ಹಸಿದ ಹೊಟ್ಟೆಗೆ ಯುವಕರಿಂದ ನಿತ್ಯ ಅನ್ನ ದಾಸೋಹ

ಸೈದಾಪುರದಲ್ಲಿ 27 ದಿನಕ್ಕೆ ಕಾಲಿಟ್ಟ ಯುವಕರ ಮಾನವೀಯ ಮೌಲ್ಯ ಕಾರ್ಯ

Team Udayavani, Apr 23, 2020, 11:35 AM IST

23-April-05

ಸೈದಾಪುರ: ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಪೊಟ್ಟಣ ವಿತರಿಸುತ್ತಿರುವುದು

ಸೈದಾಪುರ: ಒಂದೆಡೆ ಕೋವಿಡ್ ವೈರಸ್‌ ವಿಶ್ವದಲ್ಲೆಡೆ ಅನಾಹುತ ಸೃಷ್ಠಿಸುತ್ತಿದ್ದರೆ, ಮೊತ್ತೊಂದೆಡೆ ಮಾನವಿಯ ಮೌಲ್ಯಗಳನ್ನು ಅನಾವರಣ ಮಾಡುವಲ್ಲೂ ಕಾರಣವಾಗಿದೆ. ಕೋವಿಡ್ ವೈರಸ್‌ ಹಲವಾರು ಸಮಸ್ಯೆಗಳಿಗೆ ಕೇಂದ್ರ ಬಿಂದುವಾಗಿದೆ. ಅದರಲ್ಲಿ ಮಾನವ, ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರದ ಸಮಸ್ಯೆಯೂ ಒಂದಾಗಿದೆ. ತೀರಾ ಬಡವರಿಗೆ, ನಿರ್ಗತಿಕರಿಗೆ ಎಂದಿನಂತೆ ಆಹಾರ ದೊರೆಯದೆ ತೀವ್ರ ಸಂಕಷ್ಟ ಎದುರಾಗಿದೆ. ಇದೇ ಈಗ ಕೆಲವರಿಗೆ ನೆರವು ನೀಡುವಂತ ಅವಕಾಶ ಸಿಕ್ಕಂತಾಗಿದೆ. ಪಟ್ಟಣದ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡ ಹತ್ತು ಜನ ಯುವಕರು ಸ್ವಂತ ಹಣದಿಂದ ನಿತ್ಯ ಎರಡು ಬಾರಿ ಪಟ್ಟಣದಾದ್ಯಂತ ಸಂಚರಿಸಿ ಆಹಾರದ ಅಗತ್ಯ ಇದ್ದರವರು ಮತ್ತು ಕರ್ತವ್ಯನಿರತರನ್ನು ಗುರುತಿಸಿ ಗುಣಮಟ್ಟದ ಆಹಾರ, ಶುದ್ಧನೀರು ಮತ್ತು ಮಜ್ಜಿಗೆ ಪೂರೈಸುತ್ತಿದ್ದಾರೆ.

ಪಟ್ಟಣದಾದ್ಯಂತ ಸಂಚರಿಸಿ ತೀರಾ ಬಡವರು, ಕೂಲಿ ಕಾರ್ಮಿಕರು ನಿರ್ಗತಿಕರು, ಬೇರೆ ಗ್ರಾಮದಿಂದ ಬಂದವರು ಊಟ ಸಿಗದಿದ್ದವರಿಗೆ, ಕರ್ತವ್ಯನಿರತ ಪೊಲೀಸರು, ಆರೋಗ್ಯ ಸಿಬ್ಬಂದಿ, ಗೃಹ ರಕ್ಷಕ ದಳದವರು ಸೇರಿದಂತೆ ಕೇಳಿ ಪಡೆಯುವವರಿಗೆ ಊಟ ಒದಗಿಸುತ್ತಿದ್ದಾರೆ. ದಿನನಿತ್ಯ ಕನಿಷ್ಠ ಮಧ್ಯಾಹ್ನ 450ರಿಂದ 500 ಜನಕ್ಕೆ ಊಟ ಮತ್ತು ಸಂಜೆ 100ರಿಂದ 150 ಜನಕ್ಕೆ ಆಹಾರ ಪೊಟ್ಟಣ ವಿತರಿಸುತ್ತಿದ್ದಾರೆ. ಜತೆಗೆ ಶುದ್ಧ ನೀರಿನ ಬಾಟಲ್‌ ಮತ್ತು ಮಜ್ಜಿಗೆ ಇರುತ್ತದೆ.

ವಿತರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ವಿವಿಧ ವೃತ್ತಿಯಲ್ಲಿರುವ ಪಟ್ಟಣದ ಯುವಕರಾದ ರವಿ ಪಾಟೀಲ ಜೋಳದಡಗಿ, ಗುರುಲಿಂಗಯ್ಯಸ್ವಾಮಿ ಹಿರೇಮಠ, ನಾಗರಾಜ ಗೂಡೂರ, ರಮೇಶ ಹೋಟೆಲ್‌, ಬಸವರಾಜ, ಸಂದೀಪ ಗುಮಡಾಲ್‌, ಮಹೇಶ ವಡವಟ್‌, ರಾಜು ಹೂಗಾರ ಸೇರಿದಂತೆ ಇತರರು ಲಾಕ್‌ ಡೌನ್‌ ಘೋಷಣೆಯಾದ ಎರಡು ಮೂರು ದಿನಗಳ ನಂತರ ಇಲ್ಲಿಯವರೆಗೆ ಕಳೆದ 27 ದಿನಗಳಿಂದ ನಿರಂತರವಾಗಿ ಒಂದಿನಿತು ತಪ್ಪದೆ ಆಹಾರ ಪೊಟ್ಟಣ ಪೂರೈಸುತ್ತಿದ್ದಾರೆ. ಯುವಕರು ಬೆಳಗ್ಗೆ ಮಾರುಕಟ್ಟೆಗೆ ತೆರಳಿ ನೇರವಾಗಿ ರೈತರಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ತರಕಾರಿ ಖರೀ ಸುತ್ತಿದ್ದಾರೆ. ಇದರ ಜತೆ ರೈತರ ನೆರವಿಗೂ ಧಾವಿಸಿದ್ದಾರೆ. ಉತ್ತಮ ಬೆಲೆ ಕೊಡುವುದರಿಂದ ರೈತರು ಯುವಕರು ಬರುವುದನ್ನೇ ನೀರಿಕ್ಷಿಸುತ್ತಿರುತ್ತಾರೆ. ಇನ್ನು ಯುವಕರ ಮಾದರಿ ಕಾರ್ಯ ನೋಡಿದ ಕೆಲ ರೈತರು ತರಕಾರಿಯನ್ನು ಉಚಿತವಾಗಿ ನೀಡಿದ ಉದಾಹರಣೆಗಳಿವೆ.

