ಜೇನು ಕೃಷಿಗೆ ಜಿಲ್ಲೆ ವಾತಾವರಣ ಸೂಕ್ತ
Team Udayavani, Dec 20, 2021, 2:57 PM IST
ಬೀದರ: ಜಿಲ್ಲೆಯ ವಾತಾವರಣ ಜೇನು ಕೃಷಿಗೆ ಸೂಕ್ತವಾಗಿದ್ದು ಸಾಕಷ್ಟು ಹೂವುಗಳ ಲಭ್ಯತೆಯದೆ. ಜೇನುವಿಗೆ ಮಾರುಕಟ್ಟೆ ಕೂಡಾ ಚೆನ್ನಾಗಿದೆ ಎಂದು ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.
ನಗರದ ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗಾಗಿ ನಡೆದ ಆರು ದಿನಗಳ ಜೇನುಕೃಷಿ ತರಬೇತಿಯ ಸಮಾರೋಪ ಸಮಾರಂಭ ಮತ್ತು ಜೇನು ಪಟ್ಟಿಗೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೋಣಗಳು ಮಾನವನಿಗೆ ಬಹುಮುಖ್ಯ ಉಪಕಾರಿಯಾಗಿದೆ ಎಂದರು.
ಭಾರತವು ಪ್ರತಿ ವರ್ಷ 27,000 ಟನ್ ಜೇನು ಉತ್ಪಾದಿಸುತ್ತದೆ. ಅದರಲ್ಲಿ 7,000 ಟನ್ ಜೇನನ್ನು ರಫ್ತು ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿರುವ ಸಂಪನ್ಮೂಲಗಳನ್ನು ನೋಡಿದಾಗ ಪ್ರಸ್ತುತ ಜೇನು ಉತ್ಪಾದನೆ ತುಂಬಾ ಕಡಿಮೆ. ನಮ್ಮಲ್ಲಿ 1.2 ಮಿಲಿಯನ್ ಟನ್ ಜೇನು ಉತ್ಪಾದನೆ ಮಾಡುವ ಅವಕಾಶವಿದೆ. ಇದರಿಂದ 6 ಲಕ್ಷ ಜನರಿಗೆ ಉದ್ಯೋಗ ನೀಡಬಹುದಾಗಿದೆ ಎಂದು ತಿಳಿಸಿದರು.
ಜೇನು ಪೆಟ್ಟಿಗೆಗಳಲ್ಲಿ ಭಾರತೀಯ ತಳಿಯಾದ ತುಡುವೆ ಜೇನನ್ನು ಹೆಚ್ಚು ಸುಲಭವಾಗಿ ಸಾಕಬಹುದಾಗಿದೆ. ಬೀದರಿನ ಹವಾಮಾನಕ್ಕೆ ಇವು ಹೊಂದಿಕೊಳ್ಳುತ್ತವೆ. ಆದ್ದರಿಂದ ನೈಸರ್ಗಿಕವಾಗಿ ರೈತರಿಗೆ ಪ್ರಯೋಜನಕಾರಿಯಾದ ಜೇನು ಕೃಷಿಯನ್ನು ಹೊಂದುವುದರ ಮೂಲಕ ರೈತರು ಹೆಚ್ಚು ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈಗ ರೈತರಿಗೆ ಉಚಿತವಾಗಿ ಜೇನು ಪೆಟ್ಟಿಗೆಗಳನ್ನು ವಿತರಿಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಮರಸ ಸಂಸ್ಥೆಯ ವೇದಮಣಿ ಮತ್ತು ಲಲಿತಾ, ತರಬೇತುದಾರ ಮಹಮ್ಮದ ಸಿರಾಜುದ್ದೀನ, ಸುರೇಶ ಮತ್ತು ಆಸಕ್ತ 20 ಜನ ರೈತರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಜೇನು ಪಟ್ಟಿಗೆಗಳನ್ನು ಉಚಿತವಾಗಿ ನೀಡಿದ ಬೆಂಗಳೂರಿನ ಎಂ.ಸಿ.ಕೆ. ಎಸ್ ಫೌಂಡೇಶನ್ ವತಿಯಿಂದ ಶುಭ ಹಾರೈಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.