ಶಿಕ್ಷಕ ವೃತ್ತಿಯಿಂದ ಸಿಗಲಿದೆ ಸಂತೃಪ್ತಿ ಭಾವ; ಸಿಂಧೆ
ಉತ್ತಮ ಸೇವೆ ನೀಡುವ ಮೂಲಕ ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿರುವುದ ಹೆಮ್ಮೆಯ ಸಂಗತಿ
Team Udayavani, Jan 23, 2021, 4:31 PM IST
ಬೀದರ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರತೆಯಿಂದ ಕೂಡಿದೆ. ಮಕ್ಕಳಿಗೆ ನೀಡುವ ಶಿಕ್ಷಣದಿಂದ ಅವರು ತಮ್ಮ ಬದುಕಿನಲ್ಲಿ ಅಗಾಧವಾದ ಸಾಧನೆ ಮಾಡುತ್ತಾರೆ. ಶಿಕ್ಷಕ ತನ್ನ ವಿದ್ಯಾರ್ಥಿಗಳು ಸಾಧನೆ ಕಂಡು ಸಂತೃಪ್ತಿ ಪಡುತ್ತಾನೆ. ಒಬ್ಬ ವಿದ್ಯಾರ್ಥಿಯ ಸಾಧನೆಯಲ್ಲಿ ಆತನಿಗೆ ಮಾದರಿ ಅನಿಸಿರುವ ಶಿಕ್ಷಕನ ಪ್ರಭಾವ ಹೆಚ್ಚಿರುತ್ತದೆ ಎಂದು ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಇನಾಯತ್ ಸಿಂಧೆ ಹೇಳಿದರು.
ತಾಲೂಕಿನ ಕಾಡವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಡಾ| ಟಿ.ಆರ್. ದೊಡ್ಡೆ ಅವರು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಪದನೋತ್ತಿ ಹೊಂದಿದ ಹಿನ್ನೆಲೆ
ನಡೆದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ| ಟಿ.ಆರ್.ದೊಡ್ಡೆ ಅವರು ತಮ್ಮ ವೃತ್ತಿ ಜೀವನದ ಜವಾಬ್ದಾರಿಯನ್ನು
ಪ್ರಮಾಣಿಕವಾಗಿ ನಿರ್ವಹಿಸಿದ್ದಾರೆ. ಅವರು ವಿವಿಧ ಅ ಧಿಕಾರಿ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಆಡಳಿತ ನೀಡಿದ್ದಾರೆ ಎಂದರು.
ಶಿಕ್ಷಣಾಧಿಕಾರಿ ಡಾ| ಟಿ.ಆರ್. ದೊಡ್ಡೆ ಮಾತನಾಡಿ, ಶಿಕ್ಷಕ ವೃತ್ತಿ ನನಗೆ ತುಂಬಾ ಸಂತೋಷ ಮತ್ತು ತೃಪ್ತಿ ತಂದಿದೆ. ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆತು ಪಾಠ
ಮಾಡುವ ಸಮಯದಲ್ಲಿ ದೊರೆಯುವ ಆನಂದ, ಅ ಧಿಕಾರಿಯಾಗಿದ್ದಾಗ ಸಿಗುವುದಿಲ್ಲ. ಶಾಲೆಯ ಹಳೆ ವಿದ್ಯಾರ್ಥಿ ಮಲ್ಲಿಕಾರ್ಜುನ ಟಂಕಸಾಲೆ ದೈಹಿಕ ಶಿಕ್ಷಣ
ಶಿಕ್ಷಕನಾಗಿ ರಾಜ್ಯಾದ್ಯಂತ ಉತ್ತಮ ಸೇವೆ ನೀಡುವ ಮೂಲಕ ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿರುವುದ ಹೆಮ್ಮೆಯ ಸಂಗತಿ ಎಂದರು.
ಶಾಲಾ ಆವರಣದಲ್ಲಿ ನೂತನ ಶಟಲ್ ಬ್ಯಾಡ್ಮಿಂಟನ್ ಅಂಕಣವನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟರಾವ ಡೊಂಬಾಳೆ ಉದ್ಘಾಟಿಸಿದರು. ಔರಾದ
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸಿಂಗೆ, ಯನಗುಂದಾ ಪ್ರೌಢಶಾಲೆಯ ಶಿಕ್ಷಕ ಚಂದ್ರಕಾಂತ ನಿರ್ಮಳೆ ಮಾತನಾಡಿದರು. ಶಾಲೆಯ
ಪ್ರಭಾರಿ ಮುಖ್ಯಗುರು ಬಾಬುರಾವ ರಾಯಪಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಜಗನ್ನಾಥ ಮೂಲಗೆ, ಸಂಜೀವಕುಮಾರ ಸೂರ್ಯವಂಶಿ, ದಿಲೀಪರಾವ ಬಿರಾದಾರ, ಅನಿಲ ಕರಂಜೆ, ಶಿವಾಜಿರಾವ ಬೆಂಜರವಾಡೆ, ಶಾಮಸುಂದರ ಖಾನಾಪುರಕರ್, ಮಲ್ಲಿಕಾರ್ಜುನ ಟಂಕಸಾಲೆ, ಗೋಪಾಲರಡ್ಡಿ, ಲಕ್ಷ್ಮಣರಾವ ನಿಡಗುಂದೆ, ಮಾಣಿಕರಾವ ಟಂಕಸಾಲೆ, ಅಂಜಲಿ ದೇವದಾಸ, ಅನಿತಾ ತುಮ್ಮಕುಂಟೆ, ನಾಜಿಮಾ, ಸುರ್ವಣಾ ಮೇತ್ರೆ, ಸುನೈನಾ ವಿನಾಯಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.