ವಚನ ವಿಜಯೋತ್ಸವಕ್ಕೆ ಬೀದರ ಸಿದ್ಧ
Team Udayavani, Jan 29, 2018, 1:18 PM IST
ಬೀದರ: ನಗರದ ಪವೀತ್ರ ಕ್ಷೇತ್ರ ಬಸವಗಿರಿ ಪರಿಸರದಲ್ಲಿ ಜ.29ರಿಂದ ಮೂರು ದಿನಗಳ ಕಾಲ ಜರುಗಲಿರುವ
18ನೇ ವಚನ ವಿಜಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಹತ್ತು ಸಾವಿರ ಜನರು ಕುಳಿತುಕೊಳ್ಳಲು
ಅನುವಾಗವಂತೆ ಶರಣಕವಿ ಸರ್ವಜ್ಞ ಮಹಾಮಂಟಪ ಮತ್ತು ಡಾ| ಎಂ.ಎಂ. ಕಲಬುರ್ಗಿ ವೇದಿಕೆ ನಿರ್ಮಾಗೊಂಡಿದೆ.
ವಿಜಯೋತ್ಸವಕ್ಕೆ ಆಗಮಿಸುವ ಶರಣ-ಶರಣೆಯರ ಹಸಿವು ತಣಿಸಲು “ನೀಲಮ್ಮನ ದಾಸೋಹ ಮಂಟಪ’ ತಲೆಯೆತ್ತಿದ್ದು, ಏಕ ಕಾಲಕ್ಕೆ ಸಾವಿರಾರು ಜನ ಪ್ರಸಾದ ಸೇವಿಸಬಹುದು. ಸ್ಥಳೀಯರಿಗೆ ಹೊರ ಜಿಲ್ಲೆಯ ಅತಿಥಿಗಳು ಮತ್ತು ಗಣ್ಯರಿಗೆ ಬೇರೆ ಬೇರೆ ಕಡೆ ಅಂದರೆ ಮೂರು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಚನ ವಿಜಯೋತ್ಸವಕ್ಕೆ ಆಗಮಿಸುವ ಜನರನ್ನು ಸ್ವಾಗತಿಸಲು ನಗರದಾದ್ಯಂತ 40 ಸ್ವಾಗತ ಕಮಾನಗಳನ್ನು ಹಾಕಿ ನಗರವನ್ನು ಶೃಂಗರಿಸಲಾಗಿದೆ.
ಮೂರು ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು. ಗೋದಿ ಹುಗ್ಗಿ, ರೊಟ್ಟಿ, ಚಟ್ನಿ, ಭಜ್ಜಿ,
ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಅನ್ನ, ಸಾಂಬಾರ್ ಪ್ರಸಾದ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಭಕ್ತರು ಸಾವಿರ-ಸಾವಿರ ರೊಟ್ಟಿಗಳನ್ನು ತಯಾರಿಸಿ ದಾಸೋಹಕ್ಕೆ ಸಲ್ಲಿಸುತ್ತಿದ್ದಾರೆ. ನಗರದ ಎಲ್ಲ ಭಾಗಗಳಿಂದ ಬಸವಗಿರಿಗೆ ಆಗಮಿಸಲು ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿದೆ.
ಜ.29ರಂದು ಬೆಳಗ್ಗೆ 8ಕ್ಕೆ ಹಿರಿಯರಾದ ಪಿ.ಸಂಗಪ್ಪ ಅವರಿಂದ ಷಟ್‌ಸ್ಥಲ ಧ್ವಜಾರೋಹಣ ಮತ್ತು ಗುರುವಚನ ಪರುಷಕಟ್ಟೆಯಲ್ಲಿ ಧರ್ಮ ಗ್ರಂಥ ಗುರುವಚನಕ್ಕೆ ಗೌರವ ಸಲ್ಲಿಸುವುದರೊಂದಿಗೆ ವಚನ ವಿಜಯೋತ್ಸವದ ಕಾರ್ಯಕಲಾಪಗಳು ಆರಂಭವಾಗುವವು. ನಂತರ ಅಕ್ಕ ಅನ್ನಪೂರ್ಣತಾಯಿ ಮತ್ತು ಡಾ| ಗಂಗಾಂಬಿಕೆ
ಅಕ್ಕನವರ ಮಾರ್ಗದರ್ಶನದಲ್ಲಿ ಸಾಮೂಹಿಕ ಇಷ್ಠಲಿಂಗ ಯೋಗ ಸಂಪನ್ನಗೊಳ್ಳುವುದು. ಬೆಳಗ್ಗೆ 11ಕ್ಕೆ ಉತ್ಸವದ ಉದ್ಘಾಟನಾ ಸಮಾರಂಭ ಮತ್ತು ಯುವ ಪ್ರೇರಣಾ ಸಮಾವೇಶಕ್ಕೆ ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡುವರು.
ಶಿಕ್ಷಣ ತಜ್ಞ ಕೆ.ಇ. ರಾಧಾಕೃಷ್ಣ, ವ್ಯಕ್ತಿತ್ವ ವಿಕಸನ ತರಬೇತಿದಾರ ಎಸ್.ಜಿ. ಪಾಟೀಲ ಮತ್ತು ಅಂತಾರಾಷ್ಟ್ರೀಯ
ಶ್ರೇಷ್ಠ ನೇತ್ರ ತಜ್ಞ ಡಾ| ಚಂದ್ರಪ್ಪಾ ಎಸ್. ರೇಷ್ಮೆ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು. ಈ
ಸಂದರ್ಭದಲ್ಲಿ ಕಾರ್ಗಿಲ್ ಹೀರೋ ಕ್ಯಾ| ನವೀನ ನಾಗಪ್ಪಾ ಅವರಿಗೆ ವೀರಮಾತೆ ಅಕ್ಕ ನಾಗಲಾಂಬಿಕಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
ಶರಣರ ತ್ಯಾಗ ಬಲಿದಾನದ ಸ್ಮರಣೆಗಾಗಿ ಪ್ರತಿ ವರ್ಷವೂ ಆಚರಿಸಿಲಾಗುತ್ತಿರುವ “ವಚನ ವಿಜಯೋತ್ಸವ’ಕ್ಕೆ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು, ನೆರೆ ಜಿಲ್ಲೆಗಳಿಂದಲೂ ಶರಣ ಸಂಕುಲ ಆಗಮಿಸುತ್ತಿರುವುದು ಬೀದರ ಜಿಲ್ಲೆಯ ಹೆಮ್ಮೆಯಾಗಿದೆ.
ಅಕ್ಕ ಅನ್ನಪೂರ್ಣ ತಾಯಿ
ಈ ಸಲದ ವಚನ ವಿಜಯೋತ್ಸವದಲ್ಲಿ ಯುವ ಪ್ರೇರಣೆ, ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಕುರಿತು ಗೋಷ್ಠಿಗಳನ್ನು ಏರ್ಪಡಿಸಿರುವುದು ವಿಶೇಷ. ಮೂರು ದಿನಗಳ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ.
ನೀಲಮ್ಮ ರೂಗನ, ಅಧ್ಯಕ್ಷರು, ಸ್ವಾಗತ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.