ಯುಪಿ ರೈತರ ಚಿತಾಭಸ್ಮ ಕೃಷ್ಣಾ ನದಿಯಲ್ಲಿ ವಿಸರ್ಜನೆ
Team Udayavani, Nov 1, 2021, 11:35 AM IST
ಶಹಾಪುರ: ಉತ್ತರ ಪ್ರದೇಶದ ಲಂಖೀಪುರ-ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಾರು ಹತ್ತಿಸಿ ಕೊಲೆ ಮಾಡಲಾದ ನಾಲ್ವರು ರೈತರ ಚಿತಾಭಸ್ಮವನ್ನು ಭಾನುವಾರ ತಾಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಮಾಜಿ ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಹಾಗೂ ಹೋರಾಟಗಾರರು ಜೊತೆಗೂಡಿ ದೆಹಲಿಯಿಂದ ರೈತರು ಕಳುಹಿಸಿದ ಭಸ್ಮವನ್ನು ನದಿ ದಂಡೆಯ ಬಳಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನಂತದ ಭಸ್ಮವನ್ನು ನದಿಯಲ್ಲಿ ಹರಿಬಿಟ್ಟರು.
ನಂತರ ಮಾತನಾಡಿದ ಬಿ.ಆರ್. ಪಾಟೀಲ್, ಕಾವೇರಿ ಮತ್ತು ಇಲ್ಲಿನ ಕೃಷ್ಣಾ ನದಿಯಲ್ಲಿ ಚಿತಾಭಸ್ಮವನ್ನು ಹರಿಬಿಡುವ ಮೂಲಕ ರೈತರ ತ್ಯಾಗ ಹಾಗೂ ಬಲಿದಾನವನ್ನು ದೇಶವು ಯಾವತ್ತು ಮರೆಯುವುದಿಲ್ಲ ಎಂಬ ಆಶಾ ಭಾವನೆ ನಮ್ಮದು. ಹುತಾತ್ಮರಾದ ರೈತರು ನಮ್ಮ ನೀರು, ಗಾಳಿ, ಬೆಳಕಿನ ಜೊತೆ ಇದ್ದಾರೆ ಎಂದರು. ರೈತ ಮುಖಂಡ ಭಾಸ್ಕರರಾವ ಮುಡಬೂಳ ಹಾಗೂ ಶರಣಪ್ಪ ಸಲಾದಪುರ ಮಾತನಾಡಿದರು.
ರೈತ ಮುಖಂಡರಾದ ಹಣಮಂತ ವಾಲ್ಮೀಕಿ, ಹಣಮಂತ ಭಂಗಿ, ಹಣಮಂತ ಬೆಣಕಲ್, ಭೀಮಸೇನರಾವ ಕುಲಕರ್ಣಿ, ಶಿವರಡ್ಡಿ ಕೊಳ್ಳೂರ, ಮಲ್ಲಣ್ಣ ಪರಿವಾಣ, ಶೌಕತ್ ಅಲಿ, ಉಮಾಪತಿ ಪಾಟೀಲ್, ಜಂಬಯ್ಯ ದೊರೆ, ಭೀಮಣ್ಣಗೌಡ ಹುಲಕಲ್, ಉಮೇಶ ಮುಡಬೂಳ, ಅರವಿಂದ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.