ಕಲ್ಯಾಣಿ ಚಾಲುಕ್ಯರ ಕಾಲದ ಶಾಸನ ಶೋಧ
Team Udayavani, Jan 10, 2022, 10:12 PM IST
ಲಿಂಗಸೂಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದ ದಾನ ಶಾಸನವನ್ನು ರಾಯಚೂರು ವಿಶ್ವವಿದ್ಯಾಲಯದ ಉಪನ್ಯಾಸಕ, ಸಂಶೋಧಕರಾದ ಡಾ| ಶಿವರಾಜ ಯತಗಲ್ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಕರಡಕಲ್ಲಿನ ಜನತಾ ಕಾಲೋನಿಯಲ್ಲಿ ಭಗ್ನವಾಗಿ ಬಿದ್ದಿರುವ ಲಕ್ಷ್ಮೀ ದೇವಸ್ಥಾನದ ಅವಶೇಷಗಳಲ್ಲಿ ಮುರಿದು ಬಿದ್ದಿರುವ, 932 ವರ್ಷಗಳ ಹಿಂದೆ ಕೆತ್ತಿಸಿದ ಸ್ತಂಭ ಶಾಸನವನ್ನು ಗುರುತಿಸಿದ್ದಾರೆ.
ಮಣ್ಣಿನಲ್ಲಿ ಹೂತಿರುವ ಶಾಸನ ಹೊರತೆಗೆದು, ನೀರಿನಿಂದ ಸ್ವತ್ಛಗೊಳಿಸಿ ಅದರ ಛಾಯಾಚಿತ್ರ ತೆಗೆದು ಮೈಸೂರಿನ ಭಾರತೀಯ ಪುರಾತತ್ವ ಮತ್ತು ಶಾಸನಶಾಸ್ತ್ರ ಇಲಾಖೆಯ ನಿರ್ದೇಶಕರಾದ ಡಾ| ಕೆ.ಮುನಿರತ್ನಂ ರೆಡ್ಡಿ ಹಾಗೂ ಬೆಂಗಳೂರಿನ ಮಿಥಿಕ್ ಸೊಸೈಟಿಯ ತ್ರಿ-ಡಿ ಡಿಜಿಟಲ್ ಸದಸ್ಯರಾದ ಶಶಿಕುಮಾರ ನಾಯ್ಕರ ಅವರನ್ನು ಕಳುಹಿಸಿ, ತಕ್ಷಣವೇ ಓದಿ ಮಾಹಿತಿ ಸಂಗ್ರಹಿಸಲಾಯಿತು. ಗ್ರಾಮದ ಸ್ಥಳೀಯರು ಲಕ್ಷಿದೇವಿ ದೇವಸ್ಥಾನವೆಂದು ಕರೆಯುವ ಈ ಸ್ಥಳದಲ್ಲಿ ದೊರಕಿರುವ ಈ ಶಾಸನವನ್ನು ದೇವಸ್ಥಾನದ ಸ್ತಂಭಕ್ಕೆ ಕೆತ್ತಲಾಗಿದೆ.
ಸಂಪೂರ್ಣವಾಗಿ ಈ ದೇವಾಲಯ ನೆಲಕಚ್ಚಿದೆ. ಎಂಟು ಸಾಲುಗಳ ಈ ಶಾಸನ 6ನೇ ವಿಕ್ರಮಾದಿತ್ಯನ ಆಡಳಿತಾವ ಧಿಯ ದಾನ ಶಾಸನವಾಗಿದೆ. ಸದರಿ ಗ್ರಾಮದಲ್ಲಿ ನಾಣ್ಯ ತಯಾರಿಸುವ ಟಂಕಸಾಲೆ ಇತ್ತೆಂದು ಶಾಸನ ಹೇಳುತ್ತದೆ. ತಂಡದಲ್ಲಿ ಬರಹಗಾರ ಅಶೋಕ ದಿದ್ದಿಗಿ, ಶಿಕ್ಷಕ ಗಿರೀಶ ಕೊಳ್ಳೇಗಾಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.