ಅರಿಯಬೇಕಿದೆ ದೇಶದ ನೈಜ ಇತಿಹಾಸ; ವಿಶಾಲ ಸ್ವಾಮಿ
ಇಂದಿನ ದಿನಗಳಲ್ಲಿ ಯುವಕರು ಆಧುನಿಕ ಉಪಕರಣಗಳಿಗೆ ಅಂಟಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ
Team Udayavani, May 23, 2022, 5:52 PM IST
ಹುಮನಾಬಾದ: ಸನಾತನ ಸಂಸ್ಕೃತಿ ಉಳಿಸಿಕೊಂಡು ದೇಶ ಮುನ್ನಡೆಯುತ್ತಿರುವುದರಿಂದ ದೇಶದ ಅಖಂಡತೆ ಇಂದಿಗೂ ಉಳಿದುಕೊಂಡು ಬಂದಿದೆ. ಅನೇಕ ಇತಿಹಾಸಕಾರರು ಸತ್ಯವನ್ನು ಮುಚ್ಚಿಟ್ಟ ಪರಿಣಾಮ ಇಂದಿನ ಯುವ ಜನತೆಗೆ ಭಾರತದ ಇತಿಹಾಸದ ಸತ್ಯವೇ ಗೊತ್ತಿಲ್ಲದಂತಾಗಿದೆ ಎಂದು ವಿಶಾಲ ಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಎದುರಿಗೆ ಭಾನುವಾರ ಮುಂಜಾನೆ ಕ್ರೀಡಾ ಭಾರತಿ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ಸ್ವರಾಜ್ಯ-75ರ ಭಾರತ ಪ್ರದಕ್ಷಣೆ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹಿಂದಿನ ಕಾಲದಿಂದಲೂ ಭಾರತ ವಿಶ್ವಗುರುವಾಗಿ ಗುರುತಿಸಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಹಿರಿಮೆ ಪಡೆದುಕೊಂಡಿತ್ತು. ಕಾರಣ ಅನೇಕರು ಭಾರತದ ಮೇಲೆ ದಾಳಿ ನಡೆಸಿ ಆಳ್ವಿಕೆ ಮಾಡಿದರು. ಸ್ವರಾಜ್ಯದ ಹೆಸರಿನಲ್ಲಿ ಹೋರಾಟಗಳು ನಡೆಸಿ ಮತ್ತೆ ಭಾರತ ಸ್ವಾಂತಂತ್ರ್ಯ ಪಡೆದುಕೊಂಡರು ಕೂಡ ನಾವುಗಳು ಮಾತ್ರ ಭಾರತದ ಇತಿಹಾಸದ ಸತ್ಯ ಘಟನೆಗಳು ತಿಳಿದುಕೊಂಡಿಲ್ಲ. ದೇಶದ ಹಾಗೂ ವಿದೇಶದ ಲೇಖಕರು ಬರೆದ ಇತಿಹಾಸವನ್ನೇ ಇಂದಿಗೂ ನಾವುಗಳು ಅದನ್ನೆ ಸತ್ಯ ಎಂದು ತಿಳಿದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂದಿನ ಯುವ ಶಕ್ತಿ ಭಾರತದ ನೈಜ ಇತಿಹಾಸದ ಕುರಿತು ತಿಳಿದುಕೊಂಡು ಮುಂದಿನ ಪಿಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಕ್ರೀಡಾ ಭಾರತಿ ಉತ್ತರ ಪ್ರಾಂತ ಸಂಯೋಜಕ ಅಶೋಕ ಕೊಡಗನೂರ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಆಧುನಿಕ ಉಪಕರಣಗಳಿಗೆ ಅಂಟಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾರಣ ಯುವಕರು ದೈಹಿಕ ಚುಟವಟಿಕೆಗಳಲ್ಲಿ ಭಾಗವಹಿಸಬೇಕು. ಆಟದ ಮೈದಾನ, ಕ್ರೀಡಾಂಗಣಗಳ ಕಡೆಗೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು. ಯುವಕರು ದೈಹಿಕವಾಗಿ ಸದೃಢರಾಗಬೇಕು ಎಂಬ ನಿಟ್ಟಿನಲ್ಲಿ ಈ ಬೈಕ್ ರ್ಯಾಲಿ ನಡೆಯಲ್ಲಿದೆ. ದೇಶ 570
ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ನಡೆಯಲ್ಲಿದೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ವಿನಾಯಕ ಮಂಡಾ ರಾಷ್ಟ್ರಧ್ವಜಾರೋಹಣ ಮಾಡಿದರು. ಪುರಸಭೆ ಸದಸ್ಯ ಸುನೀಲ್ ಪಾಟೀಲ್ ಸೇರಿದಂತೆ ಅನೇಕರು ಭಾರತ ಮಾತೆ ಹಾಗೂ ಹನುಮಂತನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವೀರಭದ್ರೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರದಾರ ಪಟೇಲ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಬೈಕ್ ರ್ಯಾಲಿ ಕಲಬುರಗಿ ಜಿಲ್ಲೆ ಕಡೆಗೆ ಸಾಗಿತು. ಶ್ರೀನಿವಾಸ ದಸಪಳ್ಳಿ, ಬಸವ ಹಿರೇಮಠ, ಗೋಪಾಲಕೃಷ್ಣ ಮೋಹಳೆ, ಅಭಿಷೇಕ, ಜ್ಯೋತಿಬಾ ಸಾಟೆ, ದಿನೇಶರೆಡ್ಡಿ, ಶೈಲೇಶ ಚವ್ಹಾಣ, ಆದಿತ್ಯ ಖಮಿತ್ಕರ್, ಡಿ.ಎನ್. ಪತ್ರಿ, ಅನಿಲ ಪಲ್ಲೆರಿ, ಶಿವಕುಮಾರ ಧುಮ್ಮನಸೂರ, ಲಕ್ಷ್ಮೀಕಾಂತ ಹಿಂದೊಡ್ಡಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.