ಪಿಕೆಪಿಎಸ್‌ಗಳ ಜನಪರ ಕಾಳಜಿ ಮಾದರಿ
Team Udayavani, Jul 24, 2022, 3:14 PM IST
ಬೀದರ: ಜಿಲ್ಲೆಯಲ್ಲಿ ಶೇ.80 ರಸಗೊಬ್ಬರ ಸಹಕಾರಿ ಸಂಘಗಳ ಮೂಲಕವೇ ವಿತರಣೆಯಾಗುತ್ತಿದ್ದು ರೈತರಿಗೆ ತೊಂದರೆಯಾಗದಂತೆ ಸೇವೆ ನೀಡುತ್ತಿರುವ ಇಲ್ಲಿನ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಮತ್ತು ಅದರ ನೇತೃತ್ವ ವಹಿಸಿರುವ ಡಿಸಿಸಿ ಬ್ಯಾಂಕಿನ ಜನಪರ ಕಾಳಜಿ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬಳ್ಳಾರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ಯಾಕ್ಸ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗಾಗಿ ನಬಾರ್ಡ್ ವತಿಯಿಂದ ನಡೆದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ ಡಿಸಿಸಿ ಬ್ಯಾಂಕ್ ಮತ್ತು ಪ್ಯಾಕ್ಸ್‌ಗಳ ನಡುವಿನ ಸೌಹಾರ್ದಯುತ ಸಂಬಂಧ ಸಹಕಾರಿ ವ್ಯವಸ್ಥೆಯ ಸದೃಢ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಸಹಕಾರಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿಶ್ವಾಸಾರ್ಹ ಸೇವೆ ನೀಡುವಲ್ಲಿ ಮುಂದೆ ಬರಬೇಕು, ಅದಕ್ಕಾಗಿ ಯೋಜನೆ ರೂಪಿಸಬೇಕು. ತಮ್ಮ ಸಂಘಗಳ ಅಭಿವೃದ್ಧಿಗಾಗಿ ದೂರದೃಷ್ಟಿ ಹೊಂದಿರಬೇಕು. ಜನರಿಗೆ ತಮ್ಮ ಕೈಗೆಟುಕುವಷ್ಟು ಹತ್ತಿರದಲ್ಲೇ ಸೇವೆಗಳು ದೊರಕಿದಾಗ ಇದು ತಮ್ಮ ಸಂಸ್ಥೆಯೆಂಬ ಭಾವನೆ ಮೂಡುತ್ತದೆ. ಸಹಕಾರದ ಬಲ ವೃದ್ಧಿಯಾಗುತ್ತದೆ. ಸಂಸ್ಥೆಯಲ್ಲಿ ಮಾದರಿ ಸೇವೆ ನೀಡುವ ಯೋಜನೆ ರೂಪಿಸಲು ತರಬೇತಿಗಳಿಗೆ ಹಾಜರಾಗಬೇಕು. ತರಬೇತಿಗಳಲ್ಲಿ ಅನುಭವ ಹಂಚಿಕೊಳ್ಳಬೇಕು. ಉತ್ತಮ ಸಂಗತಿ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮನುಷ್ಯ ಸಂಘಜೀವಿಯಾಗಿದ್ದು ಪರಸ್ಪರ ಅವಲಂಬನೆ ಸ್ವಾಭಾವಿಕ. ಅವರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಕಾರಿ ಆಂದೋಲನ ಅತ್ಯಂತ ಆದರ್ಶ ಮಾದರಿಯಾಗಿದೆ. ಖಾಸಗಿ ವ್ಯವಸ್ಥೆಯು ಲಾಭಕ್ಕಾಗಿ ಸೇವೆ ನೀಡಿದರೆ ಸಹಕಾರಿ ಸಂಘಗಳು ಕಡಿಮೆ ಲಾಭದಲ್ಲಿ ಸದಸ್ಯರ ಆವಶ್ಯಕತೆ ಪೂರೈಸುತ್ತವೆ. ಸಂಘಗಳ ಅಭಿವೃದ್ಧಿಗೆ ಉತ್ತಮ ನಾಯಕತ್ವ ಬಹಳ ಮುಖ್ಯ. ಬೀದರ ಡಿಸಿಸಿ ಬ್ಯಾಂಕ್ ಉತ್ತಮ ನಾಯಕತ್ವ ಹೊಂದಿದ್ದು ಫಸಲ್ ಬೀಮಾ ಮತ್ತು ಸ್ವ ಸಹಾಯ ಗುಂಪುಗಳ ಕಾರ್ಯಕ್ರಮ ಜಾರಿಯಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ನಾ ಸ್ವಾಮಿ ಮಾತನಾಡಿ, ಬಹುಸೇವಾ ಕೇಂದ್ರವಾಗಿ ಪ್ಯಾಕ್ಸ್‌ಗಳನ್ನು ಮಾರ್ಪಡಿಸಿದಾಗ ರೈತರ ಸೇವೆಗಳಿಗೆ ಮಹತ್ವ ನೀಡಬೇಕು. ಹೆಚ್ಚು ಸದಸ್ಯರನ್ನು ಮಾಡಿ ಶೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಸದಸ್ಯರಿಗೆ ಸಾಲ ನೀಡಿ, ಸೇವೆ ಒದಗಿಸಿ, ಸೇವೆ ಮಾಡುವಂತಹ ಹೊಸ ಯೋಜನೆ ರೂಪಿಸಿ ರೈತರ ಮನೆ ಬಾಗಿಲಿಗೆ ಸೇವೆ ತಲುಪಿಸಿ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮೊಹಮ್ಮದ ಮೊಸಿನ್, ಬ್ಯಾಂಕಿನ ಸಿಇಒ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲ ಪಿ. ನಿರೂಪಿಸಿದರು. ಎಸ್.ಜಿ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.