ಪಿಕೆಪಿಎಸ್‌ಗೆ ಬಿರುಸಿನ ಮತದಾನ


Team Udayavani, Jan 22, 2020, 12:56 PM IST

bidar-tdy-2

ಭಾಲ್ಕಿ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ದಿಕ್ಸೂಚಿಯಂದೇ ಬಿಂಬಿತವಾಗಿರುವ ತಾಲೂಕಿನ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಂಗಳವಾರ ಬಿರುಸಿನ ಚುನಾವಣೆ ನಡೆಯಿತು.

ತಾಲೂಕಿನ ವ್ಯಾಪ್ತಿಯ ಒಟ್ಟು 36 ಪಿಕೆಪಿಎಸ್‌ ಗಳ ಪೈಕಿ ಹಲಬರ್ಗಾ ಮತ್ತು ಡೊಣಗಾಪೂರ ಪಿಕೆಪಿಎಸ್‌ ಗಳಿಗೆ ಮಧ್ಯಂತರ ಚುನಾವಣೆ ನಡೆದ ಕಾರಣ, ಬಾಕಿ ಉಳಿದ 34ರಲ್ಲಿ 10 ಪಿಕೆಪಿಎಸ್‌ ಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 24 ಪಿಕೆಪಿಎಸ್‌ಗಳಿಗೆ ಚುನಾವಣೆ ನಡೆದಿದ್ದು, ಕಣದಲ್ಲಿರುವ 582 ಅಭ್ಯರ್ಥಿಗಳು ಮತದಾನ ಮಾಡಿಸುವಲ್ಲಿ ಹರಸಾಹಸ ನಡೆಸಿದರು. ಚುನಾವಣೆ ನಡೆಯುತ್ತಿರುವ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನಾನಾ ಕ್ಷೇತ್ರಗಳಿಂದ 110 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯುತ್ತಲಿದೆ.

ಕಣದಲ್ಲಿರುವ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಲ್ಲಿ 285 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ 50, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ 36, ಪ್ರವರ್ಗ ಎ ಕ್ಷೇತ್ರದಲ್ಲಿ 48, ಪ್ರವರ್ಗ ಬಿ ಕ್ಷೇತ್ರದಲ್ಲಿ 48, ಮಹಿಳಾ ಕ್ಷೇತ್ರದಿಂದ 68 ಮತ್ತು ಸಾಲರಹಿತ ಕ್ಷೇತ್ರದಿಂದ 47 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರೆಲ್ಲರೂ ಗೆಲುವಿಗಾಗಿ ನಾನಾ ತಂತ್ರ ಹೆಣೆದಿದ್ದು, ಚುನಾವಣೆಯ ಸಮಯದಲ್ಲಿ ಪ್ರತಿಶತ ಮತದಾನವಾಗುವಂತೆ ಎಚ್ಚರ ವಹಿಸುತ್ತಲಿದ್ದಾರೆ.

ಅವಿರೋಧ ಆಯ್ಕೆಯಾದ ಪಿಕೆಪಿಎಸ್‌: ಭಾಲ್ಕಿಪಟ್ಟಣ, ಕುರುಬಖೇಳಗಿ, ಮೊರಂಬಿ, ಧನ್ನೂರ (ಎಚ್‌), ಬಾಳೂರ, ಗೋರಚಿಂಚೋಳಿ, ಲಖಣಗಾಂವ, ಕಾಸರ ತುಗಾಂವ, ಜಮಖಂಡಿ ಮತ್ತು ಕಣಜಿ ಪಿಕೆಪಿಎಸ್‌ಗಳಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧಧವಾಗಿ ಆಯ್ಕೆ ಮಾಡಲಾಗಿದೆ.

