ಮನಸ್ಸು ಮುಟ್ಟುವ ಸಾಹಿತ್ಯ ಶ್ರೇಷ್ಠ


Team Udayavani, Mar 31, 2018, 12:06 PM IST

bid-1.jpg

ಹುಮನಾಬಾದ: ಮನಸ್ಸು ಮುಟ್ಟುವ ಹೃದಯ ತಟ್ಟುವ ಸಾಹಿತ್ಯ ಶ್ರೇಷ್ಠವೆನ್ನಿಸಿಕೊಳ್ಳುತ್ತದೆ. ಹಾಗಾಗಿ ಶ್ರೇಷ್ಠ ಸಾಹಿತಿಗಳ ಜೀವನ, ಸಾಹಿತ್ಯ ಮೌಲ್ಯಗಳನ್ನು ಇಂದಿನವರು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಮಾಣಿಕನಗರ ಮಾಣಿಕ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಮಾಣಿಕ ಪ್ರಭುಗಳು ಹೇಳಿದರು.

ಮಾಣಿಕನಗರದ ಮಾಣಿಕಪ್ರಭು ಭವನದಲ್ಲಿ “ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಾಹಿತ್ಯಕ್ಕೆ ಭವ್ಯ ಪರಂಪರೆಯಿದೆ. ವೇದ ಕಾಲದಿಂದಲೂ ಅದರ ಛಾಪು ದಟ್ಟವಾಗಿದ್ದು, ಸಮರ್ಥ ಸಾಹಿತ್ಯ ಸೃಷ್ಟಿಗೆ ವಿಶಾಲ ಮನಸ್ಸು ಅಗತ್ಯ. ಭಾರತದ ಭವ್ಯ ಇತಿಹಾಸವನ್ನು ಇಂದಿನ ಜನರಿಗೆ ಮುಟ್ಟುವಂತೆ ಮಾಡಿರುವುದು ಸಾಹಿತಿಗಳು ಎಂಬುನ್ನು ಮರೆಯಬಾರದು ಎಂದರು.

ಮಹಾಭಾರತ, ರಾಮಾಯಣ ಸೇರಿದಂತೆ ಅನೇಕ ನೈಜ ಘಟನೆಗಳು ಮೂಲತ ಸಂಸ್ಕೃತ ಭಾಷೆಯಲ್ಲಿದ್ದರೂ ಕೂಡ ಅವುಗಳನ್ನೂ ಮೀರಿಸುವಂತೆ ಇತರೆ ಭಾಷೆಗಳಿಗೆ ಭಾಷಾಂತರ ಮಾಡಿ ಪ್ರತಿಯೊಬ್ಬರಿಗೆ ಇತಿಹಾಸದ ಸಾಹಿತ್ಯವನ್ನು ಪಸರಿಸುವಲ್ಲಿ ಸಾಹಿತಿ, ಋಷಿ ಮುನಿಗಳ ಶ್ರಮ ಮುಖ್ಯವಾಗಿದೆ ಎಂದರು. ಹೊಸದಾಗಿ ಉದ್ಘಾಟನೆಗೊಂಡ ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಮೂಲಕ ಕೂಡ ಹೊಸ ಇತಿಹಾಸದ ಸೃಷ್ಟಿಯಾಗಬೇಕು. ಸಮಾಜದಲ್ಲಿ ಬದಲಾವಣೆಗೆ ಪ್ರೇರಣೆ ನೀಡುವ ಮೂಲಕ ಭವಿಷ್ಯದ ಯುವ ಜನತೆಗೆ ಉತ್ತಮ ಸಂದೇಶ ಸಾರುವಂತಾಗಲಿ ಎಂದು ಹೇಳಿದರು.

ಸಾಹಿತಿ ಬಂಡೆಪ್ಪಾ ಖೂಬಾ ಮಾತನಾಡಿ, ಇಂದಿನ ಸಾಹಿತ್ಯದಲ್ಲಿ ರಾಜಕಾರಣ ಹೆಚ್ಚಾಗಿದೆ. ಸಾಹಿತಿಗಳಲ್ಲಿ ಪರಸ್ಪರ ಸಾಮರಸ್ಯದ ಕೊರತೆ ಇದೆ. ನಿಜವಾದ ಸಾಹಿತಿಗೆ ಆತ್ಮತೃಪ್ತಿ ಇದೆ. ಸ್ಥಾನಮಾನಗಳ ಹಂಗು ತೊರೆದು ನೈಜ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಹೇಳಿದರು. 

ಸಾಹಿತಿ ಎಚ್‌. ಕಾಶಿನಾಥರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಬಹಳಷ್ಟು ಸಾಹಿತ್ಯ ಜಾನಪದದಲ್ಲಿದೆ. ಅದನ್ನು ವ್ಯಾಪಕವಾಗಿ ಸಂಗ್ರಹಿಸಿ ಪ್ರಕಟಿಸಿದರೆ ಈ ಭಾಗದ ಸಾಹಿತ್ಯ ಶ್ರೀಮಂತಿಕೆ ಇನ್ನೂ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಾಹಿತಿಗಳಾದ ಡಾ| ಗವಿಸಿದ್ದಪ್ಪಾ ಪಾಟೀಲ, ಟಿ.ಕೆ. ಮಾಣಿಕರೆಡ್ಡಿ ಇಸ್ಲಾಂಪುರ, ಪ್ರತಿಷ್ಠಾನದ ಅಧ್ಯಕ್ಷ ಶಿವಶಂಕರ ತರನಳ್ಳಿ, ಎಂ.ಆರ್‌. ಗಾದಾ ಮಾತನಾಡಿದರು.

ಪ್ರಾಚಾರ್ಯ ಸುಮಂಗಲಾ ಜಾಗಿರದಾರ, ಭೀಮಸೇನ ಗಾಯಕವಾಡ, ರುಕಮೋದ್ದಿನ್‌ ಇಸ್ಲಾಮಪುರ, ಕೆ. ಪ್ರಭಾಕರ, ಶಕೀಲ್‌ ಐ.ಎಸ್‌, ಈಶ್ವರ ತಡೋಳಾ, ರೈಯಬಖಾನ ಬೇಮಳಖೇಡಾ, ವೀರಶೇಟ್ಟಿ ಜೀರಗಿ, ಶಿವರಾಜ ಮೇತ್ರೆ, ಮಾರುತಿ ಪೂಜಾರಿ, ಬಸವರಾಜ ಕೆ, ನಾರಾಯಣರಾವ್‌ ಚಿದ್ರಿ, ಕಂಠೆಪ್ಪಾ ಹಲರ್ಬಗೆ, ಅಮೃತ ಬರ್ಮಾ, ರಾಜಕುಮಾರ ಹರನಾಳ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.