ಸಂಸ್ಕೃತಿ ಉಳಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ
Team Udayavani, Oct 29, 2021, 11:05 AM IST
ಬೀದರ: ಮಾಹಿತಿ ತಂತ್ರಜ್ಞಾನದ ಹೊಡೆತಕ್ಕೆ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಹಾಗೂ ಏಳ್ಗೆ ಕಾಣುತ್ತದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಮಹೇಶ ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಡೆದ ಜನಪದ ಕಲಾವಿದರ ಬಳಗದ 5ನೇ ವರ್ಷದ ವಾರ್ಷಿಕೋತ್ಸವ, ಜಿಲ್ಲಾ ಜನಪದ ಸಂಭ್ರಮ ಹಾಗೂ ಕನ್ನಡಕ್ಕಾಗಿ ನಾವು ಅಭಿಯಾನ ಅಂಗವಾಗಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ ಉಳಿಸಿ-ಬೆಳೆಸುವಲ್ಲಿ ವಿಜಯಕುಮಾರ ಸೋನಾರೆ ನೇತೃತ್ವದ ಕಲಾವಿದರ ಒಕ್ಕೂಟ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಮೂಲಕ ಮುಖ್ಯಮಂತ್ರಿಗಳು ಒಂದೇ ವೇದಿಕೆಯಡಿ ಏಕಕಾಲಕ್ಕೆ ಕನ್ನಡ ಗೀತ ಗಾಯನ ಕಾರ್ಯಕ್ರಮ ಆಯೋಜಿಸಿ ರುವುದು ಅಭಿನಂದನೀಯ. ಕನ್ನಡ ಭಾಷೆ ಉಳಿದಿರೆ, ಕನ್ನಡ ಹಾಗೂ ಕನ್ನಡಿಗರು ಮತ್ತು ಕರುನಾಡು ಉಳಿಯುತ್ತದೆ. ಕಲಾವಿದರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಜಿಲ್ಲೆಯ ಕಲಾವಿದರು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಅನೇಕ ಕಲಾ ಪ್ರಕಾರಗಳ ಕಾರ್ಯಕ್ರಮ ನೀಡುವ ನಿಜವಾದ ಕಲಾವಿದರಾಗಿದ್ದಾರೆ ಹೇಳಿದರು.
ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರಿಗೆ ಪ್ರಮಾಣಪತ್ರ ನೀಡಿ ಮೋಸ ಮಾಡುವ ಅನೇಕ ಸಂಸ್ಥೆಗಳು ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕಲಾವಿದರು ಕಾರ್ಯಕ್ರಮ ನೀಡುವ ಮುನ್ನ ಸಂಭಾವನೆ ನಿಗದಿ ಮಾಡಿಕೊಂಡು ಕಾರ್ಯಕ್ರಮ ಪ್ರಸ್ತುತ ಪಡಿಸಬೇಕು ಎಂದರು.
ಇದನ್ನೂ ಓದಿ: ರೌಡಿಕೊಲೆ: 11 ಮಂದಿ ಬಂಧನ
ಏಕತಾ ಫೌಂಡೇಶನ್ ಅಧ್ಯಕ್ಷ ರವಿ ಸ್ವಾಮಿ, ಹಿರಿಯ ಕಲಾವಿದ ಎಂ.ಜಿ. ಗಂಗನಪಳ್ಳಿ ಮಾತನಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕಲಾವಿದರಾದ ರಾಜೇಂದ್ರಸಿಂಗ್ ಪವಾರ, ರಾಮಲು ಗಾದಗಿ, ಕ.ಕ ಕಲಾವಿದರ ಒಕ್ಕೂಟದ ಸದಸ್ಯೆ ಲಲಿತಾ ಲೋಕು ಪವಾರ, ಉದ್ಯಮಿ ಅಮೋಸದಾಸ, ಸುನೀಲ ಭಾವಿಕಟ್ಟಿ, ಶಂಭುಲಿಂಗ ವಾಲ್ದೊಡ್ಡಿ, ಸೂರಜ್‌ಸಿಂಗ್ ರಾಜಪೂತ, ವೀರಭದ್ರಪ್ಪ ಉಪ್ಪಿನ, ಅಂಬರೀಶ ಹಸ್ಮಕಲ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಪ್ರತಿಜ್ಞಾವಿಧಿ ಬೋಧಿಸಿದರು. ಸುಧಾಕರ ಎಲ್ಲಾನೋರ್, ಸುನೀಲ ಕಡ್ಡೆ ನಿರೂಪಿಸಿದರು. ಯೇಸುದಾಸ ಅಲಿಯಂಬುರೆ ವಂದಿಸಿದರು.
ಮೆರವಣಿಗೆಗೆ ಕಲಾ ತಂಡಗಳ ಮೆರಗು
ಕನ್ನಡಾಂಬೆ ವೃತ್ತದಿಂದ ರಂಗ ಮಂದಿರದ ಸಭಾಂಗಣದವರೆಗೆ ನಡೆದ ಕಲಾ ತಂಡಗಳ ಮೆರವಣಿಗೆಗೆ ಔರಾದ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ವಿಜಯಕುಮಾರ ಜಾಧವ, ಪ್ರೊ| ಎಸ್.ವಿ. ಕಲ್ಮಠ, ವೀರಭದ್ರಪ್ಪ ಉಪ್ಪಿನ್ ಚಾಲನೆ ನೀಡಿದರು. ರಾಯಚೂರಿನ ಅಂಬರೀಶ ಹಸ್ಯಕಲ್ ತಂಡದ ಹಗಲುವೇಷ, ಬೀದರಿನ ಶೇಷಪ್ಪ ಚಿಟ್ಟಾ ತಂಡದ ಚರ್ಮವಾದ್ಯ, ಯಾದಗಿರಿಯ ಹಣಮಂತರಾಯ ದೇವರ್ಕಲ್ ತಂಡದ ಡೊಳ್ಳು ಕುಣಿತ, ಬೀದರನ ಅಜಯ ಯೇಸುದಾಸ ಅಲಿಯಂಬುರೆ ತಂಡದ ಮುಖವಾಡ ಮತ್ತು ಔರಾದನ ಪೈತ್ರಿ ಕುಣಿತ ಮೆರಗು ಹೆಚ್ಚಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.