ಸಂಗೀತ-ರಂಗಕ್ಕೆ ಶ್ರೀಗಳ ಕೊಡುಗೆ ಸ್ಮರಣೀಯ
Team Udayavani, Feb 2, 2018, 12:04 PM IST
ಬಸವಕಲ್ಯಾಣ: ಹಿರಿಯ ಸಂಗೀತ ಮತ್ತು ರಂಗಭೂಮಿ ಕಲಾವಿದರಾಗಿದ್ದ ಶ್ರೀ ಕರಬಸಯ್ಯನವರು ಈ ಎರಡು ಕ್ಷೇತ್ರಕ್ಕೆ ನೀಡಿದ ಕೊಡುಗೆ ಮರೆಯಲಾಗದು ಎಂದು ಸಾಹಿತಿ ಡಾ| ಗವಿಸಿದ್ಧಪ್ಪ ಪಾಟೀಲ್ ಹೇಳಿದರು.
ಹಾರಕೂಡನ ಶ್ರೀ ಚೆನ್ನರೇಣುಕಬಸವ ಮಂಟಪದಲ್ಲಿ ಶ್ರೀ ಕರಬಸಯ್ನಾಸ್ವಾಮಿ ಹಿರೇಮಠ ಅವರ ಪುಣ್ಯಸ್ಮರಣೋತ್ಸವ
ನಿಮಿತ್ತ ನಡೆದ ಕಲ್ಯಾಣ ಕರ್ನಾಟಕ ದ್ವಿತೀಯ ಸಂಗೀತ ದಿನಾಚರಣೆ ಹಾಗೂ “ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಸಂಗೀತ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಸರಾಂತ ಸಂಗೀತಗಾರರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿ, ಮಾತೃ ಹೃದಯಿ, ಮೃದು ಮನಸ್ಸಿನವರಾಗಿದ್ದ
ಶ್ರೀ ಕರಿಬಸಯ್ಯ ಸ್ವಾಮಿಗಳು ಅಧ್ಯಾತ್ಮ ಜೀವಿಯಾಗಿದ್ದರು. ಹಾರಕೂಡ ಮಠದ ಪ್ರಗತಿಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.
ಮುಖಂಡ ಮೇಘರಾಜ ನಾಗರಾಳೆ, ಇಇ ದೇವಿದಾಸ ಚವ್ಹಾಣ ಮಾತನಾಡಿದರು. ಶಿಲ್ಪಿ ಸತೀಶ ಯಮ್ಹಾನ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂನ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕಲಬುರ್ಗಿಯ ರೇವಯ್ಯ ವಸ್ತ್ರದಮಠ, ಭಾಲ್ಕಿಯ ಉಸ್ತಾದ ಶೇಖ ಹನ್ನುಮಿಯಾ, ಹುಮನಾಬಾದನ ಜನಾರ್ಧನ ವಾಘಮಾರೆ, ಬಸವಕಲ್ಯಾಣದ ರಾಜಕುಮಾರ ಹೂಗಾರ ಮದಕಟ್ಟಿ, ಆಳಂದನ ಮಾರುತಿ ಕಾಸರ ಅವರಿಗೆ ಹಾರಕೂಡ ಶ್ರೀಗಳು ಈ ಸಾಲಿನ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ 10 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲವನ್ನೊಳಗೊಂಡಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪಾ ಗುದಗೆ, ಬಿಜೆಪಿ ಮುಖಂಡ ರಾಜಕುಮಾರ ಸಿರಗಾಪೂರ, ವಾತಡೆ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ವಾತಡೆ, ಪ್ರಮುಖರಾದ ದೇವಿಂದ್ರಪ್ಪಾ ಮೂಲಗೆ, ಮಲ್ಲಿನಾಥ ಹಿರೇಮಠ, ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ ಸುಭಾಸ ಮುರುಡ ಬೆಳಮಗಿ, ಅಪ್ಪಣ್ಣ ಜನವಾಡಾ ಇದ್ದರು. ವಿಠಲ ಹೂಗಾರ ಸ್ವಾಗತಿಸಿದರು. ಅಂಬಾರಾಯ ಉಗಾಜಿ ನಿರೂಪಿಸಿದರು.
ಪ್ರಶಸ್ತಿ ಪುರಸ್ಕೃತರು ಮತ್ತು ಸಂಗಡಿಗರಿಂದ ತಡ ರಾತ್ರಿ 2ರ ವರೆಗೆ ಸಂಗೀತ ಕಾರ್ಯಕ್ರಮ ಹಾಗೂ ಬೆಳಗಿನ ಜಾವದ ವರೆಗೆ ಭಜನಾ ತಂಡದಿಂದ ಭಜನೆ ನಡೆಯಿತು. ಬಳ್ಳಾರಿಯ ಸೌಮ್ಯಶ್ರೀ ಹಿರೇಮಠ ಅವರ ಭರತನಾಟ್ಯ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.