![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 18, 2021, 3:14 PM IST
ಕೆಂಭಾವಿ: ಕುರುಬ ಸಮಾಜದ ಮುಖಂಡರ ಮೇಲೆ ದೌರ್ಜನ್ಯ ನಡೆಸಿ ಅವರ ಮೇಲೆ ಹಲ್ಲೆ ಮಾಡಿದ ಮತ್ತು ಸಮಾಜದ ಗುರುಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ ಅನ್ಯ ಸಮಾಜದ ಮುಖಂಡನನ್ನು ಬಂಧಿಸಬೇಕು ಮತ್ತು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಕುರುಬ ಸಂಘ ಸುರಪುರ ಹಾಗೂ ಹುಣಸಗಿ ತಾಲೂಕಿನ ಸಾವಿರಾರು ಕುರುಬ ಸಮಾಜದ ಜನತೆ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಕನಕದಾಸ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಹಳೆ ಬಸ್ ನಿಲ್ದಾಣದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ವೇಳೆ ಮಾತನಾಡಿದ ಸಮಾಜದ ಹಲವಾರು ಮುಖಂಡರು, ಕಳೆದ ಹಲವು ವರ್ಷಗಳಿಂದ ಅಗತೀರ್ಥ ಗ್ರಾಮದಲ್ಲಿ ವಿವಿಧ ಸಮಾಜದ ಜನತೆ ಬದುಕು ಮಾಡುವುದೆ ದುಸ್ತರವಾಗಿದೆ ಎಂದರು.
ಪ್ರತಿಭಟನೆಯಿಂದ ಸುರಪುರ-ಹುನಗುಂದ, ಕೆಂಭಾವಿ-ತಾಳಿಕೋಟ, ನಾರಾಯಣಪುರ- ಮಲ್ಲಾ ರಸ್ತೆಗಳು ಬಂದ್ ಆಗಿ ಪ್ರಯಾಣಿಕರು ಪರದಾಡಿದರು. ನಂತರ ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನಾ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಡಿವೈಎಸ್‌ಪಿ ವೆಂಕಟೇಶ ಹುಗಿಬಂಡಿ ಅವರ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಸಮಾಜದ ಹಿರಿಯ ಮುಖಂಡರಾದ ಯಲ್ಲಪ್ಪ ಕುರಕುಂದಿ, ಮರಿಗೌಡ ಹುಲಕಲ್, ಡಾ. ಭೀಮಣ್ಣ ಮೇಟಿ, ಕಾಳಪ್ಪ ಕವಲಿ, ನಿಂಗಣ್ಣ ಬಾಚಿಮಟ್ಟಿ, ಮಲ್ಲು ದಂಡಿನ, ರಂಗನಗೌಡ ದೇವಿಕೇರಿ, ಸಿದ್ಧನಗೌಡ ಕಾಡಮನೂರ, ಗಿರೆಪ್ಪಗೌಡ ಬಾಣತಿಹಾಳ, ಶರಣಪ್ಪ ಯಾಳಗಿ, ಕೆಂಚಪ್ಪ ತುಂಬಗಿ, ಶಾಂತಪ್ಪ ಯರಗಲ್, ದೇವೇಂದ್ರಪ್ಪ ಯಾಳಗಿ, ಭೀಮರಾಯ ಮೂಲಿಮನಿ, ಪರಶುರಾಮ ಚೌಧರಿ ಸೇರಿದಂತೆ ಯಾದಗಿರಿ, ರಾಯಚೂರ, ವಿಜಯಪುರ, ಕಲಬುರಗಿ, ಬಾಗಲಕೋಟ ಜಿಲ್ಲೆಯಿಂದ ಸಾವಿರಾರು ಸಮಾಜದ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.