ನಂದವಾಡಗಿ ಏತ ನೀರಾವರಿ: 30 ಹಳ್ಳಿಗಳ ಮರು ಸೇರ್ಪಡೆಗೆ ಆಗ್ರಹ
Team Udayavani, May 13, 2022, 5:32 PM IST
ಮುದಗಲ್ಲ: ಈ ಭಾಗದ ರೈತರ ಜೀವನಾಡಿಯಾದ ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಕೈ ತಪ್ಪಿರುವ 33 ಹಳ್ಳಿಗಳನ್ನು ಪುನರ್ ಸೇರ್ಪಡೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ನಂದವಾಡಿ ಏತ ನೀರಾವರಿ (ಆರ್.ಎಲ್.590) ಹೋರಾಟ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ್ ತುರಡಗಿ ಸಿಎಂ ಆಪ್ತಕಾರ್ಯದರ್ಶಿ ಅನಿಲ್ ಕುಮಾರ ಅವರಿಗೆ ಸಲ್ಲಿಸಿದರು.
ಹೂನೂರು, ತುರಡಗಿ, ಮಾಕಾಪೂರ, ತಲೆಕಟ್ಟು, ಮರಳಿ, ಅಂಕಲಿಮಠ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ರಾಮತ್ನಾಳ, ವ್ಯಾಕರನಾಳ, ನಾಗಲಾಪುರ, ಉಳಿಮೇಶ್ವರ, ಪಿಕಳಿಹಾಳ, ಹೆಗ್ಗಾಪೂರ ತಾಂಡಾ, ಹೆಗ್ಗಾಪುರ, ಕೋಮಲಾಪುರ, ಕನಸಾವಿ, ಆದಾಪೂರ, ಬನ್ನಿಗೋಳ, ಚಿಕ್ಕಯರದಿಹಾಳ, ಹಿರೇಯರದಿಹಾಳ, ಜನತಾಪುರ, ಕೆ.ಮರಿಯಮ್ಮನಹಳ್ಳಿ, ಮುದಗಲ್ಲ, ಕನ್ನಾಪೂರಹಟ್ಟಿ, ಬೆಳ್ಳಿಹಾಳ, ಕಾಚಾಪುರ, ಆಶಿಹಾಳ, ಆಶಿಹಾಳ ತಾಂಡಾ, ಮೆಗಳಪೇಟೆ ಸೇರಿದಂತೆ ಹಲವು ಗ್ರಾಮಗಳು ಬಸವಸಾಗರ ಜಲಾಶಯ ಸಮೀಪದಲ್ಲಿಯೇ ಇದ್ದರೂ ಸಹ ನೀರಾವರಿಯಿಂದ ವಂಚಿತವಾಗಿವೆ.
ಸತತ ಬರ ಪರಸ್ಥಿತಿಯಿಂದ ಇಲ್ಲಿನ ಜನರು ದನಕರುಗಳನ್ನು ಸಾಗಿಸಿಕೊಂಡು ದೂರದ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಇದರಿಂದ ಇಲ್ಲಿನ ಜನರ ಆರ್ಥಿಕ ಪರಸ್ಥಿತಿ ಹದೇಗೆಟ್ಟಿದೆ. ಕಾರಣ ನೀರಾವರಿ ಯೋಜನೆಯಿಂದ ಕೈ ಬಿಟ್ಟಿರುವ ಗ್ರಾಮಗಳನ್ನು ನಂದವಾಡಿ ಏತ ನೀರಾವರಿ ವ್ಯಾಪ್ತಿಗೆ ಸೇರಿಸಬೇಕೆಂಬುವುದು ಇಲ್ಲಿನ ಜನರ ಮತ್ತು ಸಮಿತಿಯ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.