ದಕ್ಷಿಣ ಕರಾವಳಿ ಕನ್ನಡ ಸಂಘದಿಂದ”ಶ್ರೀ ಶ್ರೀನಿವಾಸ ಕಲ್ಯಾಣ’ ಪ್ರದರ್ಶನ
Team Udayavani, Aug 18, 2017, 3:31 PM IST
ಬೀದರ: ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಕಲಾವಿದರ ಪಾತ್ರ ಹಿರಿದಾಗಿದೆ. ಕಲಾವಿದರು ಸಮಾಜಕ್ಕಾಗಿ ಬದುಕಬೇಕು ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಕರೆ ನೀಡಿದರು. ನಗರದ ರಂಗ ಮಂದಿರದಲ್ಲಿ ದಕ್ಷಿಣ ಕರಾವಳಿ ಕನ್ನಡ ಸಂಘ ಆಯೋಜಿಸಿದ್ದ “ಶ್ರೀ ಶ್ರೀನಿವಾಸ ಕಲ್ಯಾಣ’ ಪೌರಾಣಿಕ ಕಥಾಭಾಗವನ್ನೊಳಗೊಂಡ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರು ಸದಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರಬೇಕು ಎಂದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ| ಸಿದ್ರಾಮಪ್ಪಾ ಮಾಸಿಮಾಡೆ ಮುಖ್ಯ ಅತಿಥಿಯಾಗಿ ಮಾತನಾಡಿ,
ಹಲವು ವರ್ಷಗಳಿಂದ ಗೋವಿಂದ ಭಟ್ ನೀಡ್ಲೆ-ಧರ್ಮಸ್ಥಳ ತಂಡವು ಬೀದರಿನ ದಕ್ಷಿಣ ಕರಾವಳಿ ಕನ್ನಡ ಸಂಘದ ಜೊತೆಗೂಡಿ ನಿರಂತರವಾಗಿ ಕಲಾಭಿಮಾನಿಗಳಿಗೆ ಯಕ್ಷಗಾನದ ಸವಿ ಉಣಪಡಿಸುವದರ ಜೊತೆಗೆ ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷೆ ವೀಣಾ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನದಂತಹ ಕಲೆಗಳಿಂದ ಮಕ್ಕಳಲ್ಲಿನ ಕಲಾ ಪ್ರತಿಭೆಗಳು ಹೊರಹೊಮ್ಮುತ್ತವೆ. ಹಾಗೂ ಮಕ್ಕಳ ಮನಸ್ಸು ಸಮಚಿತ್ತ, ಸದೃಢವಾಗುವದರೊಂದಿಗೆ ಉಜ್ವಲ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದರು. ಜ್ಞಾನ ಸುಧಾ ವಿದ್ಯಾಲಯ ನಿರ್ದೇಶಕ ಮುನೇಶ ಲಾಕಾ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ರಾಜೇಶ ಕೆ. ರಾವ್ ಸ್ವಾಗತಿಸಿದರು. ಕೆ.ಸತ್ಯಮೂರ್ತಿ ನಿರೂಪಿಸಿದರು. ರಾಘವೇಂದ್ರ ಅಡಿಗ ವಂದಿಸಿದರು. ಪದಾಧಿಕಾರಿಗಳಾದ ಕೆ. ಗುರುಮೂರ್ತಿ, ದಯಾನಂದಶೆಟ್ಟಿ, ಪಿ.ಎನ್. ದಿವಾಕರ್, ಬಾಲಕೃಷ್ಣಶೆಟ್ಟಿ, ಉದಯಶೆಟ್ಟಿ, ಕೆ. ರಾಮಮೂರ್ತಿ, ಪ್ರಭಾಕರ ಎ.ಎಸ್., ರವಿಚಂದ್ರಮೂರ್ತಿ, ರಘುರಾಮ ಉಪಾಧ್ಯಾಯ, ಸುರೇಶ ಆಚಾರ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.