ಒತ್ತುವರಿ ಜಮೀನು ತೆರವು
Team Udayavani, Jan 17, 2019, 8:08 AM IST
ಹುಮನಾಬಾದ: ಪಟ್ಟಣದ ವಾಂಜ್ರಿಯಲ್ಲಿ ಆಹಾರ ಇಲಾಖೆ ಗೋದಾಮು ನಿರ್ಮಾಣಕ್ಕಾಗಿ ಆಹಾರ ಇಲಾಖೆಗೆ ನೀಡಿದ್ದ ಸರ್ಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ನ್ಯಾಯಾಲಯ ಆದೇಶದ ಮೇರೆಗೆ ಬುಧವಾರ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವುಗೊಳಿಸಿದರು.
1999ರಲ್ಲಿ ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಗೋದಾಮು ನಿರ್ಮಾಣಕ್ಕಾಗಿ 1ಎಕರೆ ಜಮೀನು ಒದಗಿಸಿದ್ದರು. ಆದರೆ ಆ ಸ್ಥಳದಲ್ಲಿ ಆಹಾರ ಇಲಾಖೆ ಗೋದಾಮು ನಿರ್ಮಿಸಿಕೊಳ್ಳದ್ದನ್ನು ಗಮನಿಸಿ ವಾಂಜ್ರಿಯ ವೀರಾರೆಡ್ಡಿ ನಾಗರೆಡ್ಡಿ, ಮಾಣಿಕರೆಡ್ಡಿ ನಾರಾಯಣರೆಡ್ಡಿ, ಹಣಮಂತರೆಡ್ಡಿ ನಾಗರೆಡ್ಡಿ, ಭರತರೆಡ್ಡಿನ ನಾಗರೆಡ್ಡಿ, ಅಕ್ಕಮ್ಮ ನಾಗರೆಡ್ಡಿ, ರವಿರೆಡ್ಡಿ ಪುಂಡ್ಲಿಕರೆಡ್ಡಿ, ಸರೋಜಮ್ಮ ಹಣಮಂತರೆಡ್ಡಿ, ಭೀಮರೆಡ್ಡಿ ವೀರಾರೆಡ್ಡಿ, ಯಮುನಾರೆಡ್ಡಿ ವೀರಾರೆಡ್ಡಿ ಮತ್ತು ಭೀಮಬಾಯಿ ವೀರಾರೆಡ್ಡಿ ಸೇರಿ ಒಟ್ಟು 10 ಮಂದಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಈ ಸಂಬಂಧ 2010ರಲ್ಲಿ ಆಹಾರ ಇಲಾಖೆ ನ್ಯಾಯಾಲಯ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ 2019ರ ಜನವರಿ 18ರೊಳಗೆ ಅತಿಕ್ರಮಣ ತೆರವುಗೊಳಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ 2018ರ ಡಿಸೆಂಬರ್ 19ಕ್ಕೆ ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಎಂಜಿನಿಯರ್ ಮಚೇಂದ್ರ ಖಂಡಗೊಂಡ ಅವರಿಗೆ ಜವಾಬ್ದಾರಿ ವಹಿಸಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುರಾಯ್ ಮನಗೂಳಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮತ್ತು ಪಿಎಸ್‌ಐ ಮಹಾಂತೇಶ ಲುಂಬಿ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸ್ ಪೇದೆಗಳ ಬಂದೋಬಸ್ತ್ನಲ್ಲಿ ತೆರವುಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.