ಹುಮನಾಬಾದ ವೀರಭದ್ರೇಶ್ವರ ರಥೋತ್ಸವ ವೈಭವ
Team Udayavani, Jan 28, 2019, 9:30 AM IST
ಹುಮನಾಬಾದ: ನಗರದಲ್ಲಿ ರವಿವಾರ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ, ಸರ್ವಧರ್ಮ ಸಮನ್ವಯತೆ ಖ್ಯಾತಿಯ ಶ್ರೀ ವೀರಭದ್ರೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಪಲ್ಲಕ್ಕಿ ಉತ್ಸವದೊಂದಿಗೆ ಆಗಮಿಸಿದ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಅವರನ್ನು ಭಕ್ತರು ವಾದ್ಯವೃಂದದೊಂದಿಗೆ ರಥದತ್ತ ಕರೆತಂದರು. ರಥದ ಮುಂಭಾಗದ ಮಂಟಪದಲ್ಲಿ ಬೈವೇದ್ಯಕ್ಕಾಗಿ ಇಡಲಾದ ಎಳ್ಳಿನ ಹೋಳಿಗೆ, ಜೋಳದ ಅನ್ನ ಮೊದಲಾದವುಗಳ ಮೇಲೆ ಹಾಯ್ದು ಸ್ವಾಮೀಜಿ ರಥದಲ್ಲಿ ಆಸೀನರಾಗುತ್ತಿದ್ದ ಹಾಗೆ ಭಕ್ತರಿಂದ ಶ್ರೀ ವೀರಭದ್ರೇಶ್ವರ ಮಹಾಜರಾಕೀ ಜೈ ಎಂಬ ಘೋಷಣೆ ಮುಗಿಲುಮುಟ್ಟಿತು. ಬಳಿಕ ಕಲಬುರಗಿ ಜಿಲ್ಲೆಯ ಶರಣಬಸಪ್ಪ ಕಲ್ಯಾಣಿ ಅವರು ರಥ ಹತ್ತಿದ್ದಾಗ ಭಕ್ತರಿಂದ ಕರತಾಡನ ಕೇಳಿಸುತಿದ್ದಂತೆ ರಥೋತ್ಸವ ಆರಂಭಗೊಂಡಿತು.
ಭಕ್ತರು ರಥದತ್ತ ಬಾಳೆಹಣ್ಣು, ಪೇಡಾ, ಖಾರಿಕ ಮೊದಲಾದ ಸಿಹಿ ತಿನಿಸು ಸಮರ್ಪಿಸಿದರೆ ಇನ್ನೂ ಕೆಲವರು ಹಣವನ್ನು ರಥಕ್ಕೆ ಸಮರ್ಪಿಸಿ ಭಕ್ತಿಸೇವೆ ಸಲ್ಲಿಸಿದರು. ಅಲ್ಲದೇ ವೀರಭದ್ರೇಶ್ವರ ಸ್ವಾಮಿ ಕೃಪೆಯಿಂದ ತಮ್ಮ ಇಷ್ಟಾರ್ಥ ಈಡೇರಿದ್ದಕ್ಕೆ ಭಕ್ತಾದಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಹರಿಕೆ ತೀರಿಸಿದರು.
ರಥವು ಹಳೆ ತಹಶೀಲ್ದಾರ್ ಕಚೇರಿ ಮುಂಭಾಗದ ಬಸವಣ್ಣ ಕಟ್ಟೆ ತಲುಪಿದ ನಂತರ ವೀರಭದ್ರೇಶ್ವರ ಪಲ್ಲಕಿಯನ್ನು ದೇವಸ್ಥಾನ ಕಟ್ಟೆ ಹತ್ತಿಸಿದಾಗ, ಸ್ವಾಮೀಜಿ ಭಕ್ತರತ್ತ ಎಸೆದ ಪ್ರಸಾದ ಹಿಡಿಯಲು ಭಕ್ತರು ಮುಂದಾದರು.
ಸಚಿವರಿಂದ ಕಲಾ ಪ್ರದರ್ಶನ ವೀಕ್ಷಣೆ: ರಥೋತ್ಸವ ಆರಂಭಕ್ಕೆ ಮುನ್ನ ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀ ಆದಿಶಕ್ತಿ ಮಹಿಳಾ ಡೊಳ್ಳು ಕುಣಿತ ತಂಡದ ನೃತ್ಯ, ಸೊನ್ನಲಪುರದ ಜೋಡುಕುದುರೆ ನೃತ್ಯ, ಬೊಂಬೆ ಕುಣಿತ, ನಂದಿಕೋಲು ಕುಣಿತವನ್ನು ಸಚಿವ ರಾಜಶೇಖರ ಪಾಟೀಲ ವೀಕ್ಷಿಸಿ, ಕಲಾತಂಡಗಳನ್ನು ಪ್ರೋತ್ಸಾಹಿಸಿದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಹಶೀಲ್ದಾರ್ ದೇವೇಂದ್ರ ಪಾಣಿ, ಪಿಕೆಪಿಎಸ್ ಅಧ್ಯಕ್ಷ ಶರಣಪಗೌಡ ಪಾಟೀಲ, ಜಿಲ್ಲಾ ಸಹಕಾರ ಬ್ಯಾಂಕ್ ಉಪಧ್ಯಕ್ಷ ಭೀಮರಾವ ಪಾಟೀಲ, ಅಗ್ನಿಕುಂಡ ಸಮಿತಿ ಅಧ್ಯಕ್ಷ ಡಿ.ಆರ್. ಚಿದ್ರಿ, ಪಲ್ಲಕ್ಕಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಳಶಟ್ಟಿ ಇದ್ದರು. ಇದೇ ವೇಳೆ ಜಾತ್ರಾ ಉತ್ಸವ ಯಶಸ್ಸಿಗೆ ಶ್ರಮಿಸಿದವರನ್ನು ಸಚಿವ ರಾಜಶೇಖರ ಪಾಟೀಲ ಸನ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.