ಮನುಷ್ಯ ಜನ್ಮದ ಮೂಲ ಉದ್ದೇಶ ಸತ್ಯಾನ್ವೇಷಣೆ: ಗಣೇಶಾನಂದ ಶ್ರೀ
Team Udayavani, Dec 17, 2018, 12:20 PM IST
ಭಾಲ್ಕಿ: ಮಾನವ ಜನ್ಮದ ಮೂಲ ಉದ್ದೇಶ ಸತ್ಯಾನ್ವೇಷಣೆಯಾಗಿದೆ. ಸತ್ಯದ ಅರಿವು ನಮಗಾಗಬೇಕಾದರೆ. ನಾವು ಸಂತರ ಸಂಗ ಮಾಡಬೇಕು ಎಂದು ಬೀದರ ಗುರುದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜರು ಹೇಳಿದರು.
ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಶಿವಾನಂದ ಕೈಲಾಸ ಆಶ್ರಮದಲ್ಲಿ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಮತ್ತು ಶ್ರೀ ಶಿವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಹೂವಿನ ಮೇಲಿನ ಪರಿಮಳ ಬಂದರೆ ಸುಗಂಧದ ಅರಿವಾಗುವಂತೆ ಸಂತರ ಸಂಗದ ಪರಿಮಳದಿಂದ ಸತ್ಯದ
ಅರಿವಾಗುವುದು. ಮನುಷ್ಯ ಜನ್ಮದ ಮೂಲ ಧೇಯ ಆತ್ಮ ಸಾಕ್ಷಾತ್ಕಾರ. ಈ ನಿಟ್ಟಿನಲ್ಲಿ ಪ್ರವೃರ್ತರಾಗಲು ಸಾಧು ಸಂತರ ಸೇವೆ ಮಾಡುತ್ತ ಸನ್ಮಾರ್ಗದಲ್ಲಿ ನಡೆಯಬೇಕು. ಸಂತರ ಮಾತುಗಳು ನಮ್ಮ ಬದುಕಿನಲ್ಲಿ ಪ್ರೇರಣೆ ನೀಡುತ್ತವೆ. ಹೀಗಾಗಿ ಸಂತರ ಸಂಗ ಬಯಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಳಚಾಪುರ ಶಂಭುಲಿಂಗಾಶ್ರಮದ ಶ್ರೀ ಸದ್ರೂಪಾನಂದ ಭಾರತಿ ಸ್ವಾಮಿಗಳು ಮಾತನಾಡಿ, ಯಾವುದನ್ನು ಕೇಳುವುದರಿಂದ ದ್ವೈತ ಪ್ರವೃತ್ತಿ ನಾಶವಾಗಿ ಅದ್ವೈತ್ವ ಪ್ರವೃತ್ತಿ ಉಂಟಾಗುವುದೋ ಅದೇ ನಿಜವಾದ ಶಾಸ್ತ್ರವಾಗಿದೆ. ಪಶ್ಚಾತಾಪದಿಂದ ಭಕ್ತಿ ಉಂಟಾಗುವುದು. ಆತ್ಮ ಪರಮಾತ್ಮನನ್ನು ಮರೆತಾಗಲೇ ಜೀವನದ ಅಧೋಗತಿಯಾಗುವುದು ಎಂದು ವಿಶ್ಲೇಷಿಸಿದರು.
ನೇತೃತ್ವ ವಹಿಸಿ ಮಾತನಾಡಿದ ಶ್ರೀ ನಾಗಯ್ಯ ಸ್ವಾಮಿಗಳು, ನಾವು ನಮ್ಮ ಅಜ್ಞಾನ, ಅಂಧಕಾರ ಕಳೆಯುವಂತಹ ಶಾಸ್ತ್ರ ಕೇಳಬೇಕು. ದ್ವೈತ ಬುದ್ಧಿನಾಶವಾಗುವ ಶಾಸ್ತ್ರ ಕೇಳುವುದರಿಂದ ಜೀವನೋಧಾರವಾಗುವುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಭೇದವಿದ್ದಲ್ಲಿ ದುಃಖವಿದೆ. ಅಭೇದವಿದ್ದಲ್ಲಿ ಸುಖವಿದೆ. ನಾವು ಯಾವುದಕ್ಕೂ ಭೇದಮಾಡದೇ ಸುಖಜೀವನ ಸಾಗಿಸಬೇಕು ಎಂದು ಹೇಳಿದರು.
ಪ್ರಸಾದ ದಾನಿಗಳಾದ ಬುಧೇರಾ ಗ್ರಾಮದ ಚಂದ್ರಪ್ಪ ಮಾನಾ, ಕಾಶಿನಾಥ ಮಾನಾ, ವಿಶ್ವನಾಥ ಮಾನಾ, ಬಸವರಾಜ ಮಾನಾ ಮತ್ತು ಕಲಬುರಗಿಯ ಅಕ್ಕಮಹಾದೇವಿ ಸಂಜೀವಕುಮಾರ ಪಡಶೆಟ್ಟಿ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ವೈಜಿನಾಥಪ್ಪ ಕನಕಟ್ಟೆ, ಮಲ್ಲಿಕಾರ್ಜುನ ವೀರಶೆಟ್ಟೆ, ಡಿ.ಕೆ. ಗಣಪತಿ, ಡಾ| ಸುಭಾಷ ಅಂಬೆಸಿಂಗಿ, ಸಂಜುಕುಮಾರ ಬಿರಾದಾರ, ಶಿವರಾಜ ಶರಗಾರ, ತೇಜಮ್ಮ ಸುಭಾಷ ಬಾಯಪ್ನೋರ, ವಿಜಯಕುಮಾರ ಬಾಯಪ್ನೋರ, ರಾಜಕುಮಾರ ನಾಗನಾಥರಾವ ಪಾಟೀಲ, ಸಿರಾಮಪ್ಪ ವಡ್ಡಿ ಇದ್ದರು. ವೈಜಿನಾಥಪ್ಪ ದಾಬಶೆಟ್ಟಿ ಸ್ವಾಗತಿಸಿದರು. ರಮೇಶ ಶ್ರೀಮಂಡಲ ನಿರೂಪಿಸಿದರು. ಶಾಮರಾವ ಮಂದಕನಳ್ಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.