ನಾರಾಯಣರಾವ್ ಉತ್ತರಾಧಿಕಾರಿಗೆ ಕಸರತ್ತು!
Team Udayavani, Oct 3, 2020, 3:59 PM IST
ಬೀದರ: ಕೋವಿಡ್ ಸೋಂಕಿಗ ಬಲಿಯಾಗಿರುವ ಶಾಸಕ ಬಿ. ನಾರಾಯಣರಾವ್ ಅವರ ಸಮಾ ಧಿ ಮೇಲಿನ ಹೂವು ಇನ್ನೂ ಬಾಡಿಲ್ಲ, ಉಪ ಚುನಾವಣೆಯೂ ಘೋಷಣೆಯಾಗಿಲ್ಲ. ಆದರೆ, ಬಸವಕಲ್ಯಾಣ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ಶಾಸಕ ನಾರಾಯಣರಾವ್ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ತೆರವಾಗಿರುವ ಕಲ್ಯಾಣದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದ್ದು, ಶಾಸಕರ ಉತ್ತರ ಧಿಕಾರಿಯಾರು ಎಂಬ ಚರ್ಚೆ ಶುರುವಾಗಿದೆ.
ಜನತಾ ಪರಿವಾರದ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಅಹಿಂದ ನಾಯಕರಾಗಿದ್ದ ನಾರಾಯಣರಾವ್ ಗೆಲ್ಲುವ ಮೂಲಕ “ಕೈ’ಗೆ ನೆಲೆ ಒದಗಿಸಿಕೊಟ್ಟಿದ್ದರು. ಆದರೆ, ತಮ್ಮ ಅಧಿಕಾರದ ಅವಧಿ ಪೂರ್ಣಗೊಳಿಸುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಉಪ ಕದನದಲ್ಲೂ ಮತ್ತೆ ಕ್ಷೇತ್ರವನ್ನು ತಮ್ಮ “ಕೈ’ಯಲ್ಲಿ ಇಟ್ಟುಕೊಳ್ಳಲು ಕಾಂಗ್ರೆಸ್ ತವಕದಲ್ಲಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಸಹ “ಕೈ’ಯಿಂದ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯಲು ಲೆಕ್ಕಚಾರದಲ್ಲಿದೆ.
ನಾರಾಯಣರಾವ್ ಅವರ ಅಂತ್ಯಕ್ರಿಯೆ ಮುಗಿದ ಕ್ಷಣದಿಂದಲೇ ದಿ| ಶಾಸಕರ ಸ್ಥಾನ ಯಾರು ತುಂಬಬಹುದೆಂಬ ಚರ್ಚೆ ಹೆಚ್ಚಿವೆ. ಸಾರ್ವಜನಿಕ ವಲಯದಲ್ಲಿ ಗೆಲುವಿಗಾಗಿ ಅನುಕಂಪದ ಮತ, ಜಾತಿ ಲೆಕ್ಕಚಾರ ಮುನ್ನೆಲೆಗೆ ಬಂದಿದ್ದರೆ, ಪ್ರಮುಖ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ, ಮತ ವಿಭಜನೆ ತಂತ್ರಗಳು ಜತೆಗೆವಲಸೆ ಅಭ್ಯರ್ಥಿಗಳನ್ನು ಕರೆತರುವ ಚಿಂತನೆಗಳು ಕೇಳಲಾರಂಭಿಸಿವೆ. ಯಾವ ಸಂದರ್ಭದಲ್ಲೂ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಈಗಾಗಲೇ ಪ್ರಯತ್ನ ನಡೆಸಿರುವ ನಾಯಕರ ದಂಡು ತಮ್ಮ ಪಕ್ಷದ ವರಿಷ್ಠರು ಮತ್ತು ರಾಜಕೀಯ ಗುರುಗಳ ಮನೆ ಕದ ತಟ್ಟಲು ಆರಂಭಿಸಿದ್ದಾರೆ.
“ಕೈ’ ಪಾಳಯಕ್ಕೆ ಸವಾಲು: ಕ್ಷೇತ್ರವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳುವುದು “ಕೈ’ ಪಾಳಯಕ್ಕೆ ಸವಾಲಿನ ಸಂಗತಿಯಾಗಿದೆ. ನಾರಾಯಣರಾವ್ ಅವರಂತೆ ಜನಮನ್ನಣೆ ಗಳಿಸುವಂಥ ವ್ಯಕ್ತಿಯನ್ನೇ ಕಣಕ್ಕಿಳಿಸಬೇಕಿದೆ. ಹಾಗಾಗಿ ನಾರಾಯಣರಾವ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ಉತ್ತಮ ಎಂಬ ಕೂಗು ಕೇಳಿ ಬರುತ್ತಿವೆ. ಆದರೆ, ಅವರ ಇಬ್ಬರು ಮಕ್ಕಳಾದ ಗೌತಮ್ ಮತ್ತು ರಾಹುಲ್ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದು, ಇದು ಪಕ್ಷದ ಗೆಲುವಿಗೆ ಹಿನ್ನಡೆ ಆಗಬಹುದೆಂಬಆತಂಕ ಪಕ್ಷದ ನಾಯಕರಲ್ಲಿದೆ. ಆದರೆ,ದಿ| ಶಾಸಕರ ಪರಿವಾರ ಮಾಜಿ ಸಿಎಂಸಿದ್ಧರಾಮಯ್ಯ ಅವರನ್ನೇ ಹೆಚ್ಚು ನಂಬಿಕೊಂಡಿದೆ. ಹಾಗಾಗಿ ಅವರ ನಿರ್ಣಯವೇ ಇಲ್ಲಿ ಅಂತಿಮ ಎಂದೆನ್ನಲಾಗುತ್ತಿದೆ.
ಇನ್ನು ರಾಜ್ಯ- ಕೇಂದ್ರದ ಆಡಳಿತಾರೂಢ ಪಕ್ಷ ಬಿಜೆಪಿ ಸಹ ಕಲ್ಯಾಣದಲ್ಲಿ ಅಧಿಕಾರ ಹಿಡಿಯಲು ಪ್ರಬಲ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಿದ್ದು, ಇಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೂಮ್ಮೆ ಅದೃಷ್ಟ ಪರೀಕ್ಷೆ ಸಜ್ಜಾಗುತ್ತಿದ್ದಾರೆ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಿರಿಯ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಸಹ ಕ್ಷೇತ್ರದತ್ತ ಚಿತ್ತ ಹರಿಸಿದ್ದು, ಟಿಕೆಟ್‌ಗಾಗಿ ಲಾಬಿ ಶುರು ಮಾಡಿದ್ದಾರೆ ಎನ್ನುವ ಮಾತುಗಳಿವೆ. ಜತೆಗೆ ಪ್ರಮುಖರಾಗಿ ಶರಣು ಸಲಗಾರ, ಗುಂಡು ರೆಡ್ಡಿ, ಸಂಜಯ ಪಟವಾರಿ ಹಾಗೂ ಜೆಡಿಎಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಎಂ.ಜಿ. ಮುಳೆ, ಆನಂದ ಪಾಟೀಲ ಹೆಸರುಗಳು ಕೇಳಿ ಬರುತ್ತಿವೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ : ಈ ಬೆಳವಣಿಗೆ ನಡುವೆಯೂ “ಕೈ’ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತರ ನಂತರ ಮರಾಠಾ ಸಮುದಾಯದವರ ಸಂಖ್ಯೆ ಹೆಚ್ಚಿರುವುದರಿಂದ ಮಾಜಿ ಸಿಎಂ ದಿ| ಧರಂಸಿಂಗ್ ಪುತ್ರ, ಎಂಎಲ್‌ಸಿ ವಿಜಯಸಿಂಗ್ ಅವರು ಅಚ್ಚರಿಯ ಅಭ್ಯರ್ಥಿಯಾಗಿ ಘೋಷಣೆಯಾಗಲಿದ್ದಾರೆ ಎಂಬ ವಾದ ಶುರುವಾಗಿದ್ದರೆ, ಇನ್ನೊಂದೆಡೆ ಅಭ್ಯರ್ಥಿಯಾಗಿ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಚಂದ್ರಶೇಖರ ಪಾಟೀಲ ಹೆಸರು ಸಹಚರ್ಚೆಯ ಚಾವಡಿಯಲ್ಲಿದೆ. ಇದರೊಟ್ಟಿಗೆ ಎಐಸಿಸಿ ಸದಸ್ಯ ಆನಂದ ದೇವಪ್ಪ ಮತ್ತು ಶಿವಶರಣ ಬಿರಾದಾರ ಸಹ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.