ಪ್ರಸಕ್ತ ವರ್ಷ ವಿಮಾನಯಾನ ಅನುಮಾನ
Team Udayavani, Oct 26, 2018, 11:18 AM IST
ಬೀದರ: ನಗರ ಹೊರವಲಯದ ಚಿದ್ರಿ ಸಮೀಪದ ವಾಯು ನೆಲೆ ತರಬೇತಿ ಕೇಂದ್ರದಲ್ಲಿ ಈವರೆಗೆ ಪ್ರಾರಂಭಗೊಳ್ಳಬೇಕಾದ ನಾಗರಿಕ ವಿಮಾನಯಾನ ಸೇವೆ ಈ ವರ್ಷದಲ್ಲಿ ಶುರು ಆಗುವುದು ಬಹುತೇಕ ಅನುಮಾನ.
ಲೋಕಸಭೆ ಚುನಾವಣೆಗೂ ಮುನ್ನ ಬೀದರ್ ನಗರದಲ್ಲಿ ಸಾರ್ವಜನಿಕ ವಿಮಾನಯಾನ ಪ್ರಾರಂಭಗೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಧ್ಯ ಸಮನ್ವಯದ ಕೊರತೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ವಿಮಾನಯಾನ ಕುರಿತು ರಾಜಕಾರಣಿಗಳು ಸುಳ್ಳು ಹೇಳಿ ದಿನ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಚುನಾಯಿತ ಜನ ಪ್ರತಿನಿಧಿಗಳು ಕೂಡ ವರ್ತಿಸುತ್ತಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮುಂದಿನ ಮೂರು ತಿಂಗಳಲ್ಲಿ ಬೀದರ್ ನಗರದಿಂದ ನಾಗರಿಕ ವಿಮಾನಯಾನ ಪ್ರಾರಂಭಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಅದೇ ತಿಂಗಳಲ್ಲಿ ಸಂಸದ ಭಗವಂತ ಖೂಬಾ ಕೂಡ ಹೇಳಿಕೆ ನೀಡಿ, ಮೂರು ತಿಂಗಳಲ್ಲಿ ಇಲ್ಲಿಂದ ವಿಮಾನ ಹಾರಾಟ ಮಾಡುತ್ತವೆ.
ಈ ಭಾಗದ ಜನರಿಗೆ ವಿಮಾನ ಸೇವೆ ದೊರೆಯಲಿದೆ ಎಂದು ಹೇಳಿಕೆ ನೀಡಿದ್ದರು.
ಸದ್ಯ ಇಬ್ಬರು ನಾಯಕರು ಹೇಳಿಕೆ ನೀಡಿ ನಾಲ್ಕು ತಿಂಗಳು ಕಳೆದರೂ ಕೂಡ ಇಂದಿಗೂ ಯಾವುದೇ ಕೆಲಸಗಳು ವಾಯು ನೆಲೆಯಲ್ಲಿ ನಡೆಯುತ್ತಿಲ್ಲ. ಪಾಳುಬಿದ್ದ ಕಟ್ಟಡದಲ್ಲಿ ಯಾವುದೇ ದುರಸ್ಥಿಗಳು ಕೂಡ ನಡೆಯದಿರುವುದು ರಾಜಕಾರಣಿಗಳು ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಸಂಸದ ಭಗವಂತ ಖೂಬಾ ಅವರನ್ನು ವಿಚಾರಿಸಿದಾಗ, ಮುಂದಿನ ಜನವರಿ (2019) ವರೆಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ವಿಮಾನಯಾನ ಶುರು ಆಗಲಿದೆ.
ಈ ಕುರಿತು ಮುಂದಿನ 15 ದಿನಗಳಲ್ಲಿ ಸುದ್ದಿಗೋಷ್ಠಿ ಕರೆದು ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಜಿಲ್ಲೆಯ ಯಾವ ರಾಜಕಾರಣಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿ ವಿಮಾನಯಾನ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ವಿಮಾನಯಾನ ಪ್ರಾರಂಭಿಸುವ ನಿಟ್ಟಿನಲ್ಲಿ ಕೂಡ ರಾಜಕೀಯ ಮಾಡಲಾಗುತ್ತಿದೆಯೇ ಎಂಬ ಅನುಮಾನ ಜನರನ್ನು ಕಾಡುವಂತೆ ಮಾಡಿದೆ.
ಒಂದು ದಶಕದಿಂದ ವಿಮಾನ ಯಾನ ಕಾಮಗಾರಿ ಪ್ರಕ್ರಿಯೆಗಳು ನಡೆಯುತ್ತಿವೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಹೊಸ ನಿಲ್ದಾಣ ತಯಾರಿಸಿ ಈಗಾಗಲೇ ಪ್ರಾಯೋಗಿಕ ವಿಮಾನ ಹಾರಾಟ ನಡೆದಿದ್ದು, ಮುಂದಿನ ಕೆಲ ತಿಂಗಳಲ್ಲಿ ಸಾರ್ವಜನಿಕರ ಸೇವೆ ಪ್ರಾರಂಭಗೊಳ್ಳಲಿದೆ. ಆದರೆ, ಬೀದರ್
ನಗರದಲ್ಲಿ ವಾಯು ನೆಲೆ ತರಬೇತಿ ಕೇಂದ್ರ ಇದ್ದು, ಇಲ್ಲಿ ವಿಮಾನಗಳ ಹಾರಾಟ ಪ್ರತಿನಿತ್ಯ ನಡೆಯುತ್ತಿವೆ.
ಈಗಾಗಲೇ ಇಲ್ಲಿ ರನ್ ವೇ ಇದ್ದು, ವಿಮಾನ ಹಾರಾಟಕ್ಕೆ ಯಾವುದೇ ಸಮಸ್ಯೆಗಳು ಇಲ್ಲಿ ಇಲ್ಲ. ಆದರೆ, ನಾಗರಿಕ ವಿಮಾನಯಾನದ ಟರ್ಮಿನಲ್ ದುರಸ್ಥಿ ಕಾರ್ಯ, ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಇತರೆ ಪ್ರಮುಖ ಕಾಮಗಾರಿಗಳು ಬಾಕಿ ಇದ್ದು, ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿದರೆ, ಕೆಲ ತಿಂಗಳಲ್ಲಿಯೇ ಬೀದರ್‌ದಿಂದ ಕೂಡ ನಾಗರಿಕ ವಿಮಾನ ಹಾರಾಟ ಶುರು ಆಗಬಹುದು ಎಂಬುದು ಇಲ್ಲಿನ ಜನರ ಅನಿಸಿಕೆ.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.