ಹುಮನಾಬಾದ ತಹಶೀಲ್ದಾರ್ ಹಿರೇಮಠ ಬಂಧನಕ್ಕೆ ಆಗ್ರಹ
Team Udayavani, Feb 14, 2022, 3:29 PM IST
ಬೀದರ: ಹುಮನಾಬಾದ್ ತಹಶೀಲ್ದಾರ್ ಡಾ| ಪ್ರದೀಪಕುಮಾರ ಹಿರೇಮಠ ಅವರನ್ನು ಬಂಧಿಸಿ ಬಿಎಸ್‌ಪಿ ಪಕ್ಷದ ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೆ ಕ್ರಮ ವಹಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಈ ಕುರಿತು ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಒಕ್ಕೂಟದ ಪ್ರಮುಖರು ಮನವಿ ಸಲ್ಲಿಸಿದ್ದಾರೆ.
ರಾಯಚೂರಿನಲ್ಲಿ ನ್ಯಾಯಾಧೀಶರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಹುಮನಾಬಾದ್‌ನಲ್ಲಿ ಮನವಿ ಸಲ್ಲಿಸಲು ಮುಂದಾಗಿದ್ದ ಹೋರಾಟಗಾರರಿಂದ ಮನವಿ ಸ್ವೀಕರಿಸಲು ವಿಳಂಬ ನೀತಿ ಅನುಸರಿಸದ್ದನ್ನು ಖಂಡಿಸಿ ಹೊರಾಟಗಾರರ ಮತ್ತು ತಹಶೀಲ್ದಾರ್ ಮಧ್ಯೆ ಸಣ್ಣ ಘಟನೆ ನಡೆದಿದೆ ಎಂದು ಹೇಳಿದೆ.
ಘಟನೆ ಸಂಬಂಧ ಹೋರಾಟಗಾರರನ್ನು ಜೈಲಿಗಟ್ಟಲಾಗಿದೆ. ಆದರೆ, ತಹಶೀಲ್ದಾರ್ ವಿರುದ್ಧ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದರೂ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಚಾವ ಆಗುವ ಹುನ್ನಾರ ನಡೆಸುತ್ತಿದ್ದಾರೆ. ವೈದ್ಯರು ಸಹ ಅವರನ್ನು ಬಚಾವ್ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಒಕ್ಕೂಟದ ಅಧ್ಯಕ್ಷ ಅಂಬಾದಾಸ ಗಾಯಕವಾಡ, ದಲಿತ ಪರ ಸಂಘಟನೆಗಳ ಪ್ರಮುಖರಾದ ರಮೇಶ ಡಾಕುಳಗಿ, ರಾಜಕುಮಾರ ಮೂಲ ಭಾರತಿ, ಬಾಬುರಾವ್ ಪಾಸ್ವಾನ್, ಕಲ್ಯಾಣರಾವ್ ಭೋಸ್ಲೆ, ನಾಗೇಂದ್ರ ದಂಡೆ, ವಹೀದ್ ಲಖನ್, ಚಂದ್ರಕಾಂತ ನಿರಾಟೆ, ಶ್ರೀಪತರಾವ್ ದೀನೆ, ಉಮೇಶಕುಮಾರ ಸ್ವಾರಳ್ಳಿಕರ್, ಶಿವಕುಮಾರ ನೀಲಿಕಟ್ಟಿ, ರವಿಕುಮಾರ ವಾಘಮಾರೆ, ಬಕ್ಕಪ್ಪ ದಂಡಿನ್, ಶಾಲಿವಾನ್ ಬಡಿಗೆರ್, ಬಾಬು ಮಿಠಾರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.