ಚುನಾವಣೆಯಲ್ಲಿ ಸಿದ್ದುಗೆ ಸಿಗಲಿದೆ ತಕ್ಕ ಉತ್ತರ
Team Udayavani, Apr 7, 2018, 12:46 PM IST
ಹುಮನಾಬಾದ: ಕರ್ನಾಟಕದಲ್ಲಿ ಲಿಂಗಾಯತ ಸಮಾಜದವರು ಮುಖ್ಯಮಂತ್ರಿ ಆಗುವ ಸಾಧ್ಯತೆ ಇರುವುದನ್ನು ಅರಿತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದವರನ್ನೆ ಬಳಸಿಕೊಂಡು ಧರ್ಮ ಒಡೆಯುವ ಕೆಲಸ ಮಾಡಿದ್ದು, ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ಭಾತಂಬ್ರಾ ವಿರಕ್ತ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಡಗಿ ಗ್ರಾಮದ ಚನ್ನಮಲ್ಲೇಶ್ವರ ವಿರಕ್ತಮಠದಲ್ಲಿ ಏರ್ಪಡಿಸಲಾಗಿದ್ದ ಬೀದರ ಜಿಲ್ಲಾ ಮಠಾಧೀಶರ ಒಕ್ಕೂಟದ 24ನೇ ಸಮಾವೇಶ ಹಾಗೂ ಲಿ| ಹಾನಗಲ್ಲ ಗುರುಕುಮಾರೇಶ್ವರ 150ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ವ್ಯಕ್ತಿ ಮುಖ್ಯಮಂತ್ರಿ ಆಗಬಾರದು ಎಂದು ಚಿಂತನೆ ನಡೆಸಿ, ಸಮಾಜದವರಿಂದಲೇ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದ್ದು, ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದಾರೆ. ವೀರಶೈವ ಲಿಂಗಾಯತರು ಜಾಗೃತರಾಗಬೇಕು. ಧರ್ಮಕ್ಕೆ ಗೌರವ ನೀಡಬೇಕು. ನಮ್ಮ ಪರಂಪರೆಗೆ ಮೇಲೆ ವಿಶ್ವಾಸ ಇಡಬೇಕು. ಯಾರೇ ಬಂದು ಏನೇ ಹೇಳಿದರು ಕೂಡ ಧರ್ಮ ಒಡೆಯುವರಿಗೆ ಮೇ 12ರಂದು ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಸಂಪತಭರಿತ ಹಾಗೂ ಬಲಿಷ್ಟವಾದ ಭಾರತ ದೇಶ ಯಾವ ಕಾರಣಕ್ಕೆ ಗುಲಾಮಗಿರಿಗೆ ಒಳಗಾಗಿತ್ತು ಎಂಬುದನ್ನು ಇತಿಹಾಸದಿಂದ ತಿಳಿದುಕೊಳ್ಳಬೇಕು. ನಮ್ಮವರೇ ನಮ್ಮ ಸಮಾಜಕ್ಕೆ ಕಂಟಕವಾಗಿರುವುದರಿಂದ ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ದೇಶದ ಎಲ್ಲ ಧರ್ಮಗಳಲ್ಲಿಯೂ ಸಮಸ್ಯೆಗಳು ಇವೇ. ಹಾಗೇ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಮಧ್ಯೆ ಕೂಡ ಸಣ್ಣ ಸಮಸ್ಯೆ ಇದೆ. ಸಮಸ್ಯೆ ಇದೆ ಎಂದು ತಿಳಿದುಕೊಂಡು ಸಮಾಜ ಒಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇತರೆ ಧರ್ಮಗಳಲ್ಲಿನ ಸಮಸ್ಯೆಗಳಿಗೆ ಕೈಹಾಕಲು ರಾಜಕೀಯ ಪಕ್ಷಗಳಿಗೆ ಶಕ್ತಿ ಇಲ್ಲ. ಕಾರಣ ಎಲ್ಲವನ್ನು ಸಹಿಸಿಕೊಳ್ಳುವ ಸಮಾಜವನ್ನು ಒಡಯುವ ಕೆಲಸಕ್ಕೆ ಮುಂದಾಗಿದ್ದು, ಅದರ ಫಲ ಅವರಿಗೆ ದೊರೆಯುತ್ತದೆ ಎಂದು ಹೇಳಿದರು.
ಅಣ್ಣ ಬಸವಣ್ಣ ಕಾಯಕವೇ ಕೈಲಾಸ ಎಂದು ಸಾರಿದ್ದಾರೆ. ಅನ್ನ ದಾಸೋಹಕ್ಕೆ ಮಹತ್ವ ನೀಡುವಂತೆ ತಿಳಿಸಿದ್ದಾರೆ. ಆದರೆ ಸಮಾಜದ ಹೆಸರಲ್ಲಿ ಭಿಕ್ಷೆ ಕೇಳಲು ಹೇಳಿಲ್ಲ ಎಂದು ಹೇಳಿದರು.
ಬೀದರ ಜಿಲ್ಲಾ ಮಠಾಧೀಶರ ಮುಖ್ಯಸ್ಥ ಜಯಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಹಾನಗಲ್ಲ ಕುಮಾರಶಿವಯೋಗಿಗಳು ವೀರಶೈವ ಲಿಂಗಾಯತ ಧರ್ಮಕ್ಕೆ ನೀಡಿದ ಕೂಡುಗೆ ಅಪಾರವಾಗಿದೆ. ಶಿವಯೋಗ ಮಂದಿರದಲ್ಲಿ ಕೇವಲ ಜಂಗಮರಿಗೆ ಪ್ರವೇಶವಿದೆ ಎಂದು ಹೇಳಲಾಗುತ್ತಿದೆ.
ಅದು ಸತ್ಯಕ್ಕೆ ದೂರವಾದ ಮಾತು. ಭಾಲ್ಕಿ ಪಟ್ಟದೇವರು ಲಿಂಗಾಯತರಾದರು ಕೂಡ ಅದೇ ಶಿವಯೋಗ ಮಂದಿರದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಬೋಧನೆ ಪಡೆದಿದ್ದಾರೆ. ಅಲ್ಲದೇ ಅನೇಕ ಪ್ರಮುಖ ಮಠಾಧೀಶರು ಕೂಡ ಇದೇ ಶಿವಯೋಗ ಮಂದಿರದಲ್ಲಿ ಬೋಧನೆ ಪಡೆದಿದ್ದಾರೆ ಎಂದು ಹೇಳಿದರು. ವಿರೂಪಾಕ್ಷ ಶಿವಾಚಾರ್ಯರು, ಚನ್ನಮಲ್ಲ ದೇವರು, ಗುರುಲಿಂಗ ಶಿವಾಚಾರ್ಯರು, ಶಾಂತವೀರ ಶಿವಾಚಾರ್ಯರು, ಹಾವಲಿಂಗೇಶ್ವರ ಶಿವಾಚಾರ್ಯರು, ಸಿದ್ದಲಿಂಗ ಶಿವಾಚಾರ್ಯರು, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಘನಲಿಂಗ ರುದ್ರಮಿನಿ ಶಿವಾಚಾರ್ಯರು, ಚಿದಾನಂದ ಮಹಾಸ್ವಾಮಿಗಳು, ಶರಣಬಸವ ದೇವರು, ಡಾ| ಈಶ್ವರಾನಂದ ಮಹಾಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.