ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ
Team Udayavani, Feb 24, 2022, 12:50 PM IST
ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಅಧಿಧೀನದ ಊಟಿ ಚಿನ್ನದ ಗಣಿಯಲ್ಲಿ ಇತ್ತೀಚೆಗೆ ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಲಾಯಿತು.
ಟೆಕ್ನೋ ಮೈನ್ ಕನ್ಸ್‌ಟ್ರಕ್ಷನ್ಸ್ ಲಿಮಿಟೆಡ್ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ, ಭೂಮಿಯ 700 ಆಳದಲ್ಲಿ ಕೆಲಸ ಮಾಡುವಾಗ ಮಣ್ಣು ಕುಸಿದು ಸಾವನ್ನಪ್ಪಿದ್ದರು. ಮೃತ ಕಾರ್ಮಿಕನಿಗೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಹಟ್ಟಿಚಿನ್ನದಗಣಿ ಪ.ಜಾ/ಪ.ಪಂ ಗಳ ನೌಕರರ ಸಂಘದ ಮುಖಂಡರು ಹಾಗೂ ಕರ್ನಾಟಕ ಜಾಗೃತ ರೈತ ಸಂಘದ ಮುಖಂಡರು ಒತ್ತಾಯಿಸಿದ್ದರು.
ಇದೀಗ ಊಟಿಯಲ್ಲಿರುವ ಮೃತ ಕಾರ್ಮಿಕನ ಮನೆಗೆ ತೆರಳಿದ ಟೆಕ್ನೋ ಮೈನ್ ಕಂಪನಿಯ ಅಧಿಕಾರಿಗಳು ಹಾಗೂ ಪ.ಜಾ/ಪ.ಪಂ ಗಳ ನೌಕರರ ಸಂಘದ ಮುಖಂಡರು ಮೃತನ ಪತ್ನಿ ಸಿದ್ದಮ್ಮರವರಿಗೆ 1 ಲಕ್ಷ ರೂ. ನಗದು ಪರಿಹಾರ ವಿತರಣೆ ಮಾಡಿದರು.
ಇನ್ನುಳಿದ 19 ಲಕ್ಷ ರೂ.ಗಳನ್ನು ಕಾರ್ಮಿಕ ಆಯುಕ್ತರ ಮೂಲಕ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆ ಟೆಕ್ನೋ ಮೈನ್ ಕಂಪನಿಯ ಅಧಿಕಾರಿಗಳಾದ ಮಾಧವರಾವ್, ನಾಗರಾಜ, ಹಟ್ಟಿಚಿನ್ನದಗಣಿ ಪ.ಜಾ/ಪ.ಪಂ ಗಳ ನೌಕರರ ಸಂಘದ ಅಧ್ಯಕ್ಷ ಜಮದಗ್ನಿ ಕೋಠಾ, ಪ್ರ.ಕಾ ಶರಣಗೌಡ ಗುರಿಕಾರ, ಸೋಮಣ್ಣ ನಾಯಕ, ರಾಜುಗೌಡ ಗುರಿಕಾರ್, ನಾಗಪ್ಪ ಗೌಡೂರು, ಆನಂದ ಕೋಠಾ, ನಿಂಗಪ್ಪ ಯರಡೋಣ, ಭರತ್, ದುರುಗಪ್ಪ ಊಟಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಬಸವಲಿಂಗಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.