ಕೌಠಾ ಗ್ರಾಮದಲ್ಲಿಲ್ಲ ನೈರ್ಮಲ್ಯ
Team Udayavani, Sep 23, 2017, 10:08 AM IST
ಔರಾದ: ಗ್ರಾಮೀಣ ಭಾಗದಲ್ಲಿ ಜನರಿಗೆ ಸ್ವತ್ಛತೆ ಕಾಪಾಡಿ ಎಂದು ಡಂಗುರ ಸಾರುವ ಕೌಠಾ ಗ್ರಾಮ ಪಂಚಾಯಿತಿ
ಕೇಂದ್ರಸ್ಥಾನವೇ ಅಸ್ವತ್ಛತೆಯಿಂದ ಕೂಡಿದೆ. ಗ್ರಾಮದ ಬಡಾವಣೆಗಳಲ್ಲಿ ಚರಂಡಿಗಳಿಲ್ಲದೇ ಮಲಿನ ನೀರು ರಸ್ತೆಗೆ
ಹರಿದು ದುರ್ವಾಸನೆ ಹರಡಿದ್ದು, ರಸ್ತೆಗಳು ಕೆಸರು ಗದ್ದೆಯಂತಾಗಿವೆ.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ ಕಾಪಾಡುವುದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿವರ್ಷ ವಿನೂತನ ಕಾರ್ಯಕ್ರಮಗಳ ಮೂಲಕ ಜನರ ಮನಸು ಪರಿವರ್ತನೆ ಮಾಡಲು ಮುಂದಾಗುತ್ತಿವೆ. ಆದರೆ ಕೌಠಾ ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ರಸ್ತೆಯಲ್ಲಿ ಕಸದ ರಾಶಿ ತುಂಬಿಕೊಂಡಿವೆ.
ಗ್ರಾಮದ ರಸ್ತೆ ಪಕ್ಕದಲ್ಲಿ ಚರಂಡಿಗಳು ಇಲ್ಲದಿರುವುದರಿಂದ ಬಡಾವಣೆ ನಿವಾಸಿಗಳ ಮನೆಯ ಮಲಿನ ನೀರು
ಹಾಗೂ ಮಳೆ ನೀರು ರಸ್ತೆ ಮೇಲೆ ನಿಂತು ರಸ್ತೆಗಳು ಹಾಳಾಗಿ ಕೆಸರು ಗದ್ದೆಯಂತಾಗಿವೆ. ರಸ್ತೆಯಲ್ಲಿ ಸಂಚರಿಸುವವರು ಬಿದ್ದು ತಮ್ಮ ಕೈ ಕಾಲುಗಳನ್ನು ಮುರಿದುಕೊಳ್ಳುವ ಆತಂಕ ಕಾಡುತ್ತಿದೆ.
ಗ್ರಾಮದ ದಲಿತ, ಎಸ್ಟಿ ಹಾಗೂ ಮಾದಿಗ ಸಮುದಾಯದ ಬಡಾವಣೆಯ ಜನರರಿಗೆ ನಿತ್ಯ ಕುಡಿಯುವ ನೀರು ಪೂರೈಸುವ ಪೈಪ್ಲೈನ್ಗಳು ಈ ಮೋರಿ ನೀರಿನ ಮೇಲೆಯೇ ಹಾದು ಹೋಗುತ್ತವೆ. ಅದಲ್ಲದೇ ನೀರಿನ ನಲ್ಲಿಗಳು ಕೂಡ ತಿಪ್ಪೆಗುಂಡಿಯಲ್ಲಿ ಇವೆ. ಹಾಗಾಗಿ ಮೂರು ಬಡಾವಣೆಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವಿಸುವ ಅನಿವಾರ್ಯತೆ ಇದೆ.
ಗ್ರಾಮದ ಕೆಲ ಬಡಾವಣೆಯಲ್ಲಿ ತಿಪ್ಪೆಗುಂಡಿಗಳನ್ನು ರಸ್ತೆ ಮೇಲೆ ಮಾಡಲಾಗಿದೆ. ಇದರಿಂದ ಮಲಿನ ನೀರು
ಎರಡು ಬಡಾವಣೆಗಳ ಮಧ್ಯದಲ್ಲಿ ನಿಂತು, ಇಲ್ಲಿನ ನಿವಾಸಿಗಳು ನಿತ್ಯ ದುರ್ವಾಸನೆ ಅನುಭವಿಸುವಂತಾಗಿದೆ. ಅಲ್ಲದೇ ರೋಗ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿತು ಬಗೆ ಹರಿಸಲು ಮುಂದಾಗಬೇಕಾದ ಗ್ರಾಮ ಪಂಚಾಯಿತಿ, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.
ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.