ಸಂವಿಧಾನದ ಕಾನೂನು ಎಲ್ಲರಿಗೂ ಒಂದೇ
Team Udayavani, Nov 15, 2021, 3:36 PM IST
ದೇವದುರ್ಗ: ಸಂವಿಧಾನದ ಕಾನೂನು ಎಲ್ಲರಿಗೂ ಒಂದೇ. ಅರಿವು-ನೆರವು ಕಾರ್ಯಕ್ರಮ ಮೂಲಕ ಕಾನೂನು ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹೊರ ವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಅವೆರ್ನೆಸ್ ಮತ್ತು ಜೌಟ್ರೀಚ್ ಪ್ರೋಗ್ರಾಮ್ ಸಮಾರೋಪ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಮಕ್ಕಳು ದೇಶದ ಭವಿಷ್ಯ ರೂಪಿಸುವ ಶಕ್ತಿಗಳು ಇದ್ದಂತೆ. ಆಡಳಿತ ನಡೆಸುವವರಿಗೆ ಕೇಳುವವರ ಗಟ್ಟಿಧ್ವನಿ ಇದ್ದಾಗಲೇ ದೇಶ, ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾ ಧೀಶರಾದ ವೈ.ಎಲ್. ಲಾಡ್‌ಖಾನ್ ಮಾತನಾಡಿ, ಕಾನೂನು ತಿಳಿವಳಿಕೆಯಿಂದ ಪ್ರತಿಯೊಬ್ಬರು ಗೌರವಿಸಬೇಕು. ಲೋಕ ಅದಾಲತ್ ಕಾರ್ಯಕ್ರಮ ಮೂಲಕ ಜನನ ಪ್ರಮಾಣ ಪತ್ರ ಸೌಲಭ್ಯ ಕಲ್ಪಿಸಿದ್ದು, ಜಿಲ್ಲೆಗೆ ಪ್ರಥಮ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಇಂದಿರಾ ಮಾತನಾಡಿದರು. ಎಸ್ ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿವಿಲ್ ನ್ಯಾಯಾಧಿಧೀಶರಾದ ಬಾಳಾಸಾಹೇಬ ವಡವಡೆ, ಶ್ರೀನಿವಾಸ ಚಾಪಲ್, ರಾಘವೇಂದ್ರ, ಡಾ| ಬನದೇಶ್ವರ, ತಾಯಪ್ಪ ನಾಯಕ, ರಂಗನಾಥ ಸೋಮಕರ, ಮಂಜುನಾಥ ರೆಡ್ಡಿ, ಫಾದರ್, ಕುರಿಯೋಕೋಸ್, ವೆಂಕಟಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.