ಸುಶೀಲ್ ಕುಮಾರ್ ಕುಟುಂಬಕ್ಕೆ ಸಾಂತ್ವನ
Team Udayavani, Mar 5, 2018, 12:04 PM IST
ಬೀದರ: ಛತ್ತಿಸಗಡ್- ತೆಲಂಗಾಣ ಗಡಿ ಪ್ರದೇಶದಲ್ಲಿ ನಕ್ಸಲರ ವಿರುದ್ಧದ ಕೋಬಿಂಗ್ ಕಾರ್ಯಚರಣೆಯಲ್ಲಿ ವೀರ ಮರಣ ಹೊಂದಿರುವ ಬೀದರನ ನಕ್ಸಲ್ ನಿಗ್ರಹ ದಳದ ಜೂನಿಯರ್ ಕಮಾಂಡೋ ಸುಶೀಲಕುಮಾರ ಅವರ ನಿವಾಸಕ್ಕೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿ ಸಾಂತ್ವನ ಹೇಳಿದರು.
ರವಿವಾರ ಬೆಳಗ್ಗೆ ಸಚಿವರ ಮನೆಗೆ ತೆರಳಿ ಮೃತ ಯೋಧನ ಪತ್ನಿ ಸುಷ್ಮಾ ಮತ್ತು ತಂದೆ- ತಾಯಿಗೆ ಸಮಾಧಾನ ಹೇಳಿದರು. ಸರ್ಕಾರದಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ವೀರ ಮರಣ ಹೊಂದಿದ ಸುಶೀಲಕುಮಾರ ಅವರ ಮೂರ್ತಿಯನ್ನು ಮತ್ತು ಅವರ ಹೆಸರಿನಲ್ಲಿ ವೃತ್ತವನ್ನು ನಗರದಲ್ಲಿ ಸ್ಥಾಪಿಸಬೇಕೆಂದು ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಅಧ್ಯಕ್ಷ ಆಲ್ಬರ್ಟ್ ಕೋಟೆ ನೇತೃತ್ವದಲ್ಲಿ ಸಚಿವರಿಗೆ ಮನವಿ ಮಾಡಲಾಯಿತು.
ಶಾಸಕ ರಹೀಮ್ ಖಾನ್, ನಗರಸಭೆ ಸದಸ್ಯ ಧನರಾಜ ಹಂಗರಗೆ, ಪ್ರಮುಖರಾದ ಜೊಸೇಫ್, ಜೆಮ್ಸ್, ಸುಂದರ ಮತ್ತು ಯೇಸು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.