ವ್ಯಾಪಾರಿ ಪುತ್ರಿ ಬೀದರಗೆ ಟಾಪರ್

Team Udayavani, Jun 19, 2022, 10:43 AM IST

4PUC

ಬೀದರ: ಕೋವಿಡ್‌ ಸಂಕಷ್ಟದ ನಡುವೆಯೂ ನಿರಂತರ ಅಧ್ಯಯನ, ಕಠಿಣ ಪರಿಶ್ರಮದ ಮೂಲಕ ವ್ಯಾಪಾರಿಯ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಶೇ.98.05ರಷ್ಟು ಅಂಕ ಗಳಿಸಿ ಜಿಲ್ಲೆಗೆ ಟಾಪರ್‌ ಆಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ. ಇದರೊಂದಿಗೆ ನೀಟ್‌ನಲ್ಲಿ ಉತ್ತಮ ರ್‍ಯಾಂಕ್‌ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸಿಗೆ ರೆಕ್ಕೆ ಕಟ್ಟಿದ್ದಾಳೆ.

ಭಾಲ್ಕಿ ತಾಲೂಕಿನ ಕರಡ್ಯಾಳ್‌ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿನಿ ಸೃಷ್ಠಿ ಪ್ರಕಾಶ ಮಾಶೆಟ್ಟಿ ಸಾಧನೆ ಮಾಡಿದ ಪ್ರತಿಭಾನ್ವಿತೆ. ಎಸ್‌ಎಸ್‌ ಎಲ್‌ಸಿಯಲ್ಲಿಯೂ ಶೇ.98.6ರಷ್ಟು ಅಂಕ (ಭಾಲ್ಕಿ ಸತ್ಯಸಾಯಿ ಪಬ್ಲಿಕ್‌ ಸ್ಕೂಲ್‌) ಪಡೆದು ಉತ್ತಮ ಸ್ಥಾನ ಪಡೆದಿದ್ದ ಸೃಷ್ಠಿ ಈಗ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 591 ಅಂಕ ಗಳಿಸಿದ್ದಾಳೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ 100ಕ್ಕೆ 100 ಅಂಕ, ಹಿಂದಿ 97 ಮತ್ತು ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾಳೆ.

ಭಾಲ್ಕಿ ಪಟ್ಟಣದ ನಿವಾಸಿಯಾಗಿರುವ ಸೃಷ್ಠಿ ತಂದೆ ಪ್ರಕಾಶ ವ್ಯಾಪಾರಿಯಾಗಿದ್ದರೆ, ತಾಯಿ ಗೃಹಿಣಿಯಾಗಿ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳು ಪ್ರತಿಭಾನ್ವಿತರಾಗಿದ್ದು, ಅಗ್ರ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ. ಹಿರಿಯ ಮಗಳು ಬಿಎಂಸಿ ಮುಗಿಸಿದ್ದರೆ, ಎರಡನೇ ಮಗಳು ಎಂಎಸ್‌ಸಿ ಓದುತ್ತಿದ್ದಾಳೆ. ಈಗ ಕಿರಿಯ ಪುತ್ರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದು ಪಾಲಕರಲ್ಲಿ ಸಂತಸ ಮೂಡಿಸಿದೆ.

ಕೋವಿಡ್‌ ಸೋಂಕಿನ ಆಂತಕದ ನಡುವೆಯೂ ಸೃಷ್ಠಿ ಮಾಶೆಟ್ಟಿ, ಓದುನತ್ತ ಹೆಚ್ಚು ಗಮನ ಹರಿಸಿದ್ದಳು. ವಸತಿ ನಿಲಯದಲ್ಲೇ ಉಳಿದುಕೊಂಡು, ಪ್ರಾಧ್ಯಾಪಕರೊಂದಿಗೆ ಪಾಠದಲ್ಲಿ ತೊಂದರೆಗಳಿದ್ದರೆ ಸರಿಪಡಿಸಿಕೊಳ್ಳುವುದು, ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಿರುವುದು ಗರಿಷ್ಠ ಅಂಕ ಸಾಧಿಸಲು ಸಾಧ್ಯವಾಗಿದೆ.
ಸದ್ಯ ಸಿಇಟಿ ಪರೀಕ್ಷೆ ಬರೆದಿರುವ ಸೃಷ್ಠಿ ಸಿಇಟಿಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಉತ್ತಮ ರ್‍ಯಾಂಕ್‌ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾಳೆ. ಉತ್ತಮ ಅಂಕದೊಂದಿಗೆ ಮಗಳು ಜಿಲ್ಲೆಗೆ ರ್‍ಯಾಂಕ್‌ ಪಡೆದಿರುವುದು ಒಬ್ಬ ತಂದೆಯಾಗಿ ಮಗಳ ಸಾಧನೆಗೆ ಹೆಮ್ಮೆ ಎನಿಸುತ್ತದೆ. ಇದಕ್ಕೆ ಮಕ್ಕಳ ಆಕೆಯ ಪರಿಶ್ರಮದ ಜತೆಗೆ ಪ್ರಾಧ್ಯಾಪಕರು ಮತ್ತು ಹಿರೇಮಠ ಸಂಸ್ಥಾನದ ಪ್ರೋತ್ಸಾಹವೇ ಮುಖ್ಯ ಕಾರಣ. ಮಗಳ ಆಸೆಯಂತೆ ಎಂಬಿಬಿಎಸ್‌ ಓದಿಸುತ್ತೇನೆ ಎನ್ನುತ್ತಾರೆ ಸೃಷ್ಠಿ ತಂದೆ ಮಾಶೆಟ್ಟಿ.

ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಬರಬಹುದೆಂಬ ವಿಶ್ವಾಸ ಇತ್ತು. ಆದರೆ, ಜಿಲ್ಲೆಗೆ ಟಾಪರ್‌ ಆಗುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಅಂದಿನ ಪಾಠವನ್ನೇ ಅಂದೇ ಓದುತ್ತಿದೆ. ಅಂಕಗಳಿಗಾಗಿ ಎಂದೂ ಓದಬಾರದು, ಆತ್ಮ ತೃಪ್ತಿಗಾಗಿ ಓದಿದರೆ ಯಶಸ್ಸು ಸುಲಭವಾಗುತ್ತದೆ. ನನ್ನ ಸಾಧನೆಗೆ ಪ್ರಾಧ್ಯಾಪಕರು ಮತ್ತು ಹೆತ್ತವರ ಪ್ರೋತ್ಸಾಹ, ಬೆಂಬಲವೇ ಕಾರಣ. ನೀಟ್‌ನಲ್ಲಿ ಉತ್ತಮ ರ್‍ಯಾಂಕಿಂಗ್‌ ಪಡೆದು ವೈದ್ಯಳಾಗಿ ಗ್ರಾಮೀಣ ಜನರ ಸೇವೆ ಮಾಡಬೇಕೆಂಬ ಆಸೆ ಇದೆ. ಸೃಷ್ಠಿ ಪ್ರಕಾಶ ಮಾಶೆಟ್ಟಿ, ಟಾಪರ್ವಿದ್ಯಾರ್ಥಿನಿ

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.