಲುಕಿದ್ದಾನೆ. ಹಣ, ಆಸ್ತಿ, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾನೆ. ಇದರಿಂದ ಮನುಷ್ಯನಲ್ಲಿ ಸಂಸ್ಕಾರ ಮರೆಯಾಗಿ ಸಮಾಜದಲ್ಲಿ ದುಷ್ಕೃತ್ಯಗಳು ಘಟಿಸುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.  ಸಂಸದ ಭಗವಂತ ಖೂಬಾ ಧ್ವಜ ಪೂಜೆ ನೆರವೇರಿಸಿದ ಮಾತನಾಡಿ, ಸುಂದರ ನವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು, ನೂತನ ದೇಗುಲ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಸಂತ ಜ್ಞಾನೇಶ್ವರ ಅವರು ತಮ್ಮ ಅಗಾಧ ಜ್ಞಾನ ಶಕ್ತಿಯಿಂದ ಭಕ್ತರ ಅಜ್ಞಾನ ಹೋಗಲಾಡಿಸಿದರು. ಅಂತಹ ಮಹಾತ್ಮರ ದೇಗುಲ ನಿರ್ಮಾಣಕ್ಕೆ ದಯಾನಂದ ಸೂರ್ಯವಂಶಿ ಭೂಮಿ ದಾನ ನೀಡಿದ್ದು ಖುಷಿ ತಂದಿದೆ ಎಂದು ಹೇಳಿದರು.

ಕಿಸಾನ ಶಿಕ್ಷಣ ಪ್ರಸಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿದರು. ಹಿರೇಮಠ ಸಂಸ್ಥಾನದ ಪೀಠಾಧಿ ಪತಿ ಗುರುಬಸವ ಪಟ್ಟದ್ದೇವರು, ಗಹನೀನಾಥ ಮಹಾರಾಜ, ಭಾಗವತ ಮಹಾರಾಜ, ಏಕನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ, ಜಿಪಂ ಮಾಜಿ ಅಧ್ಯಕ್ಷ ಮುರಳಿಧರ ಕಾಳೆ, ಬಾಬುರಾವ್‌ ಕಾರಬಾರಿ, ಭೂದಾನಿ ದಯಾನಂದ ಅಶೋಕ ಸೂರ್ಯವಂಶಿ, ಕೇಶವರಾವ್‌ ನಿಟ್ಟೂರಕರ್‌, ರಾಮರಾವ್‌ ವರವಟ್ಟಿಕರ್‌, ವಿಶಾಲಪುರಿ, ರೇಖಾಬಾಯಿ ಅಷ್ಟೂರೆ, ರಾಜಶೇಖರ ಅಷ್ಟೂರೆ, ವಿ.ವಿ.ಪಾಟೀಲ, ದಿಗಂಬರ ಮಾನಕಾರಿ, ಜನಾರ್ಧನ ಬಿರಾದಾರ, ಶರದಚಂದ್ರ ಸಿರ್ಸೆ, ಯಾದವರಾವ್‌ ಕನಸೆ, ಸಂತೋಷ ಖಂಡ್ರೆ, ಕೇಶವರಾವ್‌ ಪವಾರ, ಶಿವಾಜಿರಾವ್‌ ಬಾಬ್ರೆ ಉಪಸ್ಥಿತರಿದ್ದರು. ತೊರಣೇಕರ್‌ ಗುರೂಜಿ ಸ್ವಾಗತಿಸಿದರು. ಅಶೋಕ ರಾಜೋಳೆ ನಿರೂಪಿಸಿದರು. ರತ್ನದೀಪ ಹುಲಸೂರೆ ವಂದಿಸಿದರು.

ಸಂತ ಜ್ಞಾನೇಶ್ವರ ಅವರು ಸತ್ಯ ಶುದ್ಧ ಕಾಯದ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ತಮ್ಮ ಜ್ಞಾನದ ಮೂಲಕ ಮಹಾತ್ಮರ ಕೃತಿಗಳನ್ನು ಎಲ್ಲ ಭಾಷೆಗಳಿಗೆ ಅನುವಾದ ಮಾಡಿ ಮಹಾತ್ಮರ ಸಂದೇಶಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದರು. ಈ ಭಾಗದಲ್ಲಿ ಅಂಥವರ ದೇಗುಲ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು. ಯುವಕರು ಮಹಾತ್ಮರ ಚಿಂತನೆ ಅಳವಡಿಸಿಕೊಳ್ಳುವುದರ ಜತೆಗೆ ನಮ್ಮ ಪೂರ್ವಜರು, ವಾರಿಕ ಸಂಪ್ರದಾಯಸ್ಥರು ತೋರಿದ ಮಾರ್ಗದಲ್ಲಿ ನಡೆಯಬೇಕಾಗಿದೆ.
ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ
 
ಟಾಪ್ ನ್ಯೂಸ್

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Satish Jarkiholi

Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ

‌Bidar: ಗುತ್ತಿಗೆದಾರ ಸಚಿನ್‌ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ

‌Bidar: ಗುತ್ತಿಗೆದಾರ ಸಚಿನ್‌ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

1-wqewqeqwe

Cardiac arrest: ಗುಜರಾತ್‌ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

naksal (2)

Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.