ಮಕ್ಕಳ ಸಾಹಿತ್ಯ ಪ್ರತಿಭೆ ಬೆಳಕಿಗೆ ತರಲಿ ಪರಿಷತ್ತು
Team Udayavani, Mar 31, 2018, 12:15 PM IST
ಬೀದರ: ಮಕ್ಕಳಲ್ಲಿನ ಸುಪ್ತ ಸಾಹಿತ್ಯ ಪ್ರತಿಭೆ ಬೆಳಕಿಗೆ ತರುವ ಕಾರ್ಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯನ್ಮುಖವಾಗಬೇಕು ಎಂದು ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್ ಸಲಹೆ ನೀಡಿದರು. ನಗರದಲ್ಲಿ ಶುಕ್ರವಾರ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿಪದಾಧಿ ಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಪರಿಷತ್ ಒತ್ತಾಯದ ಮೇರೆಗೆ ಸರ್ಕಾರ ಬಾಲ ವಿಕಾಸ ಅಕಾಡೆಮಿ ಸ್ಥಾಪನೆ ಮಾಡಿ, ಸಾಹಿತ್ಯದತ್ತ ಮಕ್ಕಳ ಒಲುವು ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಮಗು ಮನೆ ತುಂಬ ನಗು. ಮನೆಯಲ್ಲಿ ಮಗುವಿದ್ದರೆ ಮನೆ ತುಂಬ ನಗುವಿನ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಪುಸ್ತಕ ಓದುವಂತೆ ಮನೆಯಲ್ಲಿ ಪಾಲಕರು ಪ್ರೋತ್ಸಾಹ ನೀಡಬೇಕು. ಮಾವನವ ಜೀವನ ಯಾಂತ್ರಿಕವಾಗಿಬಿಟ್ಟಿದೆ. ಮನೆಗಳು ಮಕ್ಕಳಿಗೆ ಜೈಲುಗಳಾಗಿವೆ. ಪಾಲಕರು ಮಕ್ಕಳಿಗೆ ಜೇಲರ್ ಆಗಿದ್ದಾರೆ ಎಂದರು.
ಸಾಹಿತಿ ಶಿವಕುಮಾರ ಕಟ್ಟೆ ಮಾತನಾಡಿ, ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಾಹಿತ್ಯ ಕುರಿತು ಉಪನ್ಯಾಸ, ಗೋಷ್ಠಿ, ಕಮ್ಮಟ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಶಿಬಿರಗಳನ್ನು ಕಾಟಾಚಾರಕ್ಕೆ ನಡೆಸದೇ ಸರ್ಕಾರ ನಡೆಸುವ ಪ್ರತಿಭಾ ಕಾರಂಜಿಯಂತೆ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಮಕ್ಕಳಲ್ಲಿರುವ ಸಾಹಿತ್ಯ, ಸಂಗೀತ, ಕಲೆ ಬೆಳಕಿಗೆ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ಸಾಹಿತ್ಯ, ಶಿಕ್ಷಣ, ಮಕ್ಕಳ ಕ್ಷೇತ್ರದಲ್ಲಿ ದುಯುತ್ತಿರುವ ಯುವ ಪ್ರತಿಭೆಗಳನ್ನು ನೇಮಿಸಿದರೆ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ನೂತನ ಪದಾಧಿ ಕಾರಿಗಳ ತಂಡಕ್ಕೊಂದು ಘನತೆ, ಗೌರವ ಬರುತ್ತದೆ ಎಂದರು.
ಪ್ರಮುಖರಾದ ಚಂದ್ರಗುಪ್ತ ಚಾಂದಕವಠೆ, ರಜಿಯಾ ಬಳಬಟ್ಟಿ, ಎಂ.ಜಿ. ದೇಶಪಾಂಡೆ, ಪ್ರವೀಣಕುಮಾರ ಗಾಯಕವಾಡ, ಸುನೀಲ ಕಡ್ಡೆ, ಅವಿನಾಶ ಸೋನೆ, ವಿಜಯಕುಮಾರ ಗೌರೆ, ಎಂ.ಪಿ. ಮುದಾಳೆ, ಸೈಯ್ಯದ್ ಮೊಮಹ್ಮದ್ ಗೌಸ್ ಖಾದ್ರಿ, ಮಾಣಿಕರಾವ್ ಪವಾರ, ಕಿಚ್ಚ ಮಹೇಶ, ಸತ್ಯಮ್ಮ ವಿಶ್ವಕರ್ಮ ಮಾತನಾಡಿದರು.
