ಅಚ್ಚರಿ ಮೂಡಿಸಿದ ನೀರಾವರಿ ಇಲಾಖೆ ನಡೆ
Team Udayavani, Oct 28, 2021, 12:48 PM IST
ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪೈಪ್‌ಗ್ಳನ್ನು ಹಾಕಿ ಉಪ ಕಾಲುವೆಗೆ ನೀರು ಡಂಪ್ ಮಾಡುತ್ತಿರುವ ಪ್ರಕ್ರಿಯೆ ರೈತ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದೆ.
ತಾಲೂಕಿನ 36ನೇ ಉಪ ಕಾಲುವೆಯ ಎರಡು ಪೈಪ್‌ಗ್ಳು ಕುಸಿದ ಹಿನ್ನೆಲೆಯಲ್ಲಿ ಅದರ ಬದಲಾಗಿ ಬೇರೆ ಪೈಪ್‌ಗ್ಳ ಮೂಲಕ ನೀರು ಹರಿಸಲು ಪ್ರಯತ್ನಿಸಲಾಗಿದೆ. ಮುಖ್ಯ ಕಾಲುವೆಗೆ ಹಾಕಿದ ನಾಲ್ಕು ಪೈಪ್‌ಗ್ಳಲ್ಲಿ ತಲಾ 3 ಅಡಿ ನೀರು ಹರಿಸಿದಾಗ ಉಪ ಕಾಲುವೆ ಭರ್ತಿಯಾಗಿ ಹರಿಯುತ್ತದೆ. ಇದನ್ನು ತಪ್ಪಿಸಲು ನಾಲ್ಕು ಹೊಸ ಪೈಪ್ ಹಾಕಿ, ಹರಸಾಹಸಕ್ಕೆ ಕೈ ಹಾಕಿದ್ದು, ರೈತ ವಲಯವನ್ನು ಕೆರಳಿಸಿದೆ.
ಎಂಜಿನಿಯರಿಂಗ್ ಇಲಾಖೆ ವಿಫಲ
ರಾಯಚೂರಿಗೆ ಸಾಗುವ ತುಂಗಭದ್ರಾ ಎಡದಂಡೆಗೆ ಹಾಕಿರುವ ನಾಲ್ಕು ಪೈಪ್‌ಗಳ ಮೂಲಕ ಅವುಗಳು ಭರ್ತಿಯಾಗಿ ಒಡ್ಡು ದಾಟಿ, ಮತ್ತೆ ಉಪ ಕಾಲುವೆಗೆ ಇಳಿಯಬೇಕು. ಎತ್ತರದ ಒಡ್ಡು ದಾಟಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇಳಿಯುತ್ತಿಲ್ಲ. ಮೂರ್‍ನಾಲ್ಕು ಇಂಚಿನಷ್ಟು ನೀರು ಮಾತ್ರ ಬರುತ್ತಿದೆ. ಆದರೆ, ಉಪ ಕಾಲುವೆಯ ಎರಡು ಕಾಲುವೆ ಗೇಟ್‌ನಿಂದ ತಲಾ 3 ಅಡಿಯಷ್ಟು ನೀರು ಭೋರ್ಗರೆಯುತ್ತಿತ್ತು. ಭೋರ್ಗರೆಯುವ ನೀರಿನ ಪ್ರಮಾಣ ಹಾಗೂ ನಲ್ಲಿ ಮಾದರಿಯಲ್ಲಿ ಹರಿಯುವ ನೀರು ನೋಡಿ ರೈತರೇ ಆತಂಕಕ್ಕೆ ಸಿಲುಕಿದ್ದಾರೆ.
ಪರ್ಯಾಯ ಕ್ರಮ ಇಲ್ಲ
ತಾತ್ಕಾಲಿಕವಾಗಿ ಮುಖ್ಯ ಕಾಲುವೆ ಒಡ್ಡು ಕುಸಿಯದಂತೆ ಮಾತ್ರ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ವಹಿಸಿದಂತಾಗಿದೆ. ಆದರೆ, ಮುಚ್ಚಿಹೋಗಿರುವ ಎರಡು ಪೈಪ್‌ಗ್ಳ ಮೂಲಕ 44 ಸಾವಿರಕ್ಕೂ ಹೆಚ್ಚಿನ ಜಮೀನಿಗೆ ನೀರು ಹರಿಸುವ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ.
ತಾತ್ಕಾಲಿಕವಾಗಿ ಸಮಾಧಾನಕ್ಕೆ ಹಾಕಿರುವ ಪೈಪ್‌ಗ್ಳಿಂದಲೂ ನೀರು ಹರಿಯುತ್ತಿಲ್ಲ. ಮುಖ್ಯ ಕಾಲುವೆ ಶೂನ್ಯ ಪಾಯಿಂಟ್‌ನಿಂದಲೇ ಗೇಜ್ ಕಡಿತಗೊಳಿಸಲಾಗಿದೆ. ನೀರಿನ ಹರಿವು ತಗ್ಗಿಸದ ರೀತಿಯಲ್ಲಿ 36ನೇ ಉಪ ಕಾಲುವೆ ಭಾಗದ ಹತ್ತಾರು ಹಳ್ಳಿಯ ರೈತರ ಜಮೀನುಗಳಿಗೆ ನೀರೊದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲವೆಂಬ ಕೂಗು ಬಲವಾಗಿದೆ.
ಇದನ್ನೂ ಓದಿ: ಶಾಸಕರ ಭವನ ನಿರ್ಮಾಣಕ್ಕೆ ಗುತ್ತಿಗೆ ವಿಘ್ನ!
ಸದ್ಯ ಒಡ್ಡಿಗೆ ಚೀಲಗಳನ್ನು ಹಾಕಿ, ಕಪ್ಪು ಮಣ್ಣು ಹಾಕಲಾಗಿದೆ. ಗೇಟ್‌ಗಳ ಥ್ರಡ್ ಇಳಿಸಿ ನೀರಿನ ಹರಿವು ಕಡಿಮೆ ಮಾಡಿದ್ದು, ಪ್ರತ್ಯೇಕವಾಗಿ ಪೈಪ್ ಮುಖ್ಯ ಕಾಲುವೆಗೆ ಹಾಕಿ, ಅಲ್ಲಿಂದ ಉಪ ಕಾಲುವೆಗೆ ನೀರು ಕೊಡಲು ಪ್ರಯತ್ನಿಸಲಾಗಿದೆ. ನೀರಿನ ಕೊರತೆ ನಿವಾರಿಸುವುದಕ್ಕೆ ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ. -ಹನುಮಂತಪ್ಪ, ಎಇಇ, ನಂ.3 ನೀರಾವರಿ ಇಲಾಖೆ ಉಪವಿಭಾಗ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.