ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ವಶಕೆ
Team Udayavani, Aug 14, 2017, 12:37 PM IST
ಬೀದರ: ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪೂರ್ಣಗೊಳ್ಳದ ಯೋಜನೆ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ರವಿವಾರ ಪ್ರತಿಭಟನೆ ನಡೆಸಿದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಬಿಜೆಪಿ ಕಬ್ಬು ಬೆಳೆಗಾರರ ವೇದಿಕೆ ಸಂಚಾಲಕ ಡಿ.ಕೆ. ಸಿದ್ರಾಮ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಬಿಜೆಪಿ ಕಚೇರಿ ಬಳಿಯೇ ಪೊಲಿಸರು ಅವರನ್ನು ತಡೆದು ವಶಕ್ಕೆ
ಪಡೆದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೊಸ ಆಸ್ಪತ್ರೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನಗರದಲ್ಲಿನ ರಸ್ತೆಗಳ ದುರಸ್ತಿ ಮುಗಿದಿಲ್ಲ. ಒಳಚರಂಡಿ ಯೋಜನೆ ಅರ್ಧಕ್ಕೆ ನಿಂತಿದೆ. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು
ಪ್ರಚಾರ ಪಡೆಯುವ ಏಕೈಕ ಉದ್ದೇಶದಿಂದ ಸಿಎಂ ಕರೆಸಿ ಚಾಲನೆ ಕೊಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಗರದಲ್ಲಿನ ನಿರಂತರ ನೀರು ಪೂರೈಕೆ ಯೋಜನೆ ಅಪೂರ್ಣವಾಗಿದೆ. ಒಳಚರಂಡಿಯ ಯಾವುದೇ ಒಂದು ಲೈನ್ ಸಹ ಪೂರ್ಣಗೊಂಡಿಲ್ಲ. ಮನೆ ಸಂಪರ್ಕ
ಸೇರಿದಂತೆ ಪ್ರಮುಖ ಕೆಲಸಗಳು ಬಾಕಿ ಉಳಿದಿವೆ. ಇದೊಂದು ರಾಜಕೀಯ ಗಿಮಿಕ್ ಎಂದು ಟೀಕಿಸಿದ ಮುಖಂಡರು, ಸಿಎಂ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂ. ಖಜಾನೆಯ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಹಾಳಾಗಿರುವ ರಸ್ತೆಗಳು ಕೂಡಲೇ ದುರಸ್ತಿಗೊಳ್ಳಬೇಕು. ಒಳಚರಂಡಿ ಮತ್ತು ನೀರಿನ ವ್ಯವಸ್ಥೆ ಗುಣಮಟ್ಟದಿಂದ ಪೂರ್ತಿಗೊಳಿಸಲು ಸೂಚಿಸಬೇಕು. ಕೆರೆ ಒಡೆದು ಭೂಮಿ ಕಳೆದುಕೊಂಡ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ 15 ದಿನದೊಳಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಬೀದರನ್ನು
ಬರಪಿಡಿತ ಜಿಲ್ಲೆ ಎಂದು ಘೋಷಿಸಿ ಕನಿಷ್ಠ 500 ಕೋಟಿ ರೂ. ವಿಷೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಸುರೇಶ ಮಾಶೆಟ್ಟಿ ಮತ್ತು ತೊಗರಿ ಬೆಳೆಗಾರ ಪ್ರಕೋಷ್ಠದ ಅಧ್ಯಕ್ಷ ಕುಶಾಲರಾವ್ ಯಾಬಾ ಇದ್ದರು.
ಟೀಕಿಸುವುದು ಹುಡುಗಾಟ ಆಗಿದೆ ವಿರೋಧ ಪಕ್ಷ ಬಿಜೆಪಿಯವರಿಗೆ ಟೀಕೆ ಮಾಡುವುದು ಹುಡುಗಾಟ ಆಗಿದೆ. ಅವರಂತೂ ಅಭಿವೃದ್ಧಿ
ಕೆಲಸ ಮಾಡುವುದಿಲ್ಲ, ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗಿದೆ.
ನೂತನ ಆಸ್ಪತ್ರೆಯ ಎಲ್ಲ ಕೆಲಸ ಮುಗಿದಿದ್ದು, ನಾಳೆಯಿಂದಲೇ ಸೇವೆ ನೀಡಲಿದೆ. ನಿರಂತರ ನೀರು, ಒಳಚರಂಡಿ ಕಾಮಗಾರಿ
ಸಹ ಮುಗಿದೆ. ನನೆಗುದಿಗೆ ಬಿದ್ದಿದ್ದ ಜಿಲ್ಲಾ ಆಡಳಿತ ಸಂಕೀರ್ಣಕ್ಕೆ ಜಾಗ ಗುರುತಿಸಿ 48 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ
ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ.
ಈಶ್ವರ ಖಂಡ್ರೆ, ಉಸ್ತುವಾರಿ ಸಚಿವರು (ಕಾಮಗಾರಿ ಉದ್ಘಾಟನೆ ಸಮಾರಂಭದಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.