ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನ
Team Udayavani, Feb 26, 2018, 1:01 PM IST
ಬೀದರ: ಬೆಂಗಳೂರಿನ ಎನ್.ಎಸ್. ಕುಂಬಾರ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಬೀದರ ಚನ್ನಾರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಅನ್ನಪೂರ್ಣ ಚಾಂಬೋಳೆ ಹಾಗೂ ವಿಠ್ಠಲ ಬೆಂಬುಳಗೆ ಅವರ ಸಮೂಹ ಕಲಾ ಪ್ರದರ್ಶನ ನಡೆಯಿತು.
ಆರ್.ಕೆ. ರಿಯಲ್ಟ್ ರ್ಸನ್ ನಿರ್ದೇಶಕಿ ರೂಪಾ ಪಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ಪ್ರಾಚೀನ ಕಾಲದಿಂದಲೂ ಬೆಳೆಯುತ್ತಾ ಬಂದಿದ್ದು, ಮಾನವನ ಮೊದಲ ಭಾಷೆಯು ಆಗಿದೆ. ನೂರು ಶಬ್ದಗಳನ್ನು ಒಂದು ಚಿತ್ರ ಹೇಳುತ್ತದೆ. ಪ್ರದರ್ಶನಗೊಂಡ ಚಿತ್ರಗಳು ಅದ್ಬುತ ಮತ್ತು ವಿಭಿನ್ನತೆಯಿಂದ ಕೂಡಿದ್ದು, ಕಲಾವಿದರ ಈ ಹೊಸ ಪ್ರಯತ್ನ ಖುಷಿ ಕೊಟ್ಟಿದೆ ಎಂದು ಹೇಳಿದರು.
ಲಲಿತಕಲಾ ಅಕಾಡೆಮಿ ಸದಸ್ಯ ಯೋಗೀಶ ಮಠದ ಮಾತನಾಡಿ, ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವಿಬಿನ್ನ ಕಾರ್ಯಕ್ರಮಗಳೊಂದಿಗೆ ಜನ ಸಾಮಾನ್ಯರ ಮನ ಮನೆಗಳಿಗೆ ಕಲೆಯನ್ನು ತಲುಪಿಸುವ ಉದ್ದೇಶದಿಂದ ಅಕಾಡೆಮಿಯು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಲಾಸಕ್ತರು ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಗ್ಯಾಲರಿಯ ಮುಖ್ಯಸ್ಥ ಎನ್. ಎಸ್. ಕುಂಬಾರ ಮಾತನಾಡಿ, ಒಂದು ಜಿಲ್ಲೆಯ ಕಲಾವಿದರು ಮತ್ತೂಂದು ಜಿಲ್ಲೆಗೆ ಹೋಗಿ ತಮ್ಮ ಕಲೆಯ ಪ್ರದರ್ಶನವನ್ನು ಮಾಡುವುದರಿಂದ ಹೊಸ ವಿಚಾರಗಳು ಮತ್ತು ಕಲೆಯ ವಿನಿಮಯಗಳು ಆಗುತ್ತದೆ. ಇದರಿಂದ ಕಲಾ ಕ್ಷೇತ್ರದ ಪ್ರಸ್ತುತತೆಯ ಅರಿವು ಕಲಾವಿದರಿಗೆ ಸುಲಭವಾಗಿ ಸಿಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.