ಕೀಟನಾಶಕ ಸಿಂಪಡಣೆ ಯಂತ್ರ ಶೋಧನೆ
Team Udayavani, Mar 18, 2019, 10:59 AM IST
ಭಾಲ್ಕಿ: ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಾರ್ಯ ನಿರ್ವಹಿಸುವ ಸ್ವಯಂಚಾಲಿತ ಪವರ್ ಸ್ಪ್ರೇ ಯಂತ್ರವನ್ನು ಕೊರೂರ
ಗ್ರಾಮದ ಯುವಕ ರಹೀಂ ಮಹಿಬೂಬಸಾಬ್ ಸಂಶೋಧಿಸಿದ್ದಾರೆ. ರೈತರು ಹೊಲಗಳಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು ಹಲವಾರು ಪವರ್ ಸ್ಪ್ರೇಗಳನ್ನು ಬಳಸುತ್ತಿದ್ದರು. ಈ ಪವರ್ ಸ್ಪ್ರೇಗಳಿಗೆ ನೀರು ಹಾಕಲು ಒಬ್ಬರು, ಯಂತ್ರ ಚಾಲನೆ ಮಾಡಿ ಹೊಲದಲ್ಲಿ ಸುತ್ತುತ್ತಾ ಬೆಳೆಗೆ ಸಿಂಪಡಿಸಲು ಒಬ್ಬರು, ಹೀಗೆ ಇಬ್ಬರು-ಮೂವರು ಆಳುಗಳು ಬೇಕಿತ್ತು. ಅಲ್ಲದೆ ಒಂದು ಯಂತ್ರದಿಂದ ಎಕರೆ ಬೆಳೆಗೆ ಸಿಂಪಡಿಸಲು ಎರಡರಿಂದ ಮೂರು ಗಂಟೆ ಸಮಯ ಬೇಗಾಗುತ್ತದೆ.
ಆದರೆ ರಹೀಂ ಮಹಿಬೂಬಸಾಬ್ ಸಂಶೋಧಿಸಿರುವ ಸೂಪರ್ ಫಾಸ್ಟ್ ಪವರ್ ಸ್ಪ್ರೇ ಯಂತ್ರದಿಂದ ಕಡಿಮೆ ಸಮಯದಲ್ಲಿ ಒಬ್ಬರೇ ಕೆಲಸಗಾರರಿಂದ ಸಂಪೂರ್ಣ ಹೊಲಕ್ಕೆ ಕೀಟನಾಷಕ ಸಿಂಪಡಿಸಬಹುದಾಗಿದೆ. ಹೊಂಡಾ ಯಾಕ್ಟಿವ್ ಬೈಕ್‌ನ ಜೋಡಣೆಯೊಂದಿಗೆ ಈ ಯಂತ್ರ ನಡೆಯುತ್ತಲಿದ್ದು, ಒಂದು ಲೀಟರ್ ಪೆಟ್ರೋಲ್‌ನಲ್ಲಿಯೇ ಸುಮಾರು 10 ಎಕರೆ ಹೊಲದ ಬೆಳೆಗೆ ಕೀಟನಾಶಕ ಸಿಂಪಡಿಸಲು ಈ ಯಂತ್ರ ಸಹಾಯ ಮಾಡುತ್ತದೆ. ಹೀಗಾಗಿ ರೈತರಿಗೆ ಸಮಯದೊಂದಿಗೆ ಕೆಲಸದ ಆಳು ಮತ್ತು ಹಣವೂ ಉಳಿತಾಯವಾಗುತ್ತದೆ.
ಈ ಯಂತ್ರವು ಪ್ರಾಯೋಗಿಕವಾಗಿದ್ದು, ಉತ್ಪಾದನಾ ಕಾರ್ಖಾನೆಯವರು ಹೆಚ್ಚು ಯಂತ್ರಗಳನ್ನು ತಯಾರಿಸಿ ರೈತರಿಗೆ ಇದರ ಉಪಯೋಗವಾಗುವಂತೆ ಮಾಡಬೇಕು ಎನ್ನುತ್ತಾರೆ ಗ್ರಾಮದ ಹಿರಿಯರಾದ ಶಂಕರರಾವ್ ಚವ್ಹಾಣ.
ಜಯರಾಜ ದಾಬಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.