ನೀರಾವರಿ ವಂಚಿತ ಹಳ್ಳಿಗಳಿಗೆ ಜಲಭಾಗ್ಯ
Team Udayavani, Nov 8, 2021, 2:38 PM IST
ದೇವದುರ್ಗ: ತಾಲೂಕಿನ ನೀರಾವರಿ ವಂಚಿತ ಪ್ರದೇಶದ ಹಾಗೂ ನಾರಾಯಾಣಪುರ ಬಲದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ಅನುಕೂಲವಾಗಲೆಂದು ತಾಲೂಕಿನಲ್ಲಿ 11 ಏತ ನೀರಾವರಿ ಯೋಜನೆಗೆ ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಹಳ್ಳಿಗಳ ರೈತರೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ತಾಲೂಕಿನ ತಿಂಥಿಣಿ ಬ್ರೀಜ್ ಹತ್ತಿರದ ವೀರಗೋಟದಿಂದ ಮದರಕಲ್ ಹಾಗೂ ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಒಳಗೊಂಡಂತೆ ನಾರಾಯಾಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ವಂಚಿತ ಪ್ರದೇಶದ ರೈತರ ಸಲುವಾಗಿ ಕೃಷ್ಣಾ ನದಿಯಿಂದ ನೀರು ಪಡೆದು ರೈತರ ಭೂಮಿಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲಾಗುವುದು ಎಂದರು.
ಈ ಯೋಜನೆಗೆ ಸುಮಾರು 35 ಸಾವಿರ ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗುತ್ತಿದ್ದು, 22 ಸಾವಿರ ಎಕರೆ ಭೂಮಿಗಳಿಗೆ ನೀರು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಸಹಯೋಗದಿಂದ ಸಂಘ ರಚನೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತಿದ್ದು, ರೈತರು ಕೂಡ ಒಪ್ಪಿಗೆ ನೀಡಿದ್ದಾರೆ. ತಾಲೂಕಿನ ವೀರಗೋಟ, ಬುಂಕಲದೊಡ್ಡಿ, ಚಿಂಚೋಡಿ, ಜಾಲಹಳ್ಳಿ, ಮೇದಿನಾಪುರ, ಲಿಂಗದಹಳ್ಳಿ, ಚಪ್ಪಳಕಿ, ಬುದ್ದಿನ್ನಿ, ಮುದಗೋಟ, ಹೇರುಂಡಿ, ಬಾಗೂರ, ನವಿಲಗುಡ್ಡ, ಜಂಬಲದಿನ್ನಿ, ಕರಡಿಗುಡ್ಡ, ಕೊಪ್ಪರ, ಕರ್ಕಿಹಳ್ಳಿ, ಅರಷಿಣಿಗಿ, ರಾಮನಾಳ, ಯಾಟಗಲ್, ಮೇದರಗೋಳ ಸೇರಿದಂತೆ ನದಿ ದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಯ ನೀರಿನಿಂದ ವಂಚಿತ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಇ.ಇ. ಕಿಶೋರ ಕುಮಾರ, ಎ.ಇ.ಇ. ಚಂದ್ರಶೇಖರ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಗೌಡ ಕರಡಿಗುಡ್ಡ, ಗೋಪಾಲಕೃಷ್ಣಾ ಮೇಟಿ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ನಾಗರಾಜ ಅಕ್ಕರಕಿ ಸೇರಿದಂತೆ ವಿವಿಧ ಹಳ್ಳಿಗಳ ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.