ಕಾವ್ಯದ ನಂತರವೇ ಸಿದ್ಧಾಂತಗಳ ಉಗಮ
Team Udayavani, Sep 26, 2017, 10:14 AM IST
ಬಸವಕಲ್ಯಾಣ: ಜಗತ್ತಿನ ಜ್ಞಾನಪರಂಪರೆಗಳು ಇರುವುದು ಕಾವ್ಯದಲ್ಲಿಯೆ. ಕಾವ್ಯ ಹುಟ್ಟಿದ ನಂತರವೇ ಸಿದ್ಧಾಂತಗಳ ಉಗಮವಾಗಿದೆ ಎಂದು ಮಹಾರಾಷ್ಟ್ರದ ಸಾಂಗ್ಲಿಯ ಕವಿ ಮಧು ಬಿರಾದಾರ ಹೇಳಿದರು.
ನಗರದ ನೀಲಾಂಬಿಕಾ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಾಗಿದ್ದ ಆಧುನಿಕ ಕನ್ನಡ ಕಾವ್ಯದ ತಾತ್ವಿಕ ನೆಲೆಗಳು ಕುರಿತ ಉಪನ್ಯಾಸ ಹಾಗೂ ದಸರಾ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಕನ್ನಡ ಅಸ್ಮಿತೆಯನ್ನು ಕಟ್ಟಿದ ನೆಲ ಕಲ್ಯಾಣ. ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಯ ಸಂದರ್ಭದಲ್ಲಿ ವಚನಗಳ ಬಹುಮುಖ ದಾಖಲೆಗಳಾಗುತ್ತಿವೆ ಎಂದರು. ಬಸವಣ್ಣನ ಲೋಕ ಚಿಂತನೆ, ಅಲ್ಲಮ ಕೊಟ್ಟ ಜಾಗತಿಕ ಜ್ಞಾನ, ಅಕ್ಕಮಹಾದೇವಿಯ ಮಹಿಳಾ ಚಿಂತನೆಯ ಧೋರಣೆಗಳು ಸಾಂಸ್ಕೃತಿಕ ಬಹುತ್ವದ ಆಯಾಮಗಳ ಮೂಲಕ ವಚನಗಳು ಕನ್ನಡ ಅಸ್ಮಿತೆಯನ್ನು ಕಟ್ಟಿವೆ. ಆತ್ಮಕ್ಕೆ ಸ್ಪಂದಿಸುವ ಕಾವ್ಯ ಸಾಕಷ್ಟು ಪ್ರತಿರೋಧ, ಸಂಘರ್ಷಗಳಲ್ಲಿಯೇ ಹುಟ್ಟುತ್ತವೆ. ಮಾತು, ಘೋಷಣೆಗಳು ಕೂಡ ಕನ್ನಡ ದಲಿತ ಬಂಡಾಯ ಘಟ್ಟದಲ್ಲಿ ಕವಿತೆಗಳಾದವು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರಿದ ಸದಸ್ಯೆ ಡಾ|ಜಯದೇವಿ ಗಾಯಕವಾಡ ಮಾತನಾಡಿ, ಕನ್ನಡ ನಾಡು-ನುಡಿಗೆ ಚ್ಯುತಿ ಬಂದಾಗ ಕನ್ನಡಿಗಡಿರೆಲ್ಲರೂ ಎದ್ದೇಳಬೇಕು. ಬಸವ ಸಂಸ್ಕೃತಿಯ “ಇವ ನಮ್ಮವ’ ಸಿದ್ಧಾಂತವನ್ನು ಎಲ್ಲ ಕನ್ನಡ ಸಂಘಟನೆಗಳು ಅನುಸರಿಸುವ ಮೂಲಕ ಸ್ಥಳೀಯ ಎಲ್ಲ ಬರಹಗಾರಿಗರಿಗೆ ಗೌರವಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸುರೇಶ ಅಕ್ಕಣ್ಣ ಮಾತನಾಡಿ, ಸಾಹಿತ್ಯ ಮನುಷ್ಯ ಪ್ರಜ್ಞೆಯನ್ನು ವಿಸ್ತರಿಸುವ ಸಾಧನವಾಗಿದೆ. ಬದುಕನ್ನು ಲೋಕವನ್ನು ಅರ್ಥೈಸಿಕೊಳ್ಳುವ ಮಹಾಮಾರ್ಗವಾಗಿದೆ ಎಂದರು. ಸಾಹಿತಿ ಪಂಚಾಕ್ಷರಿ ಹಿರೇಮಠ, ಕೊಪ್ಪಳದ ಸಾಹಿತಿ ಪ್ರವೀಣ ಪಾಟೀಲ ಮಾತನಾಡಿದರು.
ದಸರಾ ಕವಿಗೋಷ್ಠಿಯಲ್ಲಿ ಡಾ| ಜಯದೇವಿ ಗಾಯಕವಾಡ, ಹಣಮಂತರಾವ್ ವಿಸಾಜಿ, ಪಂಚಾಕ್ಷರಿ ಹಿರೇಮಠ, ಎಂ.ಆರ್.ಶ್ರೀಕಾಂತ, ನಾಗೇಂದ್ರ ಬಿರಾದಾರ, ವೀರಶೆಟ್ಟಿ ಪಾಟೀಲ, ಡಾ| ಶಿವಲೀಲಾ ಮಠಪತಿ, ರೇವಣಸಿದ್ದಪ್ಪ ದೊರೆಗಳು ಕವನ ವಾಚನ ಮಾಡಿದರು.
ಡಾ| ಬಿ.ಬಿ. ಕಾಳಗಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ, ಗುವಿವಿಯಿಂದ ಡಾಕ್ಟರೇಟ್ ಪಡೆದ ಡಾ| ಬಸವರಾಜ ಖಂಡಾಳೆ, ಡಾ| ಶಿವಲಿಲಾ ಮಠಪತಿ ಅವರನ್ನು ಇದೇ
ವೇಳೆ ಸನ್ಮಾನಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ರುದ್ರಮಣಿ ಮಠಪತಿ, ಉಪಾಧ್ಯಕ್ಷ ರಮೇಶ ಉಪಾಪುರೆ, ಮಾಜಿ ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ, ರತಿಕಾಂತ ಕೋಹಿನೂರ, ಶಂಕರಕುಕ್ಕಾ ಪಾಟೀಲ, ಗಂಗಾಧರ ಸಾಲಿಮಠ, ಬಸವಣ್ಣಪ್ಪ ನೇಲೋಗಿ, ಶಿವಕುಮಾರ ಜಡಗೆ ಉಪಸ್ಥಿತರಿದ್ದರು. ಭೀಮಾಶಂಕರ ಬಿರಾದಾರ ಸ್ವಾಗತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದೇವಿಂದ್ರ ಬರಗಾಲೆ ವಂದಿಸಿದರು. ರಾಜಕುಮಾರ ಹೂಗಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.