ಚುನಾವಣೆ ನಡೆಯುವ ಪಿಕೆಪಿಎಸ್‌: ನಾವದಗಿ, ದಾಡಗಿ, ವಳಸಂಗ, ಅಂಬೆಸಾಂಗವಿ, ಬೀರಿ(ಬಿ), ಕಳಸದಾಳ, ತಳವಾಡ(ಎಮ್‌), ಜ್ಯಾಂತಿ, ಕೋನಮೆಳಕುಂದಾ, ಸಿದ್ದೇಶ್ವರ, ಜೋಳದಪಕಾ, ಹುಪಳಾ, ನಿಟ್ಟೂರ(ಬಿ), ಭಾತಂಬ್ರಾ, ಶಿವಣಿ, ಮೇಥಿಮೆಳಕುಂದಾ, ಸಾಯಿಗಾಂವ, ಕೇಸರ ಜವಳಗಾ, ಮೆಹಕರ, ಅಟ್ಟರ್ಗಾ, ತೂಗಾಂವ(ಎಚ್‌), ಖಟಕಚಿಂಚೋಳಿ, ಚಳಕಾಪುರ, ಮತ್ತು ಬ್ಯಾಲಹಳ್ಳಿ(ಕೆ) ಪಿಕೆಪಿಎಸ್‌ ಗಳಲ್ಲಿ ಮಂಗಳವಾರ ಬಿರುಸಿನ ಚುನಾವಣೆ ನಡೆದಿದ್ದು, ನಾಲ್ಕು ಗಂಟೆಗೆ ಚುನಾವಣೆ ಮುಕ್ತಾಯ ಗೊಳ್ಳಬೇಕಿತ್ತು. ಆದರೆ ಉದ್ದನೆಯ ಸಾಪು ಇರುವ ಕಾರಣ ಸಂಜೆ 6 ಗಂಟೆಯ ನಂತರವೂ ಕೆಲವು ಪಿಕೆಪಿಎಸ್‌ಗಳಲ್ಲಿ ಚುನಾವಣೆ ನಡೆದ ವರದಿ ಬಂದಿದೆ. ಹೀಗಾಗಿ ಇಂದೇ ಪ್ರಕಟಿಸಬೇಕಾಗಿದ್ದ ಚುನಾವಣಾ ಫಲಿತಾಂಶದಲ್ಲಿ ವಿಳಂಬವಾಗಿದೆ.

ಒಟ್ಟಿಗೆ ಎಲ್ಲ ಕ್ಷೇತ್ರಗಳಿಗೂ ಒಬ್ಬರೇ ಮತದಾರರು ಮತ ಚಲಾಯಿಸುತ್ತಿರುವ ಕಾರಣ, ಪ್ರತಿ ಕ್ಷೇತ್ರಕ್ಕೂ ವಿವಿಧ ಬ್ಯಾಲೆಟ್‌ ಪೇಪರ ಕೊಡಲಾಗುತ್ತಿದೆ. ಒಬ್ಬ ಮತದಾರರಿಗೆ 5 ರಿಂದ 6 ಬ್ಯಾಲೆಟ್‌ ಪೇಪರಗಳನ್ನು ಕೊಡಲಾಗುತ್ತಿದ್ದು, ಇದರಿಂದ ಮತದಾರರಿಗೆ ತಾವು ಮತ ಚಲಾಯಿಸುವಲ್ಲಿ ಗೊಂದಲ ಸೃಷ್ಟಿಯಾದ ಪ್ರಸಂಗ ನಡೆದಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಏಜೆಂಟರೆ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತ ಚಾಲಾಯಿಸಿದ ಪ್ರಸಂಗಗಳು ಕೂಡ ನಡೆದಿವೆ.

 

-ಜಯರಾಜ ದಾಬಶೆಟ್ಟಿ

ಟಾಪ್ ನ್ಯೂಸ್

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

jharkhand election: 7 guarantee from INDIA bloc

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

Lawrence Bishnoi T-Shirt Sale on Flipkart, Meesho

T-Shirt: ಫ್ಲಿಪ್‌ಕಾರ್ಟ್‌, ಮೀಶೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಟೀಶರ್ಟ್‌ ಮಾರಾಟ: ಆಕ್ರೋಶ

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar: ಅ.28ರಂದು 5 ನೇ ವಚನ ಸಾಹಿತ್ಯ ಸಮ್ಮೇಳನ

Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ

1-wewqewqe

Bidar; ಸಾಲ ಬಾಧೆಯಿಂದ ಇಬ್ಬರು ರೈತರು ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

jharkhand election: 7 guarantee from INDIA bloc

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

Lawrence Bishnoi T-Shirt Sale on Flipkart, Meesho

T-Shirt: ಫ್ಲಿಪ್‌ಕಾರ್ಟ್‌, ಮೀಶೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಟೀಶರ್ಟ್‌ ಮಾರಾಟ: ಆಕ್ರೋಶ

Dina Bhavishya

Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.