ಕಾಯಕ ತತ್ವ ದಿಂದ ಬಡತನ ದೂರ
Team Udayavani, Jan 4, 2018, 12:54 PM IST
ಬೀದರ: ಬಸವ ತತ್ವದಲ್ಲಿ ಕಾಯಕಕ್ಕೆ ಮೊದಲ ಸ್ಥಾನವಿದ್ದು, ವಿಶ್ವವು ಕಾಯಕ ತತ್ವ ಅಳವಡಿಸಿಕೊಂಡದ್ದೆ ಆದಲ್ಲಿ ಜಗತ್ತಿನಿಂದ ಬಡತನದ ನಿರ್ಮೂಲನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅಭಿಪ್ರಾಯಪಟ್ಟರು. ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ 217ನೇ ಶರಣ ಸಂಗಮ ಮತ್ತು 2018ರ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರ ಆಚಾರ-ವಿಚಾರಗಳು ವೈಚಾರಿಕ ಪ್ರಭೆ ಹೊರಸೊಸುತ್ತಿವೆ. ಇಂಥ ವಿಶ್ವ ಮಾನ್ಯವಾದ ಶರಣರ ತತ್ವಗಳನ್ನು ಉಳಿಸಿ-ಬೆಳೆಸುವ ಮತ್ತು ಸಮಾಜದಲ್ಲಿ ಶಾಶ್ವತವಾಗಿ ನೆಲೆಗೊಳಿಸುವ ಕಾರ್ಯ ಪ್ರತಿಷ್ಠಾನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವ ಧರ್ಮದ ಧೃವತಾರೆ: ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಸೊನ್ನಲಾಪುರದ ಶಿವಯೋಗಿ ಸಿದ್ಧರಾಮೇಶ್ವರರು ಬಸವ ಧರ್ಮದ ಧೃವತಾರೆ. ಸಿದ್ಧರಾಮೇಶ್ವರರ ವಚನಗಳಲ್ಲಿ ಬಸವ ಭಕ್ತಿಯು ಜಲಪಾತವಾಗಿ ಧಾರೈಸುವುದು ಎಂದು ಅನೇಕ ವಚನಗಳನ್ನು ಉದಾಹರಿಸಿ ಹೇಳಿದರು.
ಬಸವ ಭಕ್ತಿ ಎಂದರೆ ಬಸವಣ್ಣನವರ ಸಮಾಜೋಧಾರ್ಮಿಕ ಕಾರ್ಯಗಳ ವಿವರಣೆಯೇ ಆಗಿದೆ. ಸಕಲ ಜಾತಿಯ ಲಿಂಗದ ರಾಶಿ ಮಾಡಿದ ಮಹಾನುಭಾವ ಬಸವಣ್ಣ. ಅವರ ವಚನಗಳಲ್ಲಿ ಇಂದಿನ ಎಲ್ಲ ಗೊಂದಲಗಳಿಗೆ ಉತ್ತರವಿದೆ. ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ ಮೊದಲುಗೊಂಡು ಸರ್ವ ಸಮಸ್ಯೆಗಳಿಗೆ ಒಂದೆ ಪರಿಹಾರ ಎಂದರೆ ಬಸವಣ್ಣನವರ ವಚನಗಳು ಎಂದು ಅವರು
ಅಭಿಪ್ರಾಯಪಟ್ಟರು.
ಬಹುಜನರಿಗೆ ಹಿತವಾದ ವಚನ ಸಾಹಿತ್ಯ ಜನಮನದಲ್ಲಿ ಬಿತ್ತುವ ಜವಾಬ್ದಾರಿ ನಮ್ಮ ಮೇಲಿದೆ. ಅಭಿವ್ಯಕ್ತಿ ಸ್ವಾತಂತ್ರ ಮತ್ತು ಸರ್ವ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸುವ ತತ್ವಗಳನ್ನು ಅವರು ನೀಡಿದ್ದೆ ನಿಜವಾದ ಮನುಕುಲದ ಸ್ವಾತಂತ್ರ್ಯ. ಅದುವೇ ವಚನ ವಿಜಯೋತ್ಸವ ಎಂದು ಪ್ರತಿವರ್ಷವು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಡಾ| ಗಂಗಾಂಬಿಕೆ ಅಕ್ಕ ಮಾತನಾಡಿ, ಸಿದ್ಧರಾಮೇಶ್ವರರ ಜೀವನ ಮತ್ತು ಸಂದೇಶಗಳ ಮೇಲೆ ಬೆಳಕು ಚೆಲ್ಲಿದರು. ಪ್ರಪಂಚದಲ್ಲಿ ಪ್ರಚಲಿತವಾಗಿರುವ ಏಳು ಯೋಗಗಳಿಗೂ ಮಿಗಿಲಾದ ಎಂಟನೇ ಯೋಗ ಇಷ್ಟಲಿಂಗ ಯೋಗವನ್ನು ಬಸವಣ್ಣನವರು ಜಗತ್ತಿಗೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ ಎಂದು ಹೇಳಿದರು.
ಸಿಂಡಿಕೆಟ್ ಬ್ಯಾಂಕನ ಚಂದ್ರಶೇಖರ ಪಾಟೀಲ ಷಟಸ್ಥಲ ಧ್ವಜರೋಹಣ ನೆರವೇರಿಸಿದರು. ಡಾ| ಭಾಗೀರಥಿ ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಪಾಟೀಲ ಮತ್ತು ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಬಡತನದಲ್ಲಿಯೇ ಕಷ್ಟಪಟ್ಟು ಓದಿ ಕೆಎಎಸ್ ಅಧಿಕಾರಿಯಾದ ವಡಗಾಂವ ಗ್ರಾಮದ ಖಾಜಾ ಖಲೀಲುಲ್ಲಾ ಅವರನ್ನು ಗೌರವಿಸಲಾಯಿತು.
ಬಸವರಾಜ ಜಕ್ಕಾ, ಶಿವಶಂಕರ ವಡ್ಡಿ, ಧೂಳಪ್ಪ ಬೆಲ್ದಾಳೆ, ರಾಚಯ್ಯ ಸ್ವಾಮಿ, ಸಂತೋಷ ಎಸ್. ಮಾಳೆನವರ ವಲ್ಲೆಪುರ, ಅಮೃತ ಕಂಟೆಪ್ಪ, ಬಸವರಾಜ ಮಸ್ಕಲೆ ಮತ್ತು ಸೋಮನಾಥ ದೇಶಮುಖ ಪಾಲ್ಗೊಂಡಿದ್ದರು. ಗಂಗಪ್ಪ ಸಾವಲೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.