ನಾಗಶೆಟ್ಟಿ ಪಾಟೀಲ ಗಾದಗಿ, ಸುನೀಲ ಭಾವಿಕಟ್ಟಿ, ಅರುಣ ಪಟೇಲ್, ಜಯಶ್ರೀ ಬಕಾಲೆ, ಸುನೀತಾ ಬಿರಾದಾರ, ಯೇಸುದಾಸ ಅಲಿಯಂಬುರೆ, ಫರ್ನಾಂಡೀಸ್ ಹಿಪ್ಪಳಗಾಂವ, ಮಕ್ಸೂದ ಅಲಿ, ದೀಲಿಪಕುಮಾರ ಕಾಡವಾದ ಇದ್ದರು.
ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಪರಿಷತ್ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಾರ್ವತಿ ವಿಜಯಕುಮಾರ ಸೋನಾರೆ, ಉಪಾಧ್ಯಕ್ಷರಾಗಿ ಸತ್ಯಮ್ಮ ವಿಶ್ವಕರ್ಮ, ಸೈಯ್ಯದ್ ಮೊಹಮ್ಮದ ಗೌಸ್ ಖಾದ್ರಿ, ಸುಮತಿ ಕುದರೆ, ಪ್ರಧಾನ ಕಾರ್ಯದರ್ಶಿಗಳಾಗಿ ಮಾಣಿಕರಾವ್ ಪವಾರ, ಮಹಾರುದ್ರ ಡಾಕುಳಗಿ, ಕಿಚ್ಚ ಮಹೇಶ, ಪ್ರವೀಣಕುಮಾರ ಗಾಯಕವಾಡ, ಕುಪೇಂದ್ರ ರಾಝಗೀರಾ, ಸಂಘಟನಾ ಕಾರ್ಯದರ್ಶಿಗಳಾಗಿ ಈಶ್ವರ ತಡೋಳಾ, ಪುಷ್ಪಾ ಕನಕ, ಮಕ್ಸೂದ ಅಲಿ ಮಕ್ಸೂದ, ಓಂಕಾರ ಪಾಟೀಲ, ಅಂಬಾಜಿ ಕೋಟಗ್ಯಾಳೆ, ವಿಜಯಕುಮಾರ ಗೌರೆ, ಕೋಶಾಧ್ಯಕ್ಷರಾಗಿ ರಜಿಯಾ ಬಳಬಟ್ಟಿ, ಸದಸ್ಯರಾಗಿ ಚನ್ನಬಸವ ಚಿಕ್ಲೆ, ಅವಿನಾಶ ಸೋನೆ, ಕವಿತಾ ಭುಜಂಗೆ, ಸುನೀತಾ ಬಿರಾದಾರ, ಇಂದುಮತಿ, ಶ್ರೀದೇವಿ ಹೂಗಾರ ಹಾಗೂ ಔರಾದ ತಾಲೂಕು ಅಧ್ಯಕ್ಷರನ್ನಾಗಿ ರಾಮದಾಸ ಬಿರಾದಾರ ಅವರನ್ನು ಆಯ್ಕೆ ಮಾಡಲಾಯಿತು
ಬೀದರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿಯ ಸಮರ್ಥ ತಂಡ ಕಟ್ಟಿಕೊಂಡು ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಮಕ್ಕಳನ್ನು ಬೆಳಕಿಗೆ ತರುವ ಕಾರ್ಯ ಮಾಡಲಿದೆ. ಮಕ್ಕಳನ್ನು ಹೆಚ್ಚೆಚ್ಚು ಸಾಹಿತ್ಯದತ್ತ ತರುವುದು ಮಕ್ಕಳ ಪರಿಷತ್‌ನ ಉದ್ದೇಶ. ಈ ದಿಸೆಯಲ್ಲಿ ಪದಾಧಿ ಕಾರಿಗಳು ತನು ಮನ ಧನದಿಂದ ಶ್ರಮಿಸಲಿದ್ದಾರೆ. ಆ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸ ಆಗಲಿದೆ.
ಪಾರ್ವತಿ ಸೋನಾರೆ, ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.