ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು
Team Udayavani, Jan 5, 2019, 9:08 AM IST
ಔರಾದ: ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ನಾಲಂದಾ ಶಾಲೆ ಸಂಸ್ಥಾಪಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲೀಕ ಹೇಳಿದರು.
ನಾಲಂದಾ ಪ.ಪೂ ಮಹಾವಿದ್ಯಾಲಯ ಹಾಗೂ ನಾಲಂದಾ ಪ್ರೌಢಶಾಲೆ ವತಿಯಿಂದ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಎನ್.ವಿ. ಬಿರಾದರ ದಂಪತಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ದೇಶದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಪ್ರತಿಯೊಬ್ಬ ಶಿಕ್ಷಕರು ವೃತ್ತಿ ಗೌರವ ಹೊಂದಬೇಕು ಸಲಹೆ ನೀಡಿದರು.
ನಾಲಂದಾ ಶಾಲೆ ಗಡಿ ತಾಲೂಕಿನಲ್ಲಿ ಹೆಸರುವಾಸಿಯಾಗಲು ಶಿಕ್ಷಕರ ಪರಿಶ್ರಮ, ಸಿಬ್ಬಂದಿ ಉತ್ತಮ ಸೇವೆಯೇ ಕಾರಣ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಶಿಕ್ಷಕ ಎನ್.ವಿ. ಬಿರಾದರ ಮಾತನಾಡಿ, ನಾನೊಬ್ಬ ಶಿಕ್ಷಕನೆಂದು ಪಠ್ಯಪುಸ್ತಕಕ್ಕೆ ಅಂಟಿಕೊಳ್ಳದೇ ವಿದ್ಯಾರ್ಥಿಗಳ ಸಮಸ್ಯೆ ಅರಿತು ಅವುಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕನ್ನಡ ಮಾಧ್ಯಮ ಶಾಲೆಯಲ್ಲಿನ ಮಕ್ಕಳು ಆಂಗ್ಲ ವಿಷಯದಲ್ಲಿ ಹಿಂದೆ ಇದ್ದಾರೆ ಎನ್ನುವ ಆರೋಪ ನಮಗೂ, ನಮ್ಮ ಶಾಲೆಗೂ ಬರಬಾರದೆನ್ನುವ ಉದ್ದೇಶದಿಂದ ಬೋಧನೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಕಲಿಕಾ ಪ್ರಗತಿಗೆ ಶ್ರಮಿಸಲಾಗಿದೆ ಎಂದರು. ಸರ್ಕಾರಿ ನೌಕರಿಯಲ್ಲಿ ಪ್ರತಿಯೊಬ್ಬರಿಗೂ ಸೇವಾ ನಿವೃತ್ತಿ ಸಹಜ. ಸೇವಾ ಅವಧಿಯಲ್ಲಿನ ಸಮಯ ವ್ಯರ್ಥ ಮಾಡದೇ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಬಗ್ಗೆ ಚಿಂತಿಸಲು ಶಿಕ್ಷಕರು ಕೆಲಸ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು. ಸಮಾಜದಲ್ಲಿ ಗೌರವ ಸಿಗಬೇಕಾದರೆ ಅಕ್ಷರ ಜ್ಞಾನ ಮುಖ್ಯ. ಸದೃಢ ದೇ ನಿರ್ಮಾಣವಾಗಲು ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಪಡೆಯಬೇಕು ಎಂದರು.
ಮುಖಂಡ ಚಂದ್ರಶೇಖರ ಪಾಟೀಲ್ ಮಾತನಾಡಿ, ಶಿಕ್ಷಕ ಎನ್.ವಿ. ಬಿರಾದರ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಓದಿನಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪಾಲಕರೊಂದಿಗೆ ಚರ್ಚಿಸಿ ಶಾಲೆ ಬಿಟ್ಟ ನಂತರ ಮಕ್ಕಳಿಗೆ ವಿಶೇಷ ತರಗತಿ ನಡೆಸಿದ್ದರಿಂದ ಇಂದು ಸಾವಿರಾರು ಮಕ್ಕಳು ಸುಧಾರಣೆಯಾಗಿದ್ದಾರೆ ಎಂದರು.
ಸನ್ಮಾನ: ಶಿಕ್ಷಕ ಎನ್.ವಿ. ಬಿರಾದರ ಅವರಲ್ಲಿ ಕಲಿತ ಸಾವಿರಾರೂ ವಿದ್ಯಾರ್ಥಿಗಳು ಆಧುನಿಕ ಯುಗದ ದ್ರೋಣಾಚಾರ್ಯ ಎನ್ನುವ ಬಿರುದು ನೀಡಿ ಸನ್ಮಾನಿಸಿದರು. ತಾಪಂ ಅಧ್ಯಕ್ಷೆ ಸವಿತಾ ಪಾಟೀಲ್, ಮುಖಂಡ ಬಾಬುರಾವ ತಾರೆ, ಘಾಳರೆಡ್ಡಿ ಮಮದಾಪುರ, ಶಿಕ್ಷಕ ನಾಗನಾಥ ಚಿಟ್ಟೆ, ಜಗನ್ನಾಥ ಬಿರಾದರ, ನಾಲಂದಾ ಕಾಲೇಜಿನ ಪ್ರಾಂಶುಪಾಲ ಮನ್ಮಥ ಡೋಳೆ ಸೇರಿದಂತೆ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.