ಧರ್ಮ ಒಡೆವ ಸಂಚೆಂಬ ಗುಲ್ಲು ನಿರರ್ಥಕ
Team Udayavani, Sep 25, 2017, 11:52 AM IST
ಬೀದರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕೇಳುತ್ತಿರುವುದು ಹಿಂದು ಧರ್ಮ ಒಡೆಯುವ ಸಂಚೆಂದು ಕೆಲವರು ಗುಲ್ಲೆಬ್ಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಚಿತ್ರದುರ್ಗದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವ, ಲಿಂಗಾಯತ ಸಮಾವೇಶ ಹಾಗೂ ಬೀದರನಲ್ಲಿ ನಿಜಗುಣಾನಂದ ಶ್ರೀಗಳ ಪ್ರವಚನ ಆಯೋಜನೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದುವೆನ್ನುವುದು ಜೀವನ ವಿಧಾನ, ಅದೊಂದು ಸಂಸ್ಕೃತಿ. ಅದೊಂದು ಧರ್ಮವಾಗಿದ್ದರೆ ಬೌದ್ಧ, ಜೈನ, ಸಿಖ್, ಲಿಂಗಾಯತ ಧರ್ಮಗಳು ಉದಯಿಸಲು ಸಾಧ್ಯವಿರುತ್ತಿರಲಿಲ್ಲ ಎಂದರು.
ಶೋಷಣೆ ಒಪ್ಪದ ದೃಷ್ಟಾರರಿಂದ ನವ ಧರ್ಮ ಜನ್ಮ ತಾಳಿವೆ. ಇದರ ಜೊತೆಗೆ ವೀರಶೈವ, ಲಿಂಗಾಯತದ ಮಧ್ಯ ಗೊಂದಲ ನಿರ್ಮಿಸುತ್ತಿರುವವರು ಒಂದು ಮಾತನ್ನು ಸ್ಪಷ್ಠವಾಗಿ ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತ, ವೀರಶೈವ ಬೇರೆಯಲ್ಲ. ವೀರಶೈವವೆನ್ನುವುದು ಸರ್ಕಾರ ಗುರುತಿಸಿರುವ ಲಿಂಗಾಯತದ 73 ಒಳಪಂಗಡಗಳಲ್ಲಿ ಒಂದಾಗಿದೆ. ಯಾವುದೇ ಐತಿಹಾಸಿಕ ಆಧಾರವಿಲ್ಲದೇ ವೀರಶೈವ ಧರ್ಮವೆಂದು ಗುಲ್ಲೆಬ್ಬಿಸುವುದನ್ನು ಬಿಡಬೇಕು ಎಂದು ಹೇಳಿದರು.
ಬಸವಣ್ಣ ಎಲ್ಲರನ್ನು ಒಳಗೊಂಡ ಧರ್ಮ ಕಟ್ಟಿದ. ಆತ ಯಾರನ್ನೂ ದೂರ ಸರಿಸಿಲ್ಲ. ಸೂಳೆ ಸಂಕವ್ವೆ ಅವ್ವಳಂತಹ 2000 ಜನ ಇದರಲ್ಲಿ ಸೇರುತ್ತಾರೆ. ಮಾದಾರ, ಡೋಹಾರ, ಕ್ಷೌರಿಕ ಎಲ್ಲರನ್ನು ಒಳಗೊಂಡ ಶ್ರೇಷ್ಠ, ಜಾಗತಿಕ ಧರ್ಮ ಇದಾಗಿದೆ. ಇಡಿ ವಿಶ್ವಕ್ಕೆ ಬೆಳಕು ತೋರುವ ಶಕ್ತಿ ಲಿಂಗಾಯತಕ್ಕಿದೆ ಎಂದ ಅವರು, ಚಿತ್ರದುರ್ಗದಲ್ಲಿ ನಡೆಯುವ
ಲಿಂಗಾಯತ ರ್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸಭೆಯಲ್ಲಿ ಭಾಗವಹಿಸಿದ ಭಕ್ತರ ಮನವಿಗೆ ಸ್ಪಂದಿಸಿ ಅ.22ರಿಂದ ಒಂದು ತಿಂಗಳ ಕಾಲ ಪ್ರವಚನಕ್ಕೆ ಸಮಯ ನೀಡುವುದಾಗಿ ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಗಂದಗೆ, ಲಿಂಗಾಯತ ಸಮನ್ವಯ ಸಮಿತಿಯ ಬಾಬು ವಾಲಿ, ಪ್ರಭುರಾವ್ ವಸ್ಮತೆ, ಬಸವರಾಜ ಧನ್ನೂರ, ಆನಂದ ದೇವಪ್ಪ, ಬಸವರಾಜ ಪಾಟೀಲ ಹಾರೂರಗೇರಿ ಮಾತನಾಡಿದರು. ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಪ್ರಾಸ್ತಾವಿಕ ಮಾತನಾಡಿದರು. ಯುವ ಬಸವಕೇಂದ್ರದ ಸುರೇಶ ಚೆನಶೆಟ್ಟಿ ಸ್ವಾಗತಿಸಿದರು.
ವಿರೂಪಾಕ್ಷ ಗಾದಗಿ, ಚೆನ್ನಬಸವ ಹಂಗರಗಿ, ಜಗನ್ನಾಥ ಕಾಜಿ, ಚಂದ್ರಕಾಂತ ಕಾಡಾದಿ, ವೀರಶೆಟ್ಟಿ ಪಾಟೀಲ, ಚೆನ್ನಬಸವ ಹೇಡೆ, ಜಗು ಶಿವಯೋಗಿ, ವಿಜಯಕುಮಾರ ಗೌರೆ, ಶ್ರೀಕಾಂತ ಲಕಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.