ಜಿಲ್ಲಾದ್ಯಂತ ಶಾಂತಿಯುತ ಮತದಾನ


Team Udayavani, May 13, 2018, 3:03 PM IST

bid-1.jpg

ಬೀದರ: ಕೆಲ ಮತಗಟ್ಟೆಗಳ ಮತಯಂತ್ರದಲ್ಲಿ ತಾಂತ್ರಿಕ ದೋಷ, ಗೊಂದಲ- ಗಲಾಟೆ ಘಟನೆಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಕಂದಾಯ ಗ್ರಾಮ ಘೋಷಣೆಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದ ಭಾಲ್ಕಿ ತಾಲೂಕಿನ ಚಳಕಾಪುರವಾಡಿಯ ಗ್ರಾಮಸ್ಥರು ಸಂಜೆ ವೇಳೆಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 64 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 1,495 ಮತಗಳನ್ನು ಸ್ಥಾಪಿಸಲಾಗಿತ್ತು. 6,87,586 ಪುರುಷರು ಮತ್ತು 6,31,944 ಮಹಿಳೆಯರು ಅಲ್ಲದೇ 68 ಇತರೆ ಸೇರಿದಂತೆ 13,19,598 ಮತದಾರರು ಅರ್ಹರಾಗಿದ್ದರು. ಬೆಳಗ್ಗೆ 7ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆ ವರೆಗೆ ಶಾಂತಿಯುತವಾಗಿ ನಡೆದಿದೆ. ಭಾಲ್ಕಿ ತಾಲೂಕಿನ ಮುರಾಳದಲ್ಲಿ ಮತದಾನ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿವಿಧೆಡೆ ಇವಿಎಂನಲ್ಲಿ ದೋಷ: ಔರಾದ ಕ್ಷೇತ್ರದ ಬಲ್ಲೂರ(ಜೆ), ಹಂಗರಗಾ, ಧೂಪತಮಗಾಂವ್‌, ಬೋರ್ಗಿ(ಜೆ), ಕೌಠಾ(ಬಿ), ಕರಂಜೆ (ಕೆ), ಎಕಂಬಾ ಮತ್ತು ಕಂದಗೂಳ್‌, ಬಸವಕಲ್ಯಾಣ ಕ್ಷೇತ್ರದ ಬೆಟಗೇರಾ, ಹುಲಸೂರು, ಮಿರಕಲ್‌, ಹುಮನಾಬಾದ್‌ ಕ್ಷೇತ್ರದ ಸುಲ್ತಾನಾಬಾದ್‌, ಪದವಿ ಕಾಲೇಜು ಮತಗಟ್ಟೆ, ಘೋಡವಾಡಿ, ಕನಕಟ್ಟಾ ಮತ್ತು ನಂದಗಾಂವ್‌, ಬೀದರ ಕ್ಷೇತ್ರದ ನೌಬಾದ್‌ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಬಾವಗಿ ಮತಗಟ್ಟೆಗಳಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಕೆಲ ಕಾಲ ಮತದಾನಕ್ಕೆ ಅಡ್ಡಿಯಾಯಿತು. ಬೀದರ ನಗರದ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಬೂತ್‌ನಲ್ಲಿ ವಿದ್ಯುತ್‌ ಕೈಕೊಟ್ಟ ಕಾರಣ ಕೆಲ ಸಮಯ ಮೊಬೈಲ್‌ ಟಾರ್ಚ್‌ ಬಳಸಿ ಮತದಾನ ಪ್ರಕ್ರಿಯೆ ನಡೆಸಬೇಕಾಯಿತು.

ಆರು ಕ್ಷೇತ್ರಗಳಲ್ಲಿ ಆರಂಭದ ವೇಳೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತ್ತು. ವಯೋವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲ ಮತದಾರರು ಬಿರು ಬಿಸಿಲಿನಲ್ಲಿ ಮತ ಕೇಂದ್ರದತ್ತ ಹೆಜ್ಜೆ ಹಾಕಿ, ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ವೃದ್ಧರು, ಅಂಗವಿಕಲರು ಸಹ ಉತ್ಸಾಹ ತೋರಿದ್ದು, ಮತದಾನಕ್ಕಾಗಿ ಅವರ ಕುಟುಂಬಸ್ಥರು ಅವರಿಗೆ ನೆರವಾದರು. 

ಆಕರ್ಷಿಸಿದ ವಿಶೇಷ ಮತಗಟ್ಟೆಗಳು: ಮತದಾರರನ್ನು ಪ್ರೇರೇಪಿಸುವ ದಿಸೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸೌಲತ್ತುಗಳೊಂದಿಗೆ ಸ್ಥಾಪಿಸಿರುವ ಮಾದರಿ ಮತಗಟ್ಟೆಗಳು ಈ ಬಾರಿ ಗಮನ ಸೆಳೆದಿವೆ. ಅದರಲ್ಲೂ ವಿಶೇಷವಾಗಿ ಸಖೀ ಮತಗಟ್ಟೆ ಆಕರ್ಷಿಸಿದವು.

ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕಿಂತಲೂ ಅಧಿಕವಿರುವ ಪ್ರತಿ ಕ್ಷೇತ್ರದಲ್ಲಿ 5ರಂತೆ 30 ಮತಗಟ್ಟೆಗಳನ್ನು ಸಖೀ (ಪಿಂಕ್‌) ಮತಗಟ್ಟೆಗಳೆಂದು ಗುರುತಿಸಲಾಗಿತ್ತು. ವಿನೂತನ ಕೇಂದ್ರಗಳು ಪಿಂಕ್‌ ಬಣ್ಣದಿಂದ ಕಂಗೊಳಿಸಿದವು. ಈ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಿದ ಮತದಾರರು ಹೊಸತನದ ಅನುಭವ ಪಡೆದರು.

ವಿಶೇಷ ಕೇಂದ್ರಗಳಲ್ಲಿ ಚುನಾವಣಾಧಿಕಾರಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇದ್ದರು. ಅಷ್ಟೇ ಅಲ್ಲ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಸಹ ಮಹಿಳೆಯರೇ ಇರುವುದು ವಿಶೇಷ ಎನಿಸಿಕೊಂಡಿತು. ಪ್ರತಿಯೊಂದು ಮತಗಟ್ಟೆಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಇದ್ದು, ಮಹಿಳೆಯರಿಗೆ ವಿಶ್ರಾಂತಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. 

ಅಂಗವಿಕಲರಿಗೆ ರ್‍ಯಾಂಪ್‌-ವ್ಹೀಲ್‌ಚೇರ್‌: ಅಷ್ಟೇ ಅಲ್ಲ 6 ಕ್ಷೇತ್ರಗಳ ಪೈಕಿ ಅಗತ್ಯ ಮೂಲಸೌಕರ್ಯಗಳಿಂದ ಕೂಡಿದ 12 ಮಾದರಿ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗಿತ್ತು. ಜಿಪಂ ಕಚೇರಿ ಕಟ್ಟಡದ ಆವರಣದಲ್ಲಿ ಕೇವಲ ಅಂಗವಿಕಲ ಅಧಿ ಕಾರಿಗಳು ಮತ್ತು ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವ ವಿಶೇಷ ಮತಗಟ್ಟೆಯೊಂದನ್ನು ಕೂಡ ತೆರೆಯಲಾಗಿತ್ತು.

ಸಾಮಾನ್ಯ ಮತಗಟ್ಟೆಗಳಲ್ಲಿಯೂ ಈ ಬಾರಿ ಮೂಲ ಸೌಕರ್ಯಕ್ಕೆ ಒತ್ತು ನೀಡಿರುವುದು ಕಂಡು ಬಂತು. ಪೆಂಡಾಲ್‌, ನೀರಿನ ವ್ಯವಸ್ಥೆ, ಅಂಗವಿಕಲರಿಗೆ ರ್‍ಯಾಂಪ್‌, ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಮತ ಕೇಂದ್ರಗಳಲ್ಲಿ ಅವ್ಯವಸ್ಥೆ ಕಂಡುಬಂತು.

ಅಪ್ಪನ ಶವ ಇಟ್ಟು ಮತದಾನ ಅಪ್ಪನ ಶವ ಮನೆಯಲ್ಲಿಟ್ಟು ಮಗ ಮತದಾನ ಮಾಡುವ ಮೂಲಕ ಪ್ರಜ್ಞೆ ಮೆರೆದಿರುವ
ಘಟನೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತಿದ್ದ
ಬಸಯ್ಯ ಸ್ವಾಮಿ ಶನಿವಾರ ನಸುಕಿನಜಾವ ಮೃತಪಟ್ಟಿದ್ದರು. ಅವರ ಪುತ್ರ ರಾಜಕುಮಾರ ಸ್ವಾಮಿ ಬೆಳಗ್ಗೆ ಗ್ರಾಮದ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ನಂತರ ಮದ್ಯಾಹ್ನ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
 
ಬೀದರ ದಕ್ಷಿಣ ಕ್ಷೇತ್ರದ ಗೋರನಳ್ಳಿ(ಬಿ) ಗ್ರಾಮದಲ್ಲಿ 105 ವಯಸ್ಸಿನ ವೃದ್ಧೆ ಜಯಮ್ಮ ಹೊಸಮನಿ ಮತ ಹಾಕಿ ಪ್ರೇರಣೆಯಾಗಿದ್ದರೆ, ಆಣದೂರ ಗ್ರಾಮದಲ್ಲಿ ಫಿಲಿಪ್‌ ಮತ್ತು ಕಲ್ಪನಾ ನವ ವಿವಾಹಿತರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಹಲವು ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಮತ ಹಾಕಿದ ಯುವ ಸಮೂಹದಲ್ಲಿ ಉತ್ಸಾಹ ಕಂಡು ಬಂತು.

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.