ಸರ್ವಜ್ಞ ವಿಚಾರಧಾರೆ ಅರಿತರೆ ಸಮಸಮಾಜ ನಿರ್ಮಾಣ
Team Udayavani, Feb 21, 2018, 12:04 PM IST
ಬೀದರ: ಸರ್ವಜ್ಞ ಅವರಂತಹ ಮಹಾನ್ ಜ್ಞಾನಿಗಳ ವಿಚಾರಧಾರೆಗಳನ್ನು ಅರಿತುಕೊಂಡಲ್ಲಿ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್ ಖಾನ್ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರವು ಬಡವರ ಪರ ಅನೇಕ ಸವಲತ್ತುಗಳನ್ನು ನೀಡಿ, ಶೈಕ್ಷಣಿಕವಾಗಿ ಮುಂದೆ ಬರಲು ಪ್ರೇರೇಪಿಸುತ್ತಿದೆ. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಹುಮಾನಾಬಾದನ ಉಪನ್ಯಾಸಕ ಅಜೇಂದ್ರ ಸ್ವಾಮಿ ಏಕದಂಡಿಗಿಮಠ ಉಪನ್ಯಾಸ ನೀಡಿ, ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಜ್ಞಾನಿ ಸರ್ವಜ್ಞ. ಅವರು ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಓದದ ವಿಷಯವಿಲ್ಲ ಎಂಬಂತೆ ದೇಶ ಸುತ್ತಿ ಕೋಶ ಓದಿದವರು.
ಭಕ್ತಿ, ಪ್ರೀತಿ, ಕರುಣೆ, ಸಮಾಜ, ಪ್ರಕೃತಿ, ಸತ್ಯ ಇವುಗಳೆಲ್ಲದರ ಬಗ್ಗೆ ತ್ರಿಪದಿಗಳಲ್ಲಿ ಬರೆದಿದ್ದಾರೆ. ಮನುಷ್ಯನ ವ್ಯಕ್ತಿತ್ವವನ್ನು ಅವನ ಬಟ್ಟೆಯ ಮೇಲೆ ಅಳೆಯಬಾರದು. ಎಲ್ಲರನ್ನು ಪ್ರೀತಿ, ಗೌರವದಿಂದ ಕಾಣಬೇಕು ಎನ್ನುವಂತಹ ಜೀವಪರ ಮೌಲ್ಯಗಳನ್ನು ಸರ್ವಜ್ಞ ಪ್ರತಿಪಾದಿಸಿದರು ಎಂದು ಹೇಳಿದರು.
ಕಂಠೀರವ ಸ್ಟುಡಿಯೋ ನಿಯಮಿತ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನ್ನಾಥ ಜಮಾದಾರ, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ತಹಶೀಲ್ದಾರ ಕೀರ್ತಿ, ಕುಂಬಾರ ಸಂಘದ ರಾಜ್ಯ ಕಾರ್ಯದರ್ಶಿ ಬಾಬುರಾವ್ ಕುಂಬಾರ, ಜಿಲ್ಲಾ ಅಧ್ಯಕ್ಷ ವಿಠ್ಠಲ್ ಕುಂಬಾರ, ವಿಪುಲ್ ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು.
ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಲೇಖಕ ಚೆನ್ನಬಸವ ಹೆಡೆ ನಿರೂಪಿಸಿದರು. ಅಶ್ವಿನಿ ತಂಡದವರು ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.