ಮಗುವಿಗೆ ಪಾಸಿಟಿವ್-7 ಜನ ಬಿಡುಗಡೆ
Team Udayavani, May 20, 2020, 5:49 AM IST
ಬೀದರ: ಜಿಲ್ಲೆಯಲ್ಲಿ ತಲ್ಲಣ ಮೂಡಿಸುತ್ತಿರುವ ಕೋವಿಡ್ ಪಾಸಿಟಿವ್ ಒಂದು ಪ್ರಕರಣ ವರದಿಯಾಗಿದೆ. ಮಂಗಳವಾರ ಸೋಂಕಿತ ತಾಯಿ ಸಂಪರ್ಕದಿಂದಲೇ ಎರಡೂವರೆ ವರ್ಷದ ಇನ್ನೊಬ್ಬ ಮಗನಿಗೂ ಕೋವಿಡ್ ಒಕ್ಕರಿಸಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 58ಕ್ಕೆ ಏರಿಕೆ ಆಗಿದೆ.
ಇನ್ನೂ ಚಿಕಿತ್ಸೆಯಿಂದ ಗುಣಮುಖರಾಗಿರುವ 7 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮನಿಯಾರ್ ತಾಲೀಮ್ನ ನಿವಾಸಿಯಾಗಿರುವ 2.6 ವರ್ಷದ ಬಾಲಕ (ಪಿ-1374)ನಲ್ಲಿ ಸೋಂಕು ಪತ್ತೆಯಾಗಿದೆ. ಇತ ತನ್ನ ತಾಯಿ ಪಿ- 939ರ ಸಂಪರ್ಕಕ್ಕೆ ಬಂದಿದ್ದಾನೆ. ಸೋಮವಾರವಷ್ಟೇ ಇದೇ ತಾಯಿ ಸಂಪರ್ಕದಿಂದ ಇನ್ನೊಬ್ಬ ಮಗನಿಗೆ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಸೋಮವಾರದಿಂದ ಸತತ ಐದು ದಿನ 32 ಸೋಂಕಿತರ ಸಂಖ್ಯೆ ವರದಿಯಾಗಿದ್ದಲ್ಲದೇ ಎರಡನೇ ವ್ಯಕ್ತಿಯೂ ಬಲಿಯಾಗಿದ್ದ. ನಂತರ ಎರಡು ದಿನ ಒಂದೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದೆ ನಿಟ್ಟಿಸಿರು ಬಿಡುವಂತಾಗಿತ್ತು. ಈಗ ಎರಡು ದಿನಗಳಿಂದ ಒಂದೊಂದು ಸೋಂಕು ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಈಗ ಒಟ್ಟಾರೆ 58 ಪಾಸಿಟಿವ್ ಪ್ರಕರಣಗಳು ವರದಿ ಆದಂತಾಗಿದೆ. ಅದರಲ್ಲಿ ಎರಡು ಸಾವು ಸಂಭವಿಸಿದ್ದರೆ 22 ಜನರು ಡಿಸಾcರ್ಜ್ ಆಗಿದ್ದು, ಇನ್ನೂ 34 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.