ಯುವಕರು ಕೊರೊನಾ ಮುಂಜಾಗೃತ ಕ್ರಮ ಕೈಗೊಂಡು ಸ್ವಚ್ಛತೆಯಿಂದ ಮಸಾಲ್‌ ರೈಸ್‌, ಟಮೋಟೊ ರೈಸ್‌, ಜೀರಾ ರೈಸ್‌, ಕರ್ಡ್‌ ರೈಸ್‌, ವೆಜಿಟೆಬಲ್‌ ರೈಸ್‌ ತಯಾರಿಸುತ್ತಾರೆ. ದಿನವೊಂದಕ್ಕೆ 4500 ರಿಂದ 5000 ರೂ. ವರೆಗೆ ತಮ್ಮ ಸ್ವಂತ ಹಣ ವಿನಿಯೋಗಿಸುತ್ತಿದ್ದಾರೆ.

ನಮ್ಮ ಗೆಳೆಯರು ಸೇರಿಕೊಂಡು ಊಟದ ಪೊಟ್ಟಣ ವಿತರಿಸುತ್ತಿದ್ದೇವೆ. ಯಾರಿಗೆ ಆಹಾರದ ಅವಶ್ಯಕತೆ ಇದೆಯೋ ಅಂತವರನ್ನು ಗುರುತಿಸಿ ಅವಂತವರಿಗೆ ಆಹಾರ ವಿತರಿಸುತ್ತಿದ್ದೇವೆ. ಮೇ 3ರ ವರೆಗೆ ಆಗುವಷ್ಟು ಆಹಾರ ಸಾಮಗ್ರಿ ಶೇಖರಣೆ ಮಾಡಿಕೊಂಡಿದ್ದೇವೆ. ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇವೆ.
ರವಿ ಪಾಟೀಲ ಜೋಳದಡಗಿ,
ಊಟ ವಿತರಿಸುವ ತಂಡದ ಸದಸ್ಯ

ಈ ಸಂಕಷ್ಟ ಸಮಯದಲ್ಲಿ ಪ್ರತಿಯೊಬ್ಬರು ಇನ್ನೊಬ್ಬರ ಕಷ್ಟಗಳಿಗೆ ನೆರವಾಗಬೇಕು. ಅದರಂತೆ ಇಲ್ಲಿನ ಯುವಕರು ತಮ್ಮ ಸ್ವಂತ ಹಣದಿಂದ ಬಡವರು ಸೇರಿದಂತೆ ಅಗತ್ಯವಿದ್ದವರಿಗೆ ನಿರಂತರವಾಗಿ ಊಟದ ಪೊಟ್ಟಣ ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ ಮತ್ತು ಇತರರಿಗೆ ಮಾದರಿಯಾಗಿದೆ.
ಸುವರ್ಣಾ ಮಾಲಶೆಟ್ಟಿ,
ಪಿಎಸ್‌ಐ ಸೈದಾಪುರ

ನಾವು ದಿನನಿತ್ಯ ಸಣ್ಣ ಪುಟ್ಟ ವ್ಯಾಪಾರ ಮಾಡಿ ಬಂದ ಆದಾಯದಿಂದ ಉಪ ಜೀವನ ಸಾಗಿಸುತ್ತಿದ್ದೇವೆ. ಆದರೆ ಲಾಕ್‌ಡೌನ್‌ದಿಂದಾಗಿ ಮನೆಯಲ್ಲಿಯೇ
ಕುಳಿತುಕೊಂಡಿದ್ದೇವೆ. ಆದರಿಂದ ನಮಗೆ ಆಹಾರದ ಸಮಸ್ಯೆ ಎದುರಾಗಿತ್ತು. ಆದರೆ ಇಲ್ಲಿನ ಯುವಕರು ದಿನಾನಿತ್ಯ ನಮ್ಮ ಗುಡಿಸುಲಿಗೆ ಬಂದು ಆಹಾರ ವಿತರಣೆ ಮಾಡುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ.
ಮಹೇಶ ಅಲೆಮಾರಿ ಸ,
ಉದಾಯದ ಯುವಕ ಸೈದಾಪುರ

ಭೀಮಣ್ಣ ಬಿ. ವಡವಟ್‌

ಟಾಪ್ ನ್ಯೂಸ್

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

3-bhalki

Bhalki: ಬಸವೇಶ್ವರ ಪುತ್ತಳಿ ಕಿಡಿಗೇಡಿಗಳಿಂದ ವಿರೂಪ; ಪ್ರತಿಭಟನೆ

Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ

Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.