ಕಾಂಗ್ರೆಸ್‌ಗೆ ಮೋದಿ ಟೀಕಿಸುವ ನೈತಿಕ ಹಕ್ಕಿಲ್ಲ
Team Udayavani, Feb 23, 2019, 9:05 AM IST
ಹುಮನಾಬಾದ: ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹುಮನಾಬಾದನಲ್ಲಿ ಶುಕ್ರವಾರ ನಡೆದ ಬೀದರ-ಕಲಬುರಗಿ ವ್ಯಾಪ್ತಿ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜವಾಬ್ದಾರಿ ನಿಭಾಯಿಸದ ರಾಜ್ಯ ಸರ್ಕಾರ: ಈ ಬಾರಿ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ ದ್ವಿಗುಣಗೊಳಿಸಿದ್ದಲ್ಲದೇ ವಿವಿಧ ಕಾರ್ಮಿಕರ ಮಾಸಾಶನ ಹೆಚ್ಚಿಸಲಾಗಿದೆ. ಆದರೆ ಕೆಂದ್ರದ ಜನಪರ ಯೋಜನೆ ಸಹಿಸದ ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿ
ನಿಭಾಯಿಸಲು ಸಾಧ್ಯವಾಗದೇ ಕೇಂದ್ರವನ್ನು ಟೀಕಿಸುತ್ತಿದೆ ಎಂದು ಆಪಾದಿಸಿದರು.
ಭಾರತದ ಸಮಗ್ರ ಅಭಿವೃದ್ಧಿಗಾಗಿ ಜಾತಿ, ವರ್ಗ, ವರ್ಣ ರಹಿತವಾಗಿ ಸರ್ವ ಜನ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 22 ಕ್ಷೇತ್ರ, ದೇಶದಲ್ಲಿ 300 ಸ್ಥಾನ ಗೆಲ್ಲುವ ಮೂಲಕ ಮತ್ತೂಮ್ಮೆ ಮೋದಿ ಅವರಿಗೆ ಅಧಿಕಾರ ನೀಡಲು ದೇಶದ ಜನತೆ ನಿರ್ಧರಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಟಾ ಶ್ರೀನಿವಾಸ, ಮಾಜಿ ಸಚಿವ ಶ್ರೀರಾಮುಲು, ಸಂಸದ ಭಗವಂತ ಖೂಬಾ, ಸಂಜಯ್ ಮಿಸ್ಕಿನ್, ರಘುನಾಥ ಮಲ್ಕಾಪುರೆ, ಬಾಬು ವಾಲಿ, ರಾಜ್ಯ ಕಾರ್ಯದರ್ಶಿ ರವಿಕುಮಾರ, ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ರಾಜೇಂದ್ರ ವರ್ಮಾ, ಬೀದರ ಲೋಕಸಭಾ ಕ್ಷೇತ್ರ ಸಂಚಾಲಕ ಸುಭಾಷ ಕಲ್ಲೂರ, ಬಿ.ಆರ್. ಪಾಟೀಲ, ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಅಮರನಾಥ ಪಾಟೀಲ ಇತರರು ಇದ್ದರು.
ಬೀದರ ಬಿಜೆಪಿ ಗಂಡು ಮೆಟ್ಟಿನ ನಾಡು
ಹುನಾಬಾದ: ಬೀದರ ಬಿಜೆಪಿ ಗಂಡು ಮೆಟ್ಟಿನ ಪುಣ್ಯಭೂಮಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಹುಮನಾಬಾದನಲ್ಲಿ ಶುಕ್ರವಾರ ನಡೆದ ಬೀದರ-ಕಲಬುರಗಿ ಮೋದಿ ವಿಜಯ ಸಂಕಲ್ಪ ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲದ ಕಾಂಗ್ರೆಸ್ ಅನ್ಯ ಪಕ್ಷಗಳ ಎದುರಿಗೆ ಕೈ ಚಾಚುತ್ತಿದೆ. ಅತ್ತ ಮಾಯಾವತಿ, ಮಮತಾ ಬ್ಯಾನರ್ಜಿ, ಅಖೀಲೇಶ ಯಾದವ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಒಳಗೊಂಡಂತೆ ವಿವಿಧ ಪಕ್ಷದ ಮುಖಂಡರ ಮನವೊಲಿಕೆಗೆ ಯತ್ನಿಸಿದರೂ ಫಲಿಸುತ್ತಿಲ್ಲ; ಮಾತ್ರವಲ್ಲ ಫಲಿಸುವುದೂ ಇಲ್ಲ ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಎಚ್.ಕೆ.ಆರ್.ಡಿ.ಬಿ ಅಸ್ತಿತ್ವದಲ್ಲಿದ್ದರೂ ವಿವಿಧ ಇಲಾಖೆ 40 ಸಾವಿರಕ್ಕೂ
ಅ ಧಿಕ ಹುದ್ದೆ ಭರ್ತಿ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಶೆಟ್ಟರ್ ನೇರ ಆಪಾದನೆ ಮಾಡಿದರು.
ಬಿಜೆಪಿ ಸರ್ಕಾರ ವ್ಯಾಪಾರಸ್ಥರಿಗೆ 40 ಲಕ್ಷ ರೂ. ವರೆಗಿನ ವ್ಯವಹಾರದ ಮೇಲಿನ ತೆರಿಗೆ ವಿನಾಯಿತಿ ನೀಡಿದೆ. 13ನೇ ಹಣಕಾಸು ಯೋಜನೆಯಡಿ
ಹಿಂದಿನ ಸರ್ಕಾರ ಕೇವಲ 85 ಲಕ್ಷ ಕೋಟಿ ಮಾತ್ರ ನೀಡಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3.28 ಕೋಟಿ ನೀಡಿದೆ. ದೇಶದ ಪ್ರತಿ
ರಾಜ್ಯಗಳನ್ನು ಸಮಾನವಾಗಿ ಕಾಣುತ್ತಿರುವ ಮೋದಿಜೀ ಪಕ್ಷಾತೀತವಾಗಿ ಅನುದಾನ ನೀಡುತ್ತಿದ್ದಾರೆ.
ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.