ವಿಜಯಸಿಂಗ್ ಗೆ ತಪ್ಪಿದ ಟಿಕೆಟ್-ಪ್ರತಿಭಟನೆ
Team Udayavani, Mar 24, 2021, 8:08 PM IST
ಬಸವಕಲ್ಯಾಣ: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರಿಗೆ ಟಿಕೆಟ್ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿಜಯಸಿಂಗ್ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೇಳಿದರೂ ನೀಡಲಿಲ್ಲ. ಈಗ ಕ್ಷೇತ್ರದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್‌ಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಸಂಘಟನೆಗೆ ನಿರಂತರ ದುಡಿಯುತ್ತಿರುವ ವಿಜಯಸಿಂಗ್ ಅವರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಉಪ ಚುನಾವಣೆಯಲ್ಲಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರೂ ಟಿಕೆಟ್ ನೀಡಿಲ್ಲ. ಮುಂದಿನ ದಿನಗಳಲ್ಲಿ ಹೀಗಾದಂತೆ ವರಿಷ್ಠರು ಮುಂಜಾಗ್ರತೆ ವಹಿಸಬೇಕೆಂದು ಡಿ.ಕೆ. ಶಿವಕುಮಾರ ಅವರಿಗೆ ಬರೆದ ಮನವಿ ಪತ್ರ ತಾಲೂಕು ಉಪಾಧ್ಯಕ್ಷ ಡಿ.ಕೆ. ದಾವುದ್‌ಗೆ ಸಲ್ಲಿಸಿದರು.\
ಪಕ್ಷದ ಪ್ರಧಾನ ಕಾರ್ಯದರ್ಶಿ ಸೋನುಸಿಂಗ್ ಹಜಾರಿ ಮಾತನಾಡಿ, ಬಿ.ನಾರಾಯಣರಾವ್ ನಿಧನದ ನಂತರ ಕಾರ್ಯಕರ್ತರ ಸಮಸ್ಯೆ ಆಲಿಸಲು ಯಾರೂ ಇರಲಿಲ್ಲ. ಅಂಥಹ ಸಂದರ್ಭದಲ್ಲಿ ವಿಜಯಸಿಂಗ್ ಪ್ರತಿ ಹಳ್ಳಿಹಳ್ಳಿಗೂ ತಿರುಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಯೋಗೇಶ ಗುತ್ತೆದಾರ, ಸೈಯದ್ ಇಫೆ¤ಕಾರ, ಬಾಬುಸಿಂಗ್ ಹಜಾರಿ, ಸಂತೋಷ ಗುತ್ತೆದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Robbery: ಬೀದರ್ ದರೋಡೆ ಬಿಹಾರಿ ಗ್ಯಾಂಗ್ ಕೃತ್ಯ: ಪೊಲೀಸರು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.