ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಗಾಳಿ ಗುಣಮಟ್ಟ ಪರೀಕ್ಷೆ ಶುರು
Team Udayavani, Jun 1, 2022, 6:14 PM IST
ಹುಮನಾಬಾದ್: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕಾ ಘಟಕಗಳು ವಿಪರೀತ ವಾಯುಮಾಲಿನ್ಯ ಉಂಟು ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಬಳ್ಳಾರಿಯ ವಾಯು ಮಾಲಿನ್ಯ ಪರೀಕ್ಷೆ ನಡೆಸುವ ವಾಹನ ಬುಧವಾರ ಕೈಗಾರಿಕಾ ಪ್ರದೇಶದಲ್ಲಿನ ಗಾಳಿ ಗುಣಮಟ್ಟ ಪರೀಕ್ಷೆ ನಡೆಸುವ ಕಾರ್ಯ ಆರಂಭಿಸಿದೆ.
ಕಳೆದ ಒಂದು ದಶಕದಿಂದ ಕೈಗಾರಿಕಾ ಪ್ರದೇಶದ ಸುತ್ತಲಿನ ಗಡವಂತಿ, ಮಾಣಿಕನಗರ, ಬಸವಂತಪೂರ್, ಮೋಳಕೇರಾ ಗ್ರಾಮಸ್ಥರು ಪರಿಸರಕ್ಕೆ ಹಾನಿ ಉಂಟಾಗುತ್ತಿರುವ ಕುರಿತು ಅನೇಕ ಬಾರಿ ವಾಯುಮಾಲಿನ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ರಾಜಕೀಯ ಜನಪ್ರತಿನಿಧಿಗಳು ವಿವಿಧ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೆ, ಜನಪರ ಕಾಳಜಿ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ವಿಶೇಷ ವರದಿಗಳು ಉದಯವಾಣಿ ಪ್ರಕಟಮಾಡಿತ್ತು. ಕಳೆದ ಕೆಲ ತಿಂಗಳಿಂದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮುಖಂಡ ಭಜರಂಗ ನೇತೃತ್ವದಲ್ಲಿ ಸಂಬಂಧಿಸಿದ ರಾಜ್ಯಪಾಲರು ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರಬರೆದು ಪರಿಸರ ಹಾನಿ ಉಂಟು ಮಾಡುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗಾಳಿ ಗುಣಮಟ್ಟ ಪರೀಕ್ಷೆ ನಡೆಸುವ ಪರಿಸರ ಮಾಲಿನ್ಯ ನಿಯಂತ್ರ ಇಲಾಖೆಯ ಆಧುನಿಕ ವಾಹನವೊಂದು ಪ್ರಥಮ ಬಾರಿ ಹುಮನಾಬಾದ ಪಟ್ಟಣಕ್ಕೆ ಬಂದಿದೆ. ಕಳೆದ ಅನೇಕ ವರ್ಷಗಳಿಂದ ಇಲ್ಲಿನ ಜನರ ಪರಿಸರ ಮಾಲಿನ್ಯ ಕುರಿತು ಸಲ್ಲಿಸಿದ ದೂರುಗಳ ಹಿನ್ನೆಲೆಯಲ್ಲಿ ಗಾಳಿ ಗುಣಮಟ್ಟ ಸೇರಿದಂತೆ ಇತರೆ ಪರೀಕ್ಷೆ ನಡೆಸುವ ಕಾರ್ಯ ಆರಂಭಗೊಂಡಿದ್ದು, ಮುಂದಿನ ಎರೆಡು ದಿನಗಳ ಕಾಲ ವಿವಿಧಡೆ ಪರೀಕ್ಷೆ ನಡೆಸಲ್ಲಿದೆ.
ಕೈಗಾರಿಕೆಗಳ ಸುತ್ತಲ್ಲಿನ ಮೂರು ಕಿ.ಮೀ ದೂರದ ವರೆಗಿನ ಮಾಲಿನ್ಯ ಪತ್ತೆ ಮಾಡುವ ಹೈಟೆಕ್ ವಾಹನ ಇದ್ದಾಗಿದ್ದು, ಬೇಕಾಬಿಟ್ಟಿಯಾಗಿ ಗಾಳಿಯಲ್ಲಿ ಅನಿಲ ಬಿಡುತ್ತಿದ್ದ ಕೈಗಾರಿಕೆಗಳ ಮಾಲೀಕರಿಗೆ ಚುರುಕು ಮುಟ್ಟಿಸಿ ಸಾಧ್ಯತೆ ಇದೆ. ಸಾರ್ವಜನಿಕರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ ತಕ್ಷಣ ಮಂಡಳಿಯ ಅಧಿಕಾರಿಗಳು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರದ ಅಧಿಕಾರಿಗಳಿಗೆ ಸಂದೇಶ ರವಾನಿಸಿ ಅಲ್ಲಿಯ ಅಧಿಕಾರಿಗಳು ತಕ್ಷಣ ಕೈಗಾರಿಕೆ ಪ್ರದೇಶಕ್ಕೆ ವಾಹನ ಕಳಿಸುತ್ತಿದ್ದಾರೆ. ಆಧುನಿಕ ಉಪಕರಣಗಳನ್ನು ಹೊಂದಿರುವ ಸಂಚಾರ ವಾಹನ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದೆ. ನಂತರ ವಿವರವಾದ ವರದಿಯನ್ನೂ ಕೊಡುತ್ತದೆ. ಗಾಳಿಯಲ್ಲಿ ಯಾವ ಪ್ರಮಾಣದ ಮಾಲಿನ್ಯ ಇದೆ. ಸಣ್ಣ ಪ್ರಮಾಣದ ಮಣ್ಣಿನ ಕಣಗಳು, ಅನೀಲ ಸೇರಿದಂತೆ 8 ತರಹದ ಪರೀಕ್ಷೆಯ ವರದಿ ಬರುತ್ತದೆ. ಅಲ್ಲದೇ ಯಾವ ಕಾರ್ಖಾನೆಗಳು ಎಷ್ಟು ಪ್ರಮಾಣದ ಮಾಲಿನ್ಯ ಉಂಟು ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.