ಕೈಗೆ ಬರುವ ಮುನ್ನ ಭತ್ತದ ಬೆಳೆ ನೆಲದ ಪಾಲು
Team Udayavani, Nov 25, 2021, 12:36 PM IST
ದೇವದುರ್ಗ: ಒಂದು ಕಡೆ ಬೆಲೆ ಕುಸಿತ, ಮತ್ತೊಂದು ಕಡೆ ಮಳೆ-ಗಾಳಿಗೆ ಬೆಳೆಗಳ ನಷ್ಟ. ಇಂತಹ ಸಂಕಷ್ಟ ಮಧ್ಯೆಯೂ ಮಂಗಳವಾಡ ತಡರಾತ್ರಿ ಧಾರಾಕಾರ ಸುರಿದ ಮಳೆಯಿಂದ ಬಹುತೇಕ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲಕ್ಕಚ್ಚಿದೆ. ಕರಡಿಗುಡ್ಡ ಗ್ರಾಮದ ರೈತರು ಜಮೀನ ಗದ್ದೆಗೆ ಹೋಗಿ ನೆಲಕ್ಕೂರಗಿದ ಭತ್ತದ ಬೆಳೆ ನೋಡಿ ದಿಗಿಲು ಬಡಿದಂತಾಗಿದೆ.
ಕಳೆದೊಂದು ವಾರಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಬಾಗೂರು, ಕರಡಿಗುಡ್ಡ, ನಿಲವಂಜಿ, ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ನೂರಾರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಏಕಾಏಕಿ ಹತ್ತಿ ಬೆಲೆ ಕುಸಿದೆ. ಇನ್ನು ಬಿಡಿಸುವ ಹಂತದಲ್ಲಿರುವ ಹತ್ತಿ ಮೋಡ ಕವಿದ ವಾತಾವರಣ, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಅವಾಂತರಕ್ಕೆ ಬೆಳೆ ಕೆಂಪು ಬಣ್ಣಕ್ಕೆ ತೀರಿಗಿ ರೋಗ ಬಾಧೆ ಹೆಚ್ಚಾಗಿದೆ.
ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರಗಳು ಆರಂಭಿಸಬೇಕು ಎನ್ನುವ ರೈತರ ಕೂಗಿನ ಧ್ವನಿ ಕೇಳುಸುತ್ತಿಲ್ಲ. ಬುಧವಾರ ಕೂಡ ಮೋಡ ಕವಿದ ವಾತಾವರಣ, ಆಗಾಗ ಸುರಿಯುತ್ತಿರುವ ಮಳೆಯಿಂದ ರೈತರಿಗೆ ಇನ್ನಷ್ಟು ಆತಂಕ ತಂದಿದೆ. ಕೃಷ್ಣಾ ನದಿ ತೀರದ ರೈತರು ಭತ್ತ ಕಟಾವು ಮಾಡಿಕೊಂಡಿದ್ದು, ಬೆಲೆ ಇಲ್ಲದ ಕಾರಣ ಅವರವರ ಜಮೀನಲ್ಲಿ ಬರಕ್ ರಕ್ಷಣೆಯೊಂದಿಗೆ ರಕ್ಷಿಸಲಾಗುತ್ತಿದೆ. ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಭತ್ತದ ಬೆಳೆ ಗಾಳಿಗೆ ನೆಲಕ್ಕಚ್ಚಿದೆ. ಸಾವಿರಾರು ರೂ. ಖರ್ಚು ಮಾಡಿಕೊಂಡು ಕಟಾವು ಮಾಡುವ ಮುನ್ನವೇ ಭತ್ತದ ಬೆಳೆ ನೆಲಕ್ಕಚ್ಚಿದೆ ಎಂದು ರೈತ ರಂಗಪ್ಪ ನೋವು ತೊಡಿಕೊಂಡರು.
ಈ ಹಿಂದೆ ಬಿದ್ದ ಮಳೆಗೆ ಹಾನಿಯಾದ ಬೆಳೆ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಬುಧವಾರ ಮತ್ತೂಮ್ಮೆ ಮಳೆ ಬಿದ್ದು, ಜಾಲಹಳ್ಳಿ ಹಾಗೂ ದೇವದುರ್ಗ ಹೋಬಳಿಯಲ್ಲಿ ಬೆಳೆಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ, ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. -ಶ್ರೀನಿವಾಸ್ ಚಾಪಲ್, ಪ್ರಭಾರ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.