ಬೀದರ್ ಏರ್ ಫೋರ್ಸ್ ಮುಖ್ಯಸ್ಥರಾಗಿ ಸೋಂಧಿ ನೇಮಕ
Team Udayavani, Jun 18, 2021, 6:10 PM IST
ಬೀದರ್ : ಬೀದರ್ ವಾಯು ಸೇನಾ ನೆಲೆಯ ಮುಖ್ಯಸ್ಥರಾಗಿ ಏರ್ ಕಮಾಂಡರ್ ಸಮೀರ್ ಸೊಂಧೀ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಏರ್ ಕಮೊಂಡರ್ ನಿಖಿಲೇಶ್ ಗೌತಮ್ ಅವರು ಸೊಂಧೀ ಅವರಿಗೆ ವಿಧಿಯುಕ್ತವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಮಾತನಾಡಿದ ನಿಖಿಲೇಶ್ ಗೌತಮ್, ಕಳೆದ ವರ್ಷಗಳಲ್ಲಿ ಬೀದರ ವಾಯು ಸೇನಾ ನೆಲೆ ತುಂಬ ಶಕ್ತಿ ಶಾಲಿ ಯಾಗಿ ಬೆಳೆದು ದೇಶದ ಅತಿ ಶ್ರೇಷ್ಠ ತರಬೇತಿ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ, ಕೇಂದ್ರದ ಪ್ರತಿಯೊಬ್ಬರೂ ಕೂಡ ತಮ್ಮ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಮೀರ್ ಸೊಂಧೀ ಅವರು ವಾಯು ಸೇನೆಯ ಯುದ್ಧ ವಿಮಾನ ವಿಭಾಗದಲ್ಲಿ 1993ರಲ್ಲಿ ತಮ್ಮ ಸೇವೆ ಆರಂಭಿಸಿದವರು. ಅವರಿಗೆ ಮಿರಾಜ್, ಬೈಸನ್, ಜಾಗವರ್, ಕಿರಣ್ ಮುಂತಾದ ಯುದ್ಧ ವಿಮಾನಗಳಲ್ಲಿ ಸುಮಾರು 3,200 ಗಂಟೆಗಳ ಹೊತ್ತು ಹಾರಾಟ ಮಾಡಿದ ಅನುಭವ ಇದೆ. ಅವರು ಯುದ್ಧ ವಿಮಾನದ ತಂಡವೊಂದ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಾಯು ಸೇನಾ ತರಬೇತಿ ಹಾಗೂ ಶಿಕ್ಷಣ ವಿಭಾಗದಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Robbery: ಬೀದರ್ ದರೋಡೆ ಬಿಹಾರಿ ಗ್ಯಾಂಗ್ ಕೃತ್ಯ: ಪೊಲೀಸರು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್