ವಿಘ್ನಗಳ ದಾಟಿ ಮುನ್ನಡೆದರೆ ಯಶಸ್ಸು
Team Udayavani, Nov 21, 2017, 12:19 PM IST
ಬೀದರ: ಗ್ರಾಮಗಳು ಕೇವಲ ವಿಸ್ತಾರವಾಗದೇ ವಿಕಾಸವಾಗಬೇಕು. ಜನರು ಮನಸು ಸಂಕುಚಿತವಾಗಿರದೇ ವಿಶಾಲ ಮತ್ತು ಉದಾರವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅಕ್ಕ ಅನ್ನಪೂರ್ಣ ತಾಯಿ ಹೇಳಿದರು.
ರಾಜಗೀರಾ ಗ್ರಾಮದಲ್ಲಿ ಗ್ರಾಮ ವಿಕಾಸ ಸಮಿತಿ ಹಮ್ಮಿಕೊಂಡಿದ್ದ “ಜೀವನ ದರ್ಶನ’ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಾವುದೂ ಶಾಶ್ವತವಾದದ್ದಲ್ಲ. ಇರುವಷ್ಟು ದಿನ ಎಲ್ಲರ ಜೊತೆ ಚೆನ್ನಾಗಿದ್ದುಕೊಂಡು ಒಳ್ಳೆಯ ಕಾಯಕಗಳನ್ನು ಮಾಡುತ್ತಿರಬೇಕು. ಒಳ್ಳೆ ಕೆಲಸಗಳಿಗೆ ವಿಘ್ನಗಳು ಎದುರಾಗುವುದು ಸಹಜ. ಆದರೆ, ಅವುಗಳಿಗೆ ಹೆದರದೇ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಹೇಳಿದರು
ಸಾಮಾಜಿಕ ಕಾರ್ಯಕರ್ತ ರಾಜಶೇಖರ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದ ಯುವ ಸಮೂಹ ಯಾವುದೇ ಜಾತಿಯನ್ನದೇ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ವಿಕಾಸ ಸಮಿತಿಯನ್ನು ರಚಿಸಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು.
ರಮೇಶ ಮಠಪತಿ ಮಾತನಾಡಿದರು. ಬಸವರಾಜ ರೆಡ್ಡಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಂತೋಷಿ ಮಠಪತಿ ವಚನ ಗಾಯನ ನಡೆಸಿಕೊಟ್ಟರು. ಶಿವಾನಂದ ದೇಶಪಾಂಡೆ ಸ್ವಾಗತಿಸಿದರು. ಅಶೋಕ ಚಿಂತಾ ವಂದಿಸಿದರು. ಉದ್ಯಮಿಗಳಾದ ಜಯರಾಜ ಖಂಡ್ರೆ, ರಾಚಪ್ಪಾ ಪಾಟೀಲ, ಗುರಪ್ಪಾ ಹತ್ತಿ, ಡಾ| ನೀಲಕಂಠ ಚೆನಶೆಟ್ಟಿ, ಗೋಪಾಲಸಿಂಗ್ ಠಾಕೂರ, ಲೊಕೇಶ ವರವಟ್ಟೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.