ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವ ಚವ್ಹಾಣ
Team Udayavani, Jan 4, 2021, 4:28 PM IST
ಬಸವಕಲ್ಯಾಣ: ನೂತನ ಅನುಭವಮಂಟಪ ಶಂಕುಸ್ಥಾಪನೆ ಕಾರ್ಯಕ್ರಮನಿಮಿತ್ತ ಜ.6ರಂದು ಮುಖ್ಯಮಂತ್ರಿಬಿ.ಎಸ್. ಯಡಿಯುರಪ್ಪ ನಗರಕ್ಕೆಆಗಮಿಸುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚವ್ಹಾಣ ಮತ್ತು ಜಿಲ್ಲಾ ಧಿಕಾರಿ ಆರ್.ರಾಮಚಂದ್ರನ ಅನುಭವ ಮಂಟಪ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನುಭವ ಮಂಟಪದ ಆವರಣ ಪರಿಶೀಲಿಸಿ ನೂತನ ಅನುಭವಮಂಟಪದ ಶಿಲಾನ್ಯಾಸ ಸ್ಥಳ ಗುರುತಿಸಿದರು. ಈ ಕಾರ್ಯಕ್ರಮಕ್ಕಆಂಧ್ರ ಮತ್ತು ಮಹಾರಾಷ್ಟ್ರ ಸೇರಿದಂತೆ ಸುಮಾರು 25 ಸಾವಿರಕ್ಕೂ ಮೇಲ್ಪಟ್ಟುಬಸವಾಭಿಮಾನಿಗಳು ಬರುವ ನಿರೀಕ್ಷೆಇದ್ದು, ಸಂಪ್ರದಾಯದಂತೆ ಪೂಜೆಗಳು ನಡೆಯಬೇಕು ಮತ್ತು 25 ಸಾವಿರ ಜನ ಕುಳಿತುಕೊಳ್ಳುವಷ್ಟು ಪೆಂಡಾಲ್ ಹಾಕಬೇಕು ಹಾಗೂ ಸಂಚಾರಕ್ಕೆಯಾವುದೇ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ ಮಾತನಾಡಿ,ಅನುಭವ ಮಂಟಪ ಉತ್ಸವಸಂದರ್ಭದಲ್ಲಿ ಪಾಲಿಸುವ ನಿಯಮಮಾಡುತ್ತೇವೆ. ಸಾರ್ವಜನಿಕಬೈಕ್ ಹಾಗೂ ವಾಹನಗಳ ಒಳಗಡೆಪ್ರವೇಶ ವಾಗದಂತೆ ವ್ಯವಸ್ಥೆಮಾಡಲಾಗುವುದು ಹಾಗೂ ವೇದಿಕೆ ಹತ್ತಿರ ಕೇವಲ ಗಣ್ಯ ವ್ಯಕ್ತಿಗಳವಾಹನಗಳು ಬರುವಂತೆ ಪೊಲೀಸ್‌ವ್ಯವಸ್ಥೆ ಮಾಡಲಾಗುವುದು ಎಂದರು.
ಅನುಭವ ಮಂಟಪದ ಅಧ್ಯಕ್ಷಡಾ| ಶ್ರೀ ಬಸವಲಿಂಗ ಪಟ್ಟದ್ದೇವರು,ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀಗುರುಬಸವ ಪಟ್ಟದ್ದೇವರು, ಮಾಜಿಶಾಸಕ ಮಲ್ಲಿಕಾರ್ಜುನ ಖೂಬಾ,ಬಸವಕಲ್ಯಾಣ ಸಹಾಯಕ ಆಯುಕ್ತಭುವನೇಶ ಪಾಟೀಲ, ಎಸ್‌ಪಿಡಿ.ಎಲ್.ನಾಗೇಶ, ತಹಶೀಲ್ದಾರ್‌ಸಾವಿತ್ರಿ ಸಲಗರ, ಬಸವರಾಜಧನ್ನೂರ, ಬಿಜೆಪಿ ಅಧ್ಯಕ್ಷ ಅಶೋಕವಕಾರೆ, ಕೃಷ್ಣ ಗೋಣೆ, ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಕುಂಬಾರ, ದೀಕಪ ಗಾಯಕವಾಡ,ಬಿಜೆಪಿ ಮುಖಂಡ ಶರಣು ಸಲಗರ,ಬೀದರ ನಗರಾಭಿವೃದ್ಧಿ ಅಧ್ಯಕ್ಷ ಬಾಬು ವಾಲಿ ಇತರರಿದ್ದರು.
6 ರಂದು ನೂತನ ಅನುಭವ ಮಂಟಪಕ್ಕೆ ಶಿಲಾನ್ಯಾಸ :
ಬಸವಕಲ್ಯಾಣ: ನೂತನಅನುಭವ ಮಂಟಪ ಶಿಲಾನ್ಯಾಸಕಾರ್ಯಕ್ರಮಕ್ಕೆ ಹೆಚ್ಚಿನಸಂಖ್ಯೆಯಲ್ಲಿ ಬಸವಾಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಯಶಸ್ವಿಗೊಳಿಸಬೇಕೆಂದು ಪಶುಸಂಗೋಪನಾ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ಅನುಭವ ಮಂಟಪದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಜ.6ರಂದು ಸಿಎಯಡಿಯೂರಪ್ಪ ಐತಿಹಾಸಿಕ್ಕೆಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನೂತನ ಅನುಭವ ಮಂಟಪನಿರ್ಮಾಣಕ್ಕಾಗಿ ಈಗಾಗಲೇ 600ಕೋಟಿ ಅನುದಾನ ಮಂಜೂರುಮಾಡಿ, ಅದರಲ್ಲಿ 100 ಕೋಟಿರೂ. ಬಿಡುಗಡೆ ಮಾಡಲಾಗಿದೆಅನುಭವ ಮಂಟಪ 72 ಎಕರಭೂಮಿಯಲ್ಲಿ 182 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಬರುವ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶ್ರೀ ಚನ್ನಬಸವ ಪಟ್ಟದ್ದೇವರ ಸಂಕಲ್ಪದಂತೆ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರುತ್ತಿದೆ. ಇಂಥಹ ಐತಿಹಾಸಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಸಾಕ್ಷಿಯಾಗಬೇಕು ಎಂದರು.
ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ,ದೆಹಲಿಯಲ್ಲಿ ನೂತನ ಸಂಸತ್ ಹಾಗೂ ಬಸವಕಲ್ಯಾಣದಲ್ಲಿ 12ನೇ ಶತಮಾನದ ಸಂಸತ್ ನಿರ್ಮಾಣಕ್ಕಾಗಿ ಶಿಲಾನ್ಯಾಸನೆರವೇರಿಸುತ್ತಿರುವುದು ಸಂತೋಷದಸಂಗತಿ. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ಅರ್ಧಕ್ಕೆ ನಿಲ್ಲಬಾರದು. ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಕಾರ್ಯಕರ್ತರಮತ್ತು ಎಲ್ಲ ಸಮುದಾಯದ ಜನರು ಆಗಮಿಸುವಂತೆ ಮನವಿ ಮಾಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದಶ್ರೀ ಗುರುಬಸವ ಪಟ್ಟದ್ದೇವರು,ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಎಸ್‌ಪಿ ಡಿ.ಎಲ್.ನಾಗೇಶ, ಮಾಜಿಶಾಸಕ ಮಲ್ಲಿಕಾರ್ಜುನ ಖೂಬಾ,ಸಹಾಯಕ ಆಯುಕ್ತ ಭುವನೇಶಪಾಟೀಲ, ತಹಶೀಲ್ದಾರ್ ಸಾವಿತ್ರಿಸಲಗರ, ಬಸವರಾಜ ಧನ್ನೂರ,ಬಿಜೆಪಿ ಅಧ್ಯಕ್ಷ ಅಶೋಕ ವಕಾರೆ,ಕೃಷ್ಣ ಗೋಣೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ದೀಕಪ ಗಾಯಕವಾಡ,ಬಿಜೆಪಿ ಮುಖಂಡ ಶರಣು ಸಲಗರ,ಬೀದರ ನಗರಾಭಿವೃದ್ಧಿ ಅಧ್ಯಕ್ಷ ಬಾಬು ವಾಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.