ಸೋಯಾ ಹೊಡೆತಕ್ಕೆ ಮುಗ್ಗರಿಸಿದ ಜೋಳ

ಇನ್ನೊಂದೆಡೆ ಜೋಳದ ಪ್ರದೇಶ ಕಡಿಮೆಯಾಗಿ ರೊಟ್ಟಿ ತುಟ್ಟಿಯಾಗುತ್ತಿದೆ.

Team Udayavani, Jul 7, 2021, 7:06 PM IST

ಸೋಯಾ ಹೊಡೆತಕ್ಕೆ ಮುಗ್ಗರಿಸಿದ ಜೋಳ

ಬೀದರ: ಪ್ರಕೃತಿ ವಿಕೋಪ, ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಜಿಲ್ಲೆಯ ಪ್ರಧಾನ ಆಹಾರ ಬೆಳೆ ಜೋಳಕ್ಕೆ ಭಾರಿ ಹೊಡೆತ ಬಿದ್ದಿದ್ದು, ಬಿತ್ತನೆ ಕ್ಷೇತ್ರ ಕ್ಷೀಣಿಸಿದೆ. ಕಳೆದ ಒಂದುವರೆ ದಶಕದಲ್ಲಿ ಶೇ. 80ರಷ್ಟು ಜೋಳದ ಕ್ಷೇತ್ರ ಇಳಿಕೆಯಾಗಿದ್ದು, ಈಗ ಜಾಗವನ್ನು ಸೊಯಾಬಿನ್‌ ಆವರಿಸಿಕೊಂಡಿದೆ. ತೊಗರಿ ಕಣಜ, ಉದ್ದು- ಹೆಸರು, ಜೋಳ ಉತ್ಪಾದನೆ ಪ್ರದೇಶ ಎಂಬೆಲ್ಲ ಖ್ಯಾತಿ ಪಡೆದಿದ್ದ ಗಡಿ ನಾಡು ಬೀದರ ಈಗ ಸೋಯಾಮಯವಾಗಿದೆ.

ಜೋಳ ಬಿತ್ತನೆ ಆಗುತ್ತಿದ್ದ ಪ್ರದೇಶದಲ್ಲಿ ಸೋಯಾಬಿನ್‌ ಆಕ್ರಮಿಸಿಕೊಂಡಿದೆ. ಒಂದೂವರೆ ದಶಕದ ಹಿಂದೆ ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈಗ ಶೇ. 20ರಷ್ಟು ಮಾತ್ರ ಬಿತ್ತನೆ ಆಗುತ್ತಿದೆ. ಒಂದೆಡೆ ಊಟಕ್ಕೆ ಜೋಳದ ರೊಟ್ಟಿ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಜೋಳದ ಪ್ರದೇಶ ಕಡಿಮೆಯಾಗಿ ರೊಟ್ಟಿ ತುಟ್ಟಿಯಾಗುತ್ತಿದೆ.

ಉತ್ತರ ಕರ್ನಾಟಕದ ಆಹಾರ ಬೆಳೆಗಳಲ್ಲಿ ಜೋಳ ಪ್ರಧಾನವಾಗಿದ್ದು, ಜೋಳದ ರೊಟ್ಟಿ ತಿನ್ನದೆ ಊಟ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಬೆಳೆ ಇಲ್ಲಿನ ಜನರನ್ನು ಆವರಿಸಿದೆ. ಆದರೆ, ಈಗ ಅನ್ನದಾತರು ಪ್ರಮುಖ ಆಹಾರ ಬೆಳೆ ಬಿತ್ತನೆಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಸೋಯಾಬೀನ್‌ ಕಡಿಮೆ ಬಂಡವಾಳ-ಅಧಿಕ ಲಾಭವನ್ನು ತಂದುಕೊಡಬಲ್ಲ ಬೆಳೆ ಎಂಬುದು ರೈತರ ನಂಬಿಕೆ. ಇದರಿಂದ ಪಾರಂಪರಿಕ ಬೆಳೆಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಭವಿಷ್ಯದಲ್ಲಿ ಜೋಳ ಉತ್ಪಾದನೆಯ ಗಂಭೀರ ಪರಿಸ್ಥಿತಿ ಎದುರಾದರು ಅಚ್ಚರಿ ಇಲ್ಲ.

ಮಳೆಯಾಶ್ರಿತ ಬೀದರ ಜಿಲ್ಲೆಯಲ್ಲಿ 10-15 ವರ್ಷಗಳ ಹಿಂದೆ ಜೊಳ ಬೆಳೆಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆದರೆ, ಅಂತರ ಬೆಳೆಯಾಗಿ ಸೋಯಾಬೀನ್‌ ಬಿತ್ತನೆಯಾಗುತ್ತಿತ್ತು. ಆದರೆ, ಜಿಲ್ಲೆ ಪ್ರತಿ ವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಜೋಳ ತುತ್ತಾಗಿ ಕೃಷಿಕರನ್ನು ಆರ್ಥಿಕ ನಷ್ಟ ತಂದೊಡ್ಡುತ್ತಿತ್ತು. ಈ ನಡುವೆ ಸೋಯಾ ಬೆಳೆಗೆ ಪ್ರಕೃತಿ ವಿಕೋಪವಾದರೂ ಅಷ್ಟಾಗಿ ತೊಂದರೆಯಾಗುವುದಿಲ್ಲ ಎಂದು ಅರಿತಿರುವ ರೈತರು ಸೋಯಾನತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ ಗುಂಡು ಜೋಳ ಮತ್ತು ಎಂ. 35-1 ತಳಿಯನ್ನು ಬಿತ್ತನೆ ಮಾಡಲಾಗುತ್ತದೆ. ಮುಖ್ಯವಾಗಿ ಬೆಳೆಗೆ ದರ, ಕಟಾವಿಗೆ ಕೂಲಿಕಾರರ ಸಮಸ್ಯೆ ಜೋಳ ಬಿತ್ತನೆಯತ್ತ ರೈತರ ಆಸಕ್ತಿ ಕಡಿಮೆಯಾಗಿಸಿದೆ. ಉತ್ಪಾದನೆ ಕಡಿಮೆಯಾದ ಪರಿಣಾಮ ರೊಟ್ಟಿ ಪ್ರಿಯರ ಆಹಾರ ಪದ್ಧತಿಯೂ ಬದಲಾಗುತ್ತಿದ್ದು, ಗೋಧಿ ಮತ್ತು ಅಕ್ಕಿ ಬಳಕೆಯಾಗುತ್ತಿದೆ. ರೈತರು ಹಣ ಗಳಿಸುವ ಬೆಳೆಯನ್ನಾಗಿ ಸ್ವೀಕರಿಸಿರುವುದರಿಂದ ಸೋಯಾ ಪ್ರದೇಶ ಪ್ರತಿ ವರ್ಷ ಹಿಗ್ಗುತ್ತಲೇ ಇದೆ. ಭವಿಷ್ಯದಲ್ಲಿ ಜೋಳಕ್ಕೆ ಗಂಭೀರ ಸ್ಥಿತಿ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.

ಜಿಲ್ಲೆಯಲ್ಲಿ 2005-06ರಲ್ಲಿ ಸುಮಾರು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಜೋಳ ಕಳೆದ 15 ವರ್ಷಗಳಲ್ಲಿ ಭಾರಿ ಕುಸಿತ ಕಂಡಿದೆ. 2011-12ರಲ್ಲಿ 57 ಸಾವಿರ ಹೆ., 2012-13ರಲ್ಲಿ 55 ಸಾವಿರ ಹೆ., 2013-14ರಲ್ಲಿ 35 ಸಾವಿರ ಹೆ., 2014-15ರಲ್ಲಿ 27 ಸಾವಿರ ಹೆ., 2015-16ರಲ್ಲಿ 22 ಸಾವಿರ ಹೆ., 2016-17ರಲ್ಲಿ 26 ಸಾವಿರ ಹೆ., 2017-18ರಲ್ಲಿ 23 ಸಾವಿರ ಹೆ., 2018-19ರಲ್ಲಿ 21 ಸಾವಿರ ಹೆ., 2019-20ರಲ್ಲಿ 18 ಸಾವಿರ ಹೆ. ಪ್ರದೇಶಕ್ಕೆ ಇಳಿಕೆಯಾಗಿದೆ. ಇನ್ನೂ ಈ ವರ್ಷ 2020-21ರಲ್ಲಿ 13 ಸಾವಿರ ಹೆ. ಗುರಿ ಇದ್ದು, ಈವರೆಗೆ ಕೇವಲ 4745 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೊಂದೆಡೆ 2005-06ರಲ್ಲಿ ಕೇವಲ 32 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಸೋಯಾ ಈಗ 15 ವರ್ಷದಲ್ಲಿ ಸುಮಾರು 1.82 ಲಕ್ಷ ಹೆ. ಪ್ರದೇಶವನ್ನು ಆವರಿಸಿಕೊಂಡಿದೆ. ಅಂದಾಜು 20 ವರ್ಷಗಳ ಹಿಂದೆ ಜಿಲ್ಲೆಗೆ ಪರಿಚಯವಾದ ಸೋಯಾ ಸಧ್ಯ ರಾಜ್ಯದಲ್ಲೇ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಈ ಬೆಳೆಯ ಬೆಳವಣಿಗೆ ಜೋಳ ಮುಗ್ಗರಿಸುವಂತೆ ಮಾಡಿದೆ.

ಜೋಳ ಬಿತ್ತನೆಗೆ ಸರಕಾರ ಪ್ರೋತ್ಸಾಹಿಸಲಿ
ಮಾರುಕಟ್ಟೆಯಲ್ಲಿ ದರ ಕಡಿಮೆ ಜತೆಗೆ ಪ್ರಾಕೃತಿಕ ಹೊಡೆತ ಮತ್ತು ಕೂಲಿಕಾರರ ಸಮಸ್ಯೆ ಜೋಳ ಬಿತ್ತನೆ ಕಡಿಮೆಯಾಗಲು ಪ್ರಮುಖ ಕಾರಣ. ಆದರೆ, ಸೋಯಾಬಿನ್‌ ಭರವಸೆಯ ಮತ್ತು ಲಾಭದಾಯಕ ಬೆಳೆ ಎನಿಸಿಕೊಂಡಿರುವುದರಿಂದ ರೈತರನ್ನು ಹೆಚ್ಚು ಆಕರ್ಷಿಸಿದೆ. ಜೋಳ ಬಿತ್ತನೆ ಕುಸಿತ ಭವಿಷ್ಯದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜೋಳ ಬಿತ್ತನೆಗಾಗಿ ಸರ್ಕಾರದ ಪ್ರೋತ್ಸಾಹ ಸಿಗಬೇಕಿದೆ.
ಡಾ| ಎನ್‌.ಎಂ., ಸುನೀಲಕುಮಾರ, ಸಂಯೋಜಕರು ಕೆವಿಕೆ ಬೀದರ